Thursday, 3 June 2021

ಮನೆದ್ದುಗಳ ಮೂಲಕ ʼರೋಗ ನಿರೋಧಕʼ ಶಕ್ತಿ ಹೆಚ್ಚಿಸಲು ಇಲ್ಲಿದೆ ಟಿಪ್ಸ್ .

ಕೊರೋನಾ ಲಕ್ಷಣಗಳಿದ್ದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ ನೀವು ಈ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು.

ಮೈ ಕೈ ನೋವು, ಉರಿ ಇದ್ದರೆ ಶ್ರೀಗಂಧ ತೇದು ನೀರಿಗೆ ಸೇರಿಸಿ ಕುದಿಸಿ ಕುಡಿಯಿರಿ. ಕಫದ ಲಕ್ಷಣವಿದ್ದರೆ ಶುಂಠಿಯನ್ನು ಜಜ್ಜಿ ನೀರಿನಲ್ಲಿ ನೆನೆಸಿ ಮರುದಿನ ಬೆಳಗ್ಗೆ ಕುದಿಸಿ ಕುಡಿಯಿರಿ. ಅತಿಮಧುರ ಪುಡಿಯನ್ನು ಜೇನಿನಲ್ಲಿ ಕಲಸಿ ಕುಡಿಯುವುದು ಮತ್ತೂ ಒಳ್ಳೆಯದು.

ವಿಪರೀತ ಸುಸ್ತು, ಮೈ ಕೈ ನೋವು ಇದ್ದರೆ ನೆಲ್ಲಿಕಾಯಿಯನ್ನು ತುಪ್ಪದಲ್ಲಿ ಕಲೆಸಿ ನೆಕ್ಕಿ, ಬಳಿಕ ಬಿಸಿನೀರು ಕುಡಿಯಿರಿ. ಒಣದ್ರಾಕ್ಷಿ ನೀರಿನಲ್ಲಿ ನೆನೆಸಿ ತಿನ್ನುವುದರಿಂದ ಹಾಗೂ ಒಣಹಣ್ಣುಗಳ ಸೇವೆಯಿಂದಲೂ ಸುಸ್ತನ್ನು ನಿವಾರಿಸಬಹುದು.

ಹಸಿವೆಯಾಗುತ್ತಿಲ್ಲ, ಹುಳಿತೇಗು ಬರುತ್ತಿದೆ ಎಂದಾದರೆ ಈರುಳ್ಳಿಯನ್ನು ಬೇಯಿಸಿ. ಉಪ್ಪು, ನಿಂಬೆರಸ ಬೆರೆಸಿ, ತುಪ್ಪ, ಸಾಸಿವೆ ಜೀರಿಗೆ ಹಾಗೂ ಇಂಗಿನ ಒಗ್ಗರಣೆ ಕೊಡಿ. ಅನ್ನದೊಂದಿಗೆ ಕಲೆಸಿ ಊಟ ಮಾಡಿ. ಇವುಗಳನ್ನು ಸೇವಿಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...