Thursday, 3 June 2021

ಸಮಗ್ರ ಸದ್ದಿ ವಿಶೇಷ: ಮನದ ಮಾತು ನಾ ಕಂಡ ಕೊರೋನಾ ವಾರಿಯರ್ಸ್, ಸತ್ಯ ಮತ್ತು ಮಿಥ್ಯದ ಅನಾವರಣ.

ಸಮಗ್ರ ಸುದ್ದಿ: ವಿಶೇಷ:ಕೋರೊನಾ ಸೃಷ್ಡಿಸಿರುವ ಆಹಾಕಾರ ಇಡೀ ಮನು ಕುಲವೇ ನಲುಗಿ ಹೋಗುವಂತೆ ಮಾಡಿದೆ. ಸಾವು, ನೋವು ಕುಟುಂಬದ ಆಕ್ರಂದನ, ತಬ್ಬಲಿಗಳಾದ ಮಕ್ಕಳು, ಕೆಲಸ ಕಳೆದುಕೊಂಡವರು, ಹೀಗೆ ಕೊರೊನಾದ ಪರಿಣಾಮ ಒಂದೆರಡಲ್ಲ. ಇವುಗಳ ಮಧ್ಯೆ, ಜೀವ ರಕ್ಷಣೆಗಾಗಿ ನಿಂತವರು, ಯಾರು?  ಎಂಬ ಪ್ರಶ್ನೆಗೆ ಸ್ವತ: ಕೊರೋನಾ ವಾರಿಯರ್  ಆಗಿರುವ ನಂಜುಂಡೇಶ್ವರ ತಮ್ಮ ಮನದಾಳದ ಮಾತುಗಳನ್ನು ಕೊರೋನಾ ವಾರಿಯರ್ಸ್, ಕುರಿತಾಗಿ ಸಮಗ್ರ ಸುದ್ದಿಯೊಂದಿಗೆ ಹಂಚಿಕೊಂಡಿದ್ದಾರೆ.


ಗೆಳೆಯರೇ ಇಂದಿನ ಈ ಕೋವಿಡ್ ಸಂಕಷ್ಟ ಕಾಲದಲ್ಲಿ ನಮ್ಮೆಲ್ಲರ ಮನದಲ್ಲಿ ತಕ್ಷಣ ನೆನಪಾಗುವುದು ಕೊರೋನಾ ವಾರಿಯರ್ಸ್, ಗೆಳೆಯರೇ ಯಾರು ನಿಜವಾದ ಕೊರೋನಾ ವಾರಿಯರ್ಸ್ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ತುಸು ಕಷ್ಟದ ಕೆಲಸವೇ, ಆದರೂ ಕೊರೋನಾ ವಾರಿಯರ್ಸ್ ಎಂದಾಕ್ಷಣ ನೆನಪಾಗುವುದು ಶಿಕ್ಷಕರುಆರಕ್ಷಕರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮುಖ್ಯವಾಗಿ ವೈದ್ಯರು ಹಾಗೂ ಇಂದಿನ ನನ್ನ ಲೇಖನದ ಕಥಾ ನಾಯಕರು/ನಾಯಕಿಯರಾದ ದಾದಿಯರು ಶುಶ್ರೂಷಕರು..

.


ಕೋಟಿ ಕೋಟಿ ಹಣವಿದ್ದವರು ಸ್ನೇಹಿತರು ಸಂಬಂದಿಕರು ಹಿತೈಷಿಗಳು ಎಲ್ಲರೂ ನಮ್ಮೊಡನಿದ್ದರೂ ಕೋವಿಡ್ ಎಂದಾಕ್ಷಣ ನಮ್ಮಿಂದ ದೂರಹೋಗುವ ಪ್ರಯತ್ನ ಮಾಡುತ್ತಾರೆ. ಆದರೆ ದಾದಿಯರು / ಶುಶ್ರೂಷಕರು.. ಹಾಗಲ್ಲ ಅದಕ್ಕೆ ಅಪವಾದವೆಂಬಂತೆ ನಮ್ಮೊಡನಿದ್ದು, ನಮ್ಮನ್ನು ಮನೆಯ ಸದಸ್ಯರಂತೆ ಧೈರ್ಯ ತುಂಬಿ  ಹಾರೈಕೆ ಮಾಡುತ್ತಾರೆ. ಹಾಗೂ ಆರೋಗ್ಯ ಚೇತರಿಕೆ ಕಂಡು ಮರಳಿ ಗೂಡಿಗೆ ಸೇರುವವರೆಗೂ ನಮ್ಮೊಡನೆ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಹೌದು, ಇಂದಿನ ನಿಜವಾದ ಕೊರೋನಾ ವಾರಿಯರ್ಸ್ ದಾದಿಯರು, ಅವರಿಗೂ ಒಂದು ಕುಟುಂಬವಿದೆ ಅವರಿಗೂ ತಮ್ಮದೇ ಆದ ಸಮಸ್ಯೆಗಳಿವೆ ಎಲ್ಲವನ್ನೂ ಬದಿಗಿತ್ತು, ನಮ್ಮೊಡನೆ ನಮ್ಮವರಾಗಿದ್ದುಕೊಂಡು ನಮ್ಮಯ ಸೇವೆ ಮಾಡುವ ದಾದಿಯರ ಕಷ್ಟಸುಖಗಳ ಅರಿಯುವ ಪ್ರಯತ್ನ ಮಾಡಿದಾಗ ತಿಳಿದು ಬಂದ ಕಟು ಸತ್ಯ, ನಿಮ್ಮ ಮುಂದೆ ಹಂಚಿಕೊಳ್ಳುವ ಪ್ರಯತ್ನ ಮಾಡಿರುವೆ.


