Tuesday, 8 June 2021

ಬಳ್ಳಾರಿ | ಇಂದಿನ ಕೋವಿಡ್ ಪ್ರಕರಣಗಳ ತಾಲ್ಲೂಕುವಾರು ಮಾಹಿತಿ !


ಬಳ್ಳಾರಿ: ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್‍ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.ಜಿಲ್ಲೆಯಲ್ಲಿ ಕೋವಿಡ್‍ನಿಂದ 369 ಜನ ಗುಣಮುಖರಾಗಿದ್ದು ದಿನದಿಂದ ದಿನಕ್ಕೆ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಟ್ಟು ಗುಣಮುಖರ ಸಂಖ್ಯೆ 88153 ಕ್ಕೆ ಏರಿಕೆ ಕಂಡಿದೆ.


ಹೊಸದಾಗಿ ಇಂದು(ಮಂಗಳವಾರ) 212 ಕೊರೊನಾ ಪ್ರಕರಣಗಳು ದೃಡಪಟ್ಟಿದ್ದು ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 94423 ಕ್ಕೇರಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಹೊಸದಾಗಿ ಬಳ್ಳಾರಿ 44 , ಸಂಡೂರು 19, ಸಿರಗುಪ್ಪ 17, ಕೂಡ್ಲಿಗಿ 12, ಹಡಗಲಿ 21, ಹೊಸಪೇಟೆ 67, ಹಗರಿಬೊಮ್ಮನಹಳ್ಳಿ 23, ಹರಪನಹಳ್ಳಿ 7 ಹಾಗೂ ಹೊರ ಜಿಲ್ಲೆಯ 2 ಪ್ರಕರಣಗಳು ದಾಖಲಾಗಿವೆ.



ಮಂಗಳವಾರ 4 ಜನರು ಕೋವಿಡ್‍ನಿಂದ ಮೃತಪಟ್ಟಿದ್ದು, ಇದರಿಂದ ಮೃತರ ಸಂಖ್ಯೆ 1423 ಕ್ಕೆ ಏರಿಕೆಯಾಗಿದೆ ಮತ್ತು ಜಿಲ್ಲೆಯಲ್ಲಿ ಒಟ್ಟು 5847 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...