Tuesday, 22 June 2021

ಕೂಡ್ಲಿಗಿ: ಅಮಲಾಪುರದ ಹೆದ್ದಾರಿ ಬಳಿ, ಲಾರಿಗೆ ಸಿಲಿಕಿ ಕರಡಿ ಸಾವು.

ಕೂಡ್ಲಿಗಿ ತಾಲೂಕು ಅಮಲಾಪುರ ಬಳಿಯ ಹೆದ್ದಾರಿಯಲ್ಲಿ ಲಾರಿ ಹರಿದು ಕರಡಿ ಸಾವು.

ಕೂಡ್ಲಿಗಿ: ತಾಲೂಕಿನ ಅಮಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರಡಿ ಮೇಲೆ ಲಾರಿ ಹರಿದಿದ್ದರಿಂದ ಸ್ಥಳದಲ್ಲೇ ಕರಡಿ ಸತ್ತಿರುವ ಘಟನೆ ಮಂಗಳವಾರ ರಾತ್ರಿ 8.15 ಗಂಟೆಗೆ ನಡೆದಿದೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಬಳಿ ಕರಡಿಧಾಮವಿದೆ. ಈ ಧಾಮದ ಅರಣ್ಯಕ್ಕೆ ಅಂಟಿಕೊಂಡಂತೆ ಅಮಲಾಪುರ ಬಳಿ ಕಾದಿಟ್ಟ ಅರಣ್ಯವೂ ಇದೆ. ಆಹಾರ ಅರಸಿ ಬಂದಿರುವ ಕರಡಿಯು ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ಸಂದರ್ಭದಲ್ಲಿ ಲಾರಿಯೊಂದು ಹರಿದಿದ್ದರಿಂದ ಸ್ಥಳದಲ್ಲೇ ಸತ್ತಿದೆ. ಕರಡಿ ಮೇಲೆ ಹರಿದ ಲಾರಿ ಯಾವುದೆಂದು ತಿಳಿದು ಬಂದಿಲ್ಲ.

ಹೆದ್ದಾರಿಯಲ್ಲಿ ಲಾರಿ ಹರಿದು ಕರಡಿ ಸತ್ತು ಬಿದ್ದಿರುವ ಮಾಹಿತಿಯನ್ನು ಅಮಲಾಪುರದ ಕೆಲವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಲ್ಲದೆ, ಸತ್ತು ರಸ್ತೆಯಲ್ಲೇ ಇದ್ದ ಕರಡಿಯನ್ನು ಪಕ್ಕಕ್ಕೆ ತಂದು ಇಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.





No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...