Wednesday, 2 June 2021

ಬ್ರಿಟನ್ ನಲ್ಲಿ ಕೊರೋನಾ ವೈರಸ್ ಮೂರನೇ ಅಲೆ : ಆತಂಕದಲ್ಲಿ ಜನತೆ.

ನವದೆಹಲಿ : ಕೊರೊನಾ ವೈರಸ್ ಮೊದಲನೇ, ಎರಡನೇ ಅಲೆಯಿಂದ ತತ್ತರಿಸಿದ್ದ ಬ್ರಿಟನ್​ನಲ್ಲಿ ಇದೀಗ ಕೋವಿಡ್​ 3ನೇ ಅಲೆಯು ಆರಂಭಿಕ ಹಂತದಲ್ಲಿದ್ದು, ಜನರಿಗೆ ಆತಂಕ ಶುರುವಾಗಿದೆ.

ಕೊರೊನಾ ಎರಡನೇ ಅಲೆ ಇಳಿಕೆಯಾಗುತ್ತಿದ್ದಂತೆ ಮೂರನೇ ಅಲೆ ಆರಂಭವಾಗಿದೆ. ಕಳೆದ ಒಂದೂವರೆ ವರ್ಷದಿಂದ ಜಾರಿಗೊಳಿಸಲಾಗಿದ್ದ ಲಾಕ್​ಡೌನ್​ ನಿರ್ಬಂಧಗಳನ್ನು ಜೂನ್ 21ರಂದು ತೆಗೆದುಹಾಕಲು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನಿರ್ಧರಿಸಿದ ಬೆನ್ನಲ್ಲೇ ಕೊರೊನಾ 3ನೇ ಅಲೆಯ ಆತಂಕ ಶುರುವಾಗಿದೆ.

ಈ ಕುರಿತು ಭಾರತೀಯ ಮೂಲದ ಖ್ಯಾತ ವಿಜ್ಞಾನಿ ಪ್ರೊ.ರವಿ ಗುಪ್ತಾ ಅವರು ಬ್ರಿಟನ್​ನಲ್ಲಿ ಕೋವಿಡ್​ ಮೂರನೇ ಅಲೆಯು ಆರಂಭಿಕ ಹಂತದಲ್ಲಿದೆ ಎಂಬ ಸುಳಿವನ್ನು ಪ್ರಧಾನಿ ಬೋರಿಸ್ ಜಾನ್ಸನ್‌ಗೆ ನೀಡಿದ್ದಾರೆ. ದೇಶದಲ್ಲಿ ಕೋವಿಡ್​ ಹೊಸ ಪ್ರಕರಣಗಳು ಕಡಿಮೆಯಾಗಿದೆಯಾದರೂ ವೈರಸ್​​ನ B.1.617 ರೂಪಾಂತರವು ಉಲ್ಬಣಿಸುತ್ತಿದೆ ಎಂದು ಬಿಬಿಸಿ ವರದಿ ಮಾಡಿರುವುದಾಗಿ ತಿಳಿಸಿದ್ದಾರೆ.

ಬ್ರಿಟನ್‌​ನಲ್ಲಿ ಈವರೆಗೆ 44,87,339 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇವರಲ್ಲಿ 1,27,782 ಮಂದಿ ಸಾವನ್ನಪ್ಪಿದ್ದಾರೆ. 42,89,486 ಮಂದಿ ಕೊರೊನಾ ವೈರಸ್​ನಿಂದ ಚೇತರಿಸಿಕೊಂಡಿದ್ದಾರೆ. 

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...