ನವದೆಹಲಿ : ಕೊರೋನಾ ಲಸಿಕೆ ಪಡೆದಂತ ಅನೇಕರಿಗೆ, ಕೋವಿನ್ ವೆಬ್ ಸೈಟ್ ಅಥವಾ ಆಪ್ ಮೂಲಕ ಲಸಿಕಾ ಪ್ರಮಾಣ ಪತ್ರ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆದ್ರೇ.. ಲಸಿಕಾ ಕೇಂದ್ರದಲ್ಲಿ ನಮೂದಾಗುವಂತ ಕೆಲ ತಪ್ಪುಗಳನ್ನು ಸರಿ ಪಡಿಸೋದಕ್ಕೆ ಆಗದೇ, ಲಸಿಕೆ ಪಡೆದವರು ಸಮಸ್ಯೆಗೆ ಸಿಲುಕುವಂತೆ ಆಗಿತ್ತು. ಆದ್ರೇ.. ಇದೀಗ ಇಂತಹ ತಪ್ಪುಗಳನ್ನು ಸರಿ ಪಡಿಸಬಹುದಾಗಿದೆ.
ಹೌದು.. ಕೇಂದ್ರ ಸರ್ಕಾರ ಕೊರೋನಾ ಲಸಿಕೆ ಪಡೆದ ನಂತ್ರ, ಪ್ರಮಾಣ ಪತ್ರದಲ್ಲಿ ನಮೂದಾಗಿರುವಂತ ವೈಯಕ್ತಿಕ ವಿವರಗಳ ತಪ್ಪನ್ನು ತಿದ್ದಪಡಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಹೀಗಾಗಿ ಲಸಿಕೆ ಪಡೆದಂತ ಫಲಾನುಭವಿಗಳು ಕೋವಿಡ್ ಲಸಿಕಾ ಪ್ರಮಾಣ ಪತ್ರದಲ್ಲಿನ ತಪ್ಪುಗಳನ್ನು ಇನ್ಮುಂದೆ ತಿದ್ದಿಕೊಳ್ಳಬಹುದಾಗಿದೆ.
ನೀವು ಲಸಿಕೆ ಪಡೆದು, ಕೊರೋನಾ ಲಸಿಕೆಯ ಪ್ರಮಾಣ ಪತ್ರದಲ್ಲಿ ಏನಾದ್ರೂ ವೈಯಕ್ತಿಕ ವಿವರಗಳ ತಪ್ಪುಗಳು ಆಗಿದ್ದಲ್ಲಿ, ಕೋವಿನ್ ವೆಬ್ ಸೈಟ್ ಗೆ ಭೇಟಿ ನೀಡಿ, ಆ ತಪ್ಪುಗಳನ್ನು ತಿದ್ದುಪಡಿ ಮಾಡಬಹುದಾಗಿದೆ.
ಅಂದಹಾಗೇ ಹೆಸರು, ಜನ್ಮದಿನಾಂಕ, ಲಿಂಗ ಸೇರಿದಂತೆ ಇತರ ವಿವರಗಳು ತಪ್ಪಾಗಿದ್ದರೇ, ಆ ವಿವರಗಳನ್ನು ನೀವೇ ತಿದ್ದುಪಡಿ ಮಾಡಿ, ಯಾವುದೇ ತಪ್ಪು ಇಲ್ಲದಂತ ನಿಮ್ಮ ಕೊರೋನಾ ಲಸಿಕಾ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
ಹಾಗಾದ್ರೇ.. ತಪ್ಪು ಸರಿ ಪಡಿಸೋದು ಹೇಗೆ..?
- ನೀವು ಕೊರೋನಾ ಲಸಿಕೆ ಪಡೆಯುವಂತ ಸಂದರ್ಭದಲ್ಲಿ ನೀಡಲಾಗಿದ್ದಂತ ಮೊಬೈಲ್ ನಂಬರ್ ಮೂಲಕ https://www.cowin.gov.in/ ಈ ಜಾಲತಾಣಕ್ಕೆ ಭೇಟಿ ನೀಡಿ ರಿಜಿಸ್ಟರ್ ಮಾಡಿಕೊಳ್ಳಿ
- ಹೀಗೆ ರಿಜಿಸ್ಟರ್ ಮಾಡಿಕೊಂಡ ನಂತ್ರ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು.
- ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿದ ನಂತ್ರ, ನಿಮ್ಮ ಮೊಬೈಲ್ ಸಂಖ್ಯೆಗೆ ಬರುವಂತ ಓಟಿಪಿಯನ್ನು ನಮೂದಿಸಿ ನಿಮ್ಮ ಲಸಿಕಾ ಪುಟ ಈಗ ತೆರೆದುಕೊಳ್ಳುತ್ತದೆ. ಈ ಪುಟದಲ್ಲಿ ಕಾಣಿಸುವಂತ ಕರೆಕ್ಷನ್ ಮೇಲೆ ಹೀಗೆ ನಂತ್ರ, ಲಸಿಕಾ ಪ್ರಮಾಣ ಪತ್ರದಲ್ಲಿ ಯಾವುದು ತಪ್ಪಾಗಿದೆಯೋ, ಅದನ್ನು ಸರಿ ಪಡಿಸಿ, ಸಬ್ ಮಿಟ್ ಕೊಟ್ಟರೇ.. ನಿಮ್ಮ ಲಸಿಕಾ ಪ್ರಮಾಣ ಪತ್ರದಲ್ಲಿನ ತಪ್ಪು ಸರಿ ಆಗಲಿದೆ.
No comments:
Post a Comment