ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಜೂನ್ 21 ರಿಂದ ಕೇಂದ್ರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆಗಳನ್ನು ರಾಜ್ಯಗಳಿಗೆ ಒದಗಿಸಲಿದೆ ಎಂದು ಹೇಳಿದರು.
'ಭಾರತ ಸರ್ಕಾರವೇ ಲಸಿಕೆ ತಯಾರಕರಿಂದ ಒಟ್ಟು ಲಸಿಕೆ ಉತ್ಪಾದನೆಯ ಶೇ.75ರಷ್ಟನ್ನು ಖರೀದಿಸಲಿದೆ ಮತ್ತು ಅದನ್ನು ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡಲಿದೆ' ಎಂದು ಪ್ರಧಾನಿ ಮೋದಿ ಘೋಷಿಸಿದರು.
'ಲಸಿಕೆ ರಾಜಕೀಯ'ದಲ್ಲಿ ತೊಡಗಿರುವ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಹರಿಹಾಯ್ದಿದ್ದಾರೆ. 'ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿರುವ ಮಧ್ಯೆ, ಕೇಂದ್ರ ಸರ್ಕಾರದ ಮುಂದೆ ವಿಭಿನ್ನ ಸಲಹೆಗಳು ಬರಲು ಪ್ರಾರಂಭಿಸಿದವು, ವಿಭಿನ್ನ ಬೇಡಿಕೆಗಳನ್ನು ಇಡಲು ಪ್ರಾರಂಭಿಸಲಾಯಿತು,' ಎಂದು ವಿವಿಧ ರಾಜ್ಯ ಸರ್ಕಾರಗಳ ವಿಕೇಂದ್ರೀಕರಣದ ಬೇಡಿಕೆಗಳನ್ನು ಉಲ್ಲೇಖಿಸಿ ಮೋದಿ ಹೇಳಿದರು.
ಲಸಿಕೆಯ ವಯಸ್ಸಿನ ಮಿತಿಯನ್ನ ಕೇಂದ್ರವು ನಿರ್ಧರಿಸುತ್ತಿರುವ ಬಗ್ಗೆ ವಿರೋಧವಿದೆ ಎಂದು ಪ್ರಧಾನಿಗಳು,
'ಈ ವರ್ಷದ ಜನವರಿ 16ರಿಂದ ಏಪ್ರಿಲ್ ಅಂತ್ಯದವರೆಗೆ ಭಾರತದ ಲಸಿಕೆ ಕಾರ್ಯಕ್ರಮವು ಮುಖ್ಯವಾಗಿ ಕೇಂದ್ರ ಸರ್ಕಾರದ ಮೇಲ್ವಿಚಾರಣೆಯಲ್ಲಿ ನಡೆಯಿತು. ಎಲ್ಲರಿಗೂ ಉಚಿತ ಲಸಿಕೆ ನೀಡುವ ಹಾದಿಯಲ್ಲಿ ದೇಶ ಮುನ್ನಡೆಯುತ್ತಿದೆ. ದೇಶದ ನಾಗರಿಕರು ಶಿಸ್ತನ್ನು ಅನುಸರಿಸಿ, ತಮ್ಮ ಸರದಿ ಬಂದಾಗ ಲಸಿಕೆಯನ್ನು ಪಡೆಯುತ್ತಿದ್ದರು' ಎಂದರು
'ಆದಾಗ್ಯೂ, ಇನ್ನು ಮೇಲೆ, ರಾಜ್ಯಗಳೊಂದಿಗೆ ಲಸಿಕೆಗೆ ಸಂಬಂಧಿಸಿದ ಕೆಲಸದ ಶೇ.25ರಷ್ಟು ಜವಾಬ್ದಾರಿಯನ್ನು ಭಾರತ ಸರ್ಕಾರವೂ ಹೊರಲು ನಿರ್ಧರಿಸಲಾಗಿದೆ. ಈ ವ್ಯವಸ್ಥೆಯನ್ನು ಮುಂಬರುವ 2 ವಾರಗಳಲ್ಲಿ ಜಾರಿಗೆ ತರಲಾಗುವುದು' ಎಂದು ಪ್ರಧಾನಿ ಮೋದಿ ಹೇಳಿದರು.
ಈ ಎರಡು ವಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಹೊಸ ಮಾರ್ಗಸೂಚಿಗಳ ಪ್ರಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತವೆ ಎಂದು ಪ್ರಧಾನಿ ಹೇಳಿದರು.
ಸಾಂಕ್ರಾಮಿಕ ರೋಗದ ನಡುವೆ ೮೦ ಕೋಟಿ ಜನರಿಗೆ ಉಚಿತ ಪಡಿತರವನ್ನು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ದೀಪಾವಳಿವರೆಗೆ ವಿಸ್ತರಿಸಲಾಗಿದೆ ಎಂದು ಮೋದಿ ಘೋಷಿಸಿದರು.
No comments:
Post a Comment