Thursday, 3 June 2021

ಫಿಫಾ ವಿಶ್ವಕಪ್‌ : ಭಾರತಕ್ಕೆ ಕತಾರ್‌ ತಂಡ ಸವಾಲು

ದೋಹಾ (ಕತಾರ್‌) : ಫಿಫಾ ವಿಶ್ವಕಪ್‌ ಹಾಗೂ ಏಶ್ಯನ್‌ ಕಪ್‌ ಜಂಟಿ ಕ್ವಾಲಿಫೈಯರ್‌ ಕೂಟದಲ್ಲಿ ಆಡಲಿರುವ ಭಾರತ ಗುರುವಾರ ಬಲಿಷ್ಠ ಕತಾರ್‌ ತಂಡವನ್ನು ಅವರದೇ ಅಂಗಳದಲ್ಲಿ ಎದುರಿಸಲಿದೆ.

ಭಾರತಕ್ಕೆ ಇದು ಕತಾರ್‌ ಎದುರಿನ ಸೆಕೆಂಡ್‌ ಲೆಗ್‌ ಪಂದ್ಯವಾಗಿದೆ. 2019ರ ಮೊದಲ ಮುಖಾಮುಖೀಯ ವೇಳೆ ಗೋಲ್‌ ಲೆಸ್‌ ಡ್ರಾ ಸಾಧಿಸಿದ್ದು ಭಾರತ ಅಮೋಘ ಸಾಧನೆ ಎನಿಸಿತ್ತು.


ಇದು “ಇ’ ವಿಭಾಗದ ಮುಖಾಮುಖೀಯಾಗಿದ್ದು, ಕತಾರ್‌ ಅಗ್ರಸ್ಥಾನದಲ್ಲಿದೆ. ಆರರಲ್ಲಿ 5 ಜಯ ಸಾಧಿಸಿದ ಹಿರಿಮೆ ಕತಾರ್‌ನದ್ದು. ಕೊನೆಯದಾಗಿ ಐರ್ಲೆಂಡ್‌ ಎದುರಿನ ಫ್ರೆಂಡ್ಲಿ ಪಂದ್ಯವನ್ನು 1-1ರಿಂದ ಡ್ರಾ ಮಾಡಿಕೊಂಡಿತ್ತು.

ಅಭ್ಯಾಸ ಕೊರತೆ. ಇತ್ತ ಭಾರತ ಯುಎಇ ವಿರುದ್ಧದ ಫ್ರೆಂಡ್ಲಿ ಮ್ಯಾಚ್‌ನಲ್ಲಿ 0-6 ಗೋಲುಗಳ ಆಘಾತಕ್ಕೆ ಸಿಲುಕಿತ್ತು. ಹಾಗೆಯೇ ಕಳೆದ ತಿಂಗಳು ಕೋಲ್ಕತಾದಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಶಿಬಿರ ರದ್ದುಗೊಂಡದ್ದು.

 ಭಾರತೀಯರ ಅಭ್ಯಾಸಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ನಾಯಕ ಸುನೀಲ್‌ ಚೆಟ್ರಿ ಕೋವಿಡ್‌ ಕಾರಣದಿಂದ ಎರಡೂ ಅಭ್ಯಾಸ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ.


ಫಿಫಾ ರ್‍ಯಾಂಕಿಂಗ್‌ನಲ್ಲೂ ಕತಾರ್‌ ಭಾರತಕ್ಕಿಂತ ಬಹಳಷ್ಟು ಮೇಲಿದೆ. ಕತಾರ್‌ 58, ಭಾರತ 105ನೇ ರ್‍ಯಾಂಕಿಂಗ್‌ ಹೊಂದಿದೆ. 5 ಪಂದ್ಯಗಳಿಂದ 3 ಅಂಕ ಸಂಪಾದಿಸಿರುವ ಭಾರತ “ಇ’ ವಿಭಾಗದಲ್ಲಿ 4ನೇ ಸ್ಥಾನದಲ್ಲಿದೆ. ಕತಾರ್‌ ಆಕ್ರಮಣವನ್ನು ಚೆಟ್ರಿ ಪಡೆ ತಡೆದು ನಿಂತೀತೇ ಎಂಬುದು ದೊಡ್ಡ ಪ್ರಶ್ನೆ.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...