ಗುತ್ತಿಗೆ ಆದಾರದ ಮೇಲೆ ಸೇವೆಸಲ್ಲಿಸುತ್ತಿರುವ ಸರಿಸುಮಾರು 10ವರುಷಕ್ಕಿಂತಲೂ ಮಿಗಿಲಾಗಿ ಕಾರ್ಯನಿರ್ವಹಿಸುತ್ತಿರುವ ದಾದಿಯರ ತಿಂಗಳ ಸಂಬಳ  ಕೇವಲ 13000-00ರೂಗಳು ಮಾತ್ರ, ಅದೇ ರೀತಿ ತಮ್ಮೊಡನೆ ಕಾರ್ಯನಿರ್ವಹಿಸುವ ಸ್ನೇಹಿತರು ಸರ್ಕಾರಿ ಉದ್ಯೋಗಿ ಪಡೆಯುವ ಸಂಬಾವನೆ 45000-00 ರೂಗಳು ಇಲ್ಲಿ ಇವರಿಬ್ಬರ ವೃತ್ತಿಯೂ, ಸೇವೆಯೂ ಒಂದೇ ಆದರೆ ಸಂಬಾವನೆ ಭಿನ್ನ,ಮಾತ್ರವಲ್ಲ ಯಾವುದೇ ಇಎಸ್, ರಜೆ, ದಿನಭತ್ಯೆ, ಆರೋಗ್ಯ ವಿಮೆಗಳಿಲ್ಲ ಸಮಾನ ಕೆಲಸಕ್ಕೆ ಸಮಾನ ವೇತನವೂ ಇಲ್ಲಾ ಈ ಎಲ್ಲಾ ಸಮಸ್ಯೆಗಳ ನಡುವೆಯೂ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ತಮ್ಮ ಜೀವ, ಜೀವನವನ್ನು ಪಣಕ್ಕಿಟ್ಟಿರುವ ನಿಜವಾದ ಕೊರೋನಾ ವಾರಿಯರ್ಸ್ ಬಗ್ಗೆ ಸರ್ಕಾರದ ಕಣ್ಣು ತೆರೆಯುವಂತಾಗಲಿ.


 ಸಾವಿರಾರು ಜನ ಹೀಗೆ ಗುತ್ತಿಗೆ ಆದಾರದ ಮೇಲೆ ಸೇವೆ ಸಲ್ಲಿಸುತ್ತಿರುವ ದಾದಿಯರಿಗೆ ನ್ಯಾಯ ಸಿಗುವಂತಾಗಲಿ,  ಅವರ ಜೀವನವೂ ಸುಖಸಂತಸದಿಂದ ಕೂಡಿರಲಿ ಎಂಬುದು ನಮ್ಮೆಲ್ಲರ ಆಶಯವಾಗಲಿ ಎಂಬ ಸದುದ್ದೇಶದೊಂದಿಗೆ ಮುಂದೆ ಸಾಗುವಾಗ ಸರ್ಕಾರದ ಮಲತಾಯಿ ದೋರಣೆಯೋ ಏನೋ ಎಂಬಂತೆ ಮೂರು ವರುಷಗಳಿಂದ  ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತಿದ್ದ ವೈದ್ಯರನ್ನು ಪೂರ್ಣಪ್ರಮಾಣದಲ್ಲಿ ತುಂಬಿಕೊಂಡು, ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣವೆಂಬಂತೆ ದಾದಿಯರ ಮರೆತಿದ್ದು ತರವೇ. ಕೊನೆಪಕ್ಷ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಸೌಜನ್ಯ ತೋರಬಹುದಿತ್ತಲ್ಲವೇ, ಆರೋಗ್ಯ ಮಂತ್ರಿಗಳು, ವೈದ್ಯರು ಗಿರುವ ಶ್ರೀಯುತ ಸುಧಾಕರ್  ಗುತ್ತಿಗೆ ಆದಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ದಾದಿಯರ ಕಷ್ಟಗಳ ಅರಿತವರು  ಇತ್ತಕಡೆ ಗಮನಹರಿಸಿ ನಿಜವಾದ ಕೊರೋನಾ ವಾರಿಯರ್ಸ್ಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಗೌರವಿಸುವಿರಿ ಎಂಬುದಾಗಿ ಭಾವಿಸುತ್ತಾ  ನಿಮ್ಮಿಂದ ಹಾಗೂ ನಮ್ಮಿಂದ ಅವರಿಗೆ ಸಣ್ಣ ಕೃತಜ್ಞತೆ ಹೇಳುವ ಪ್ರಯತ್ನ ಮಾಡೋಣ.


ಎಲ್ಲರ ಕಷ್ಟಸುಖಗಳಲ್ಲಿ ಭಾಗವಹಿಸುವ ದಾದಿಯರ ಕಷ್ಟದಲ್ಲಿ ನಾವು ಜೊತೆಯಾಗೋಣ ಅವರಿಗೂ ನ್ಯಾಯ ಸಿಗುವವರೆಗೂ ಕೈಜೋಡಿಸೋಣ.


ನಂಜುಂಡೇಶ್ವರ, ಕವಿ, ಲೇಖಕ ಹಾಗೂ ಕೊರೋನಾ ವಾರಿಯರ್, ,ಚಿತ್ರದುರ್ಗ.



No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...