Wednesday, 23 June 2021

ಮೊಟ್ಟೆ ಜೊತೆ ಯಾವೆಲ್ಲಾ ಆಹಾರಗಳನ್ನು ಸೇವಿಸಬಾರದು?


 ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತಾದೆ. ಆದರೆ, ಮೊಟ್ಟೆಗಳನ್ನು ಸೇವಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಗಮನಾರ್ಹವಾಗಿ ಮೊಟ್ಟೆ ಸೇವಿಸುವ ಮೊದಲು ಮತ್ತು ನಂತರ ಕೆಲವು ಆಹಾರಗಳನ್ನು ಸೇವಿಸಬಾರದು. ಈ ಬಗ್ಗೆ ಸರಿಯಾಗಿ ನಿಗಾ ವಹಿಸದಿದ್ದರೆ ಅಜೀರ್ಣದಂತಹ ಸಮಸ್ಯೆ ಎದುರಾಗಬಹುದು.

ಮೊಟ್ಟೆಗಳಲ್ಲಿ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಆದರೆ ಮೊಟ್ಟೆಯೊಂದಿಗೆ ಕೆಲವು ಆಹಾರ ಸೇವಿಸಿದರೆ ಅದು ನಿಮಗೆ ಅಲರ್ಜಿ ಅಥವಾ ಅಜೀರ್ಣವನ್ನುಂಟುಮಾಡಬಹುದು. ಹಾಗಾಗಿ ಮೊಟ್ಟೆಯ ಜೊತೆ ಯಾವ ಆಹಾರವನ್ನು ಸೇವಿಸಬಹುದು, ಯಾವ ಆಹಾರಾವನ್ನು ಸೇವಿಸಬಾರದು ಎಂಬ ಬಗ್ಗೆ ಎಚ್ಚರ ವಹಿಸಿ.

ಮೊಟ್ಟೆ ಜೊತೆಗೆ ಈ ಆಹಾರಗಳನ್ನು ಸೇವಿಸದಿದ್ದರೆ ಒಳಿತು

ಮೊಟ್ಟೆಗಳೊಂದಿಗೆ ಸಕ್ಕರೆ ಬಳಸುವುದನ್ನು ತಪ್ಪಿಸಿ. ಈ ಎರಡೂ ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ. ಇದನ್ನು ಅಧಿಕವಾಗಿ ಸೇವಿಸಿದರೆ ಅದು ವಿಷಕಾರಿಯಾಗಿದೆ.

ಸೋಯಾ ಹಾಲು ಮತ್ತು ಮೊಟ್ಟೆಗಳ ಸಂಯೋಜನೆಯನ್ನು ತಪ್ಪಿಸಬೇಕು. ಎರಡೂ ಬಹಳಷ್ಟು ಪ್ರೋಟೀನ್ ಹೊಂದಿರುತ್ತವೆ. ಆದ್ದರಿಂದ, ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ದೇಹವು ಪ್ರೋಟೀನ್‌ಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.

ಚಹಾ ಕುಡಿದ ಕೂಡಲೇ ಮೊಟ್ಟೆಗಳನ್ನು ತಿನ್ನಬಾರದು. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...