Friday 11 June 2021

ದೇಶದಲ್ಲಿ ಒಂದೇ ದಿನ 91,702ಹೊಸ ಕೇಸ್, 3403 ಮಂದಿ ಬಲಿ..!


 ನವದೆಹಲಿ,ಜೂ.11-ಕಳೆದ ನಾಲ್ಕು ದಿನಗಳಿಂದ ಪ್ರತಿನಿತ್ಯದ ಕೊರೊನಾ ಸೋಂಕಿನ ಪ್ರಕರಣಗಳು ಒಂದು ಲಕ್ಷಕ್ಕಿಂತ ಕಡಿಮೆಯಾಗುತ್ತಿದೆ.ಕಳೆದ 24 ಗಂಟೆಗಳಲ್ಲಿ 91702 ಪ್ರಕರಣಗಳು ಮಾತ್ರ ದಾಖಲಾಗಿರುವುದರ ಜತೆಗೆ ಕೊರೊನಾ ಪಾಸಿಟಿವಿಟಿ ರೇಟ್ ಶೇ.4.49ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

 

91 ಸಾವಿರ ಹೊಸ ಪ್ರಕರಣದಿಂದಾಗಿ ದೇಶದ ಒಟ್ಟು ಸೋಂಕಿತರ ಸಂಖ್ಯೆ 2.92ಕೋಟಿ ಗಡಿ ದಾಟಿದ್ದು, ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ 3 ಕೋಟಿ ದಾಟುವ ಸಾಧ್ಯತೆಗಳಿವೆ.ಮತ್ತೆ ಕೊರೊನಾ ಸೋಂಕಿಗೆ 3403 ಮಂದಿ ಬಲಿಯಾಗಿರುವುದರಿಂದ ಮಹಾಮಾರಿಯಿಂದ ಮೃತಪಟ್ಟವರ ಒಟ್ಟು ಸಂಖ್ಯೆ 3.63 ಲಕ್ಕಕ್ಕೂ ಹೆಚ್ಚಾಗಿದೆ.

 

ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ದ್ವಿಗುಣಗೊಳ್ಳುತ್ತಿರುವುದರಿಂದ ಸಕ್ರಿಯ ಸೋಂಕು ಪ್ರಮಾಣ 11,21,671ಕ್ಕಿ ಇಳಿಕೆಯಾಗಿದೆ. ದೇಶದಲ್ಲಿ ಇದುವರೆಗೂ 37ಕೋಟಿಗೂ ಹೆಚ್ಚು ಮಂದಿಯ ಕೊರೊನಾ ತಪಾಸಣೆ ನಡೆಸಲಾಗಿದೆ.

 

ವಾರದ ಪಾಸಿಟಿವಿಟಿ ರೇಟ್ ಶೇ.5.14ಕ್ಕೆ ಕುಸಿದಿರುವುದರ ಜತೆಗೆ ನಿತ್ಯದ ದರವೂ ಶೇ.4.49ಕ್ಕೆ ಇಳಿದಿರುವುದು ಆಶಾದಾಯಕ ಬೆಳವಣಿಗೆ ಎಂದೇ ಭಾವಿಸಲಾಗುತ್ತಿದೆ. 2,92ಕೋಟಿ ಸೋಂಕಿತರಲ್ಲಿ ಈಗಾಗಲೇ 2,77 ಕೋಟಿ ಮಂದಿ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ ಎಂದು ಅಂಕಿ ಅಂಶದಲ್ಲಿ ಉಲ್ಲೇಖಿಸಲಾಗಿದೆ.

 


No comments:

Post a Comment