Tuesday, 8 June 2021

BIG BREAKING : ಆಗಸ್ಟ್ 28, 29ಕ್ಕೆ CET ಪರೀಕ್ಷೆ : ಈ ಬಾರಿ ಸಿಇಟಿ ಅಂಕ ಮಾತ್ರ ವೃತ್ತಿಪರ ಕೋರ್ಸ್ ಆಯ್ಕೆಗೆ ಪರಿಗಣನೆ - ಡಿಸಿಎಂ ಡಾ.ಸಿಎನ್ ಅಶ್ವತ್ಥ ನಾರಾಯಣ

 

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಕಾರಣದಿಂದಾಗಿ ರಾಜ್ಯದಲ್ಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ, ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಇದರ ಬೆನ್ನಲ್ಲೇ, ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್ ಮಾಡಿದೆ. ಆಗಸ್ಟ್ 28, 29ರಂದು ನಡೆಸಲು ನಿರ್ಧರಿಸಿದೆ.

ಈ ಕುರಿತಂತೆ ಇಂದು ಸಿಇಟಿ ವಿಚಾರವಾಗಿ ನಡೆದಂತ ಸಭೆಯ ನಂತ್ರ, ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಸಿಇಟಿ ಸಭೆ ವಿಚಾರದಲ್ಲಿ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ವಿವಿಧ ಅಧಿಕಾರಿಗಳು, ತಜ್ಞರು ಭಾಗವಹಿಸಿದ್ದರು. ಸಚಿವ ಸುರೇಶ್ ಕುಮಾರ್ ಸಲಹೆಯನ್ನು ನೀಡಿ, ದ್ವಿತೀಯ ಪಿಯು ಅಂಕಗಳನ್ನು ಈ ಬಾರಿ ಪರಿಗಣಿಸದಂತೆ ಮನವಿ ಮಾಡಿದ್ದರು. ಸಿಇಟಿ ಆಧಾರದ ಮೇಲೆ RANK ನೀಡುವ ಕಾರ್ಯ ನಡೆಯಬೇಕು ಎಂಬುದಾಗಿ ತಿಳಿಸಿದ್ದರು. ಈ ವಿಚಾರವಾಗಿ ವಿಸೃತವಾಗಿ ಚರ್ಚೆ ಮಾಡಿ, ಸಂಬಂಧ ಪಟ್ಟ ಎಲ್ಲಾ ಕೌನ್ಸಿಲ್ ಗಳಿಗೆ ಪತ್ರವನ್ನು ಬರೆದು, ಈ ಬಗ್ಗೆ ರಿಲ್ಯಾಕ್ಸೇಷನ್ ಕೊಡುವಂತೆ ಕೋರಲಾಗುತ್ತದೆ ಎಂದರು.

ಪಿಯುಸಿ ಮಾರ್ಕ್ ಅನ್ನು ಈ ವರ್ಷ ತೆಗೆದುಕೊಳ್ಳೋದಿಲ್ಲ. ಈ ವರ್ಷ ಸಿಇಟಿ ಪರೀಕ್ಷೆಯ ಅಂಕವನ್ನು ಪರಿಗಣಿಸಿಯೇ RANK ನೀಡುವಂತ ಕಾರ್ಯವನ್ನು ಮಾಡಲಾಗುತ್ತದೆ. ಅದೇ ರೀತಿ ಈ ಬಾರಿಯ ಸಿಇಟಿ ಪರೀಕ್ಷೆಯನ್ನು ಆಗಸ್ಟ್ 28, 29ರಂದು ನಡೆಸಲಾಗುತ್ತದೆ. ಮೊದಲ ದಿನ ಮ್ಯಾಥಮೇಟಿಕ್ಸ್ ಹಾಗೂ ಬಯೋಲಜಿ ಪರೀಕ್ಷ ನಡೆಯಲಿದೆ. ಎರಡನೇ ದಿನ ಫಿಜಿಕ್ಸ್ ಮತ್ತು ಕೆಮಿಸ್ಟ್ರಿ ಪರೀಕ್ಷೆ ನಡೆಯಲಿದೆ. ಮೂರನೇ ದಿನ ಗಡಿನಾಡಿನ ಕನ್ನಡಿಗರಿಗೆ ಪ್ರತ್ಯೇಕವಾಗಿ ಕನ್ನಡ ಪರೀಕ್ಷೆ ನಡೆಯಲಿದೆ. ಜೂನ್.15ರಿಂದ ಸಿಇಟಿ ಪರೀಕ್ಷೆ ಪರೀಕ್ಷೆಗೆ ನೊಂದಣಿ ಆರಂಭವಾಗಲಿದೆ ಎಂದರು.



No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...