ಕೊರೊನಾ ವೈರಸ್ ವಿರುದ್ಧ ಲಸಿಕೆಯ ಅಸ್ತ್ರವನ್ನ ಬಳಕೆ ಮಾಡುತ್ತಿರುವ ಅಮೆರಿಕ ಕಳೆದ ಅನೇಕ ದಿನಗಳಿಂದ ದೇಶದ ಪ್ರಜೆಗಳಿಗೆ ಲಸಿಕೆಯನ್ನ ನೀಡುತ್ತಿದೆ. ಆದರೆ ಇದೀಗ ಕೊರೊನಾ ಲಸಿಕೆ ಅಭಿಯಾನಕ್ಕೆ ಜನರಿಂದ ಪ್ರತಿಕ್ರಿಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ವಾಷಿಂಗ್ಟನ್ನಲ್ಲಿ ಜನರಲ್ಲಿ ಲಸಿಕೆ ಪಡೆದುಕೊಳ್ಳುವ ಉತ್ಸಾಹವನ್ನ ಹೆಚ್ಚಿಸುವ ಸಲುವಾಗಿ ಹೊಸ ಆಫರ್ ಒಂದನ್ನ ನೀಡಲಾಗಿದೆ.
ಕೊರೊನಾ ಲಸಿಕೆಯನ್ನ ಅಧ್ಯಯನಕ್ಕೆ ಉತ್ತೇಜನ ನೀಡುವ ಸಲುವಾಗಿ ಕೋವಿಡ್ ಲಸಿಕೆ ಪಡೆದ 21 ವರ್ಷ ಮೇಲ್ಪಟ್ಟವರಿಗೆ ಮರಿಜುವಾನಾ ಡ್ರಗ್ನ್ನು ಉಚಿತವಾಗಿ ನೀಡಲಾಗುತ್ತಿದೆ. ಕಳೆದ ತಿಂಗಳಷ್ಟೇ ವಾಷಿಂಗ್ಟನ್ನಲ್ಲಿ ಕೊರೊನಾ ಲಸಿಕೆಯನ್ನ ಪಡೆದವರಿಗೆ ವಾಷಿಂಗ್ಟನ್ನಲ್ಲಿ ಉಚಿತವಾಗಿ ಮದ್ಯದ ಬಾಟಲಿಯನ್ನ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿತ್ತು.
ಅಮೆರಿಕದ ಆರೋಗ್ಯ ಇಲಾಖೆಯು ನೀಡಿರುವ ಅಂಕಿ-ಅಂಶಗಳ ಪ್ರಕಾರ ವಾಷ್ಟಿಂಗ್ಟನ್ ನಲ್ಲಿ 54 ಪ್ರತಿಶತ ವಯಸ್ಕರು ಕನಿಷ್ಟ 1 ಡೋಸ್ ಲಸಿಕೆಯನ್ನಾದರೂ ಪಡೆದಿದ್ದಾರೆ.
No comments:
Post a Comment