ನಾಯಕನಹಟ್ಟಿಯಲ್ಲಿ ಶುಕ್ರವಾರ ತಾಸಿಲ್ದಾರ ಮಲ್ಲಿಕಾರ್ಜುನ ತಹಸಿಲ್ದಾರ್ ಮಲ್ಲಿಕಾರ್ಜುನ ದೇವಾಲಯ ಸಿಬ್ಬಂದಿ ಹಾಗೂ ನೌಕರರಿಗೆ ಆಹಾರಗಳನ್ನು ವಿತರಿಸಿದರು. |
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ, ತಾಲೂಕಿನ ನಾಲ್ಕು
ಕಡೆ ಕರೋನ ಕೇರ್
ಸೆಂಟರುಗಳಲ್ಲಿ 205 ಜನ ದಾಖಲಾಗಿದ್ದಾರೆ. ಚಳಕೆರೆ ತಾಲೂಕು ಆಸ್ಪತ್ರೆಯಲ್ಲಿ 51,ದಾಖಲಾಗಿದ್ದಾರೆ. ಒಟ್ಟಾರೆ ನಾಯಕನಹಟ್ಟಿ ಪಟ್ಟಣದಲ್ಲಿ 11 ಪ್ರಕರಣಗಳಿವೆ. ಸೋಂಕು ಕಡಿಮೆಯಾಗುತ್ತದೆ ಎನಿಸಿದರು ಜನರು
ಜಾಗರೂಕರಾಗಿರಬೇಕು. ಕರೋನ ಸಂಕಷ್ಟ ಸಮಯದಲ್ಲಿ ಪೌರಸೇವಾ ನೌಕರರಿಗೆ ದೇವಾಲಯದ
ವತಿಯಿಂದ ಆಹಾರದ ಕಿಟ್ಗಳನ್ನು ವಿತರಿಸಲಾಗಿದೆ ಎಂದರು.
ದೇವಾಲಯದ
ಇ
ಒ ಮಂಜುನಾಥ್ ಬಿ ವಾಲಿ ಮಾತನಾಡಿ, ಸಿ ದರ್ಜೆ ದೇವಾಲಯಗಳ ಅರ್ಚಕರಿಗೆ ಹಾಗೂ ಸಿಬ್ಬಂದಿಗಳಿಗೆ ಆಹಾರದ ಕಿಟ್ಗಳನ್ನು ವಿತರಿಸುವಂತೆ ಆದೇಶ ನೀಡಿದ, ಹಿನ್ನೆಲೆಯಲ್ಲಿ ಮೊಳಕಾಲ್ಮೂರು, ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲೂಕಿನ ಸಿ
ದರ್ಜೆಯ ಸಿಬ್ಬಂದಿ ಹಾಗೂ ಅರ್ಚಕರಿಗೆ ಒಟ್ಟು 250 ಕಿಟ್ಗಳನ್ನು ವಿತರಿಸಲಾಗಿದೆ ಎಂದರು.
ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಕೋಡಿ ಭೀಮರಾಯ, ರಾಜಸ್ವ ನಿರೀಕ್ಷಕ ಚೇತನ್, ಆರೋಗ್ಯ ನಿರೀಕ್ಷಕ ರುದ್ರಮುನಿ, ದೇವಾಲಯದ ಸಿಬ್ಬಂದಿ ಸತೀಶ್ ಮತ್ತಿತರರಿದ್ದರು.
No comments:
Post a Comment