ಪೊಲೀಸರ ಪ್ರಕಾರ, ಈ ಘಟನೆ ಶುಕ್ರವಾರ ನಡೆದಿದೆ. ಆದಾಗ್ಯೂ, ಸ್ಫೋಟಕ್ಕೆ ಕಾರಣವಾದ ಸಾಧನವು ಪವರ್ ಬ್ಯಾಂಕ್ ಅಥವಾ ಇನ್ನಾವುದೇ ಎಲೆಕ್ಟ್ರಾನಿಕ್ ಸಾಧನವೇ ಎಂಬುದು ಇನ್ನೂ ಸಾಬೀತಾಗಿಲ್ಲ.ಮೃತ ರಾಮ್ ಸಾಹಿಲ್ ಪಾಲ್ ಅವರು ಶುಕ್ರವಾರ ತಮ್ಮ ಜಮೀನಿಗೆ ಹೋಗುವಾಗ ರಸ್ತೆಯ ಮೇಲೆ ಬಿದ್ದಿದ್ದ ಪವರ್ ಬ್ಯಾಂಕ್ ನ್ನು ಎತ್ತಿಕೊಂಡಿದ್ದಾರೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಭಾರ್ತಿ ಜಾಟ್ ತಿಳಿಸಿದ್ದಾರೆ. ಈ ಘಟನೆ ಉಮರಿಯಾದ ಮನ್‌ಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ.
ರಾಮ್ ತನ್ನ ನೆರೆಯ ಮನೆಗೆ ಹೋಗಿ ತನ್ನ ಮೊಬೈಲ್ ಅನ್ನು ಆ ಪವರ್ ಬ್ಯಾಂಕ್ ಗೆ ಪ್ಲಗ್ ಮಾಡಿದಾಗ, ದೊಡ್ಡ ಸ್ಫೋಟ ಸಂಭವಿಸಿದೆ ಎಂದು ಅವರು ಹೇಳಿದರು. ಗ್ರಾಮಸ್ಥರ ಹೇಳಿಕೆಗಳ ಪ್ರಕಾರ, ತೀವ್ರವಾಗಿ ಗಾಯಗೊಂಡಿದ್ದರಿಂದ, ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಸ್ಥಳದಿಂದ ಸಿಕ್ಕಿದ ಸಾಧನವನ್ನು ಪವರ್ ಬ್ಯಾಂಕ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಸಾಧನವೇ ಎಂದು ನಿರ್ಧರಿಸಲು ಫೋರೆನ್ಸಿಕ್ ಸೈನ್ಸ್ ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಇಲ್ಲಿಯವರೆಗೆ ನಡೆಸಿದ ತನಿಖೆಯಲ್ಲಿ ಅದು ಸ್ಫೋಟಕವಲ್ಲ ಎಂದು ತಿಳಿದುಬಂದಿದೆ. ಯುವಕನ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment