Friday 11 June 2021

ಸತತ ಇಳಿಕೆ ಕಂಡ ಹಳದಿ ಲೋಹ: ಗರಿಷ್ಠ ಮಟ್ಟಕ್ಕಿಂತ 7000 ರೂ. ಕಡಿಮೆ


 

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ದುರ್ಬಲಗೊಂಡಿದ್ದು, ಇಳಿಮುಖದತ್ತ ಸಾಗಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.15ರಷ್ಟು ಏರಿಕೆಗೊಂಡು 49,275 ರೂಪಾಯಿಗೆ ತಲುಪಿದೆ.

 

ಚಿನ್ನದ ಜೊತೆಗೆ ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 0.5ರಷ್ಟು ಏರಿಕೆಗೊಂಡು 72,357 ರೂಪಾಯಿಗೆ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್‌ಗೆ 1,900 ಡಾಲರ್‌ನಷ್ಟಿದೆ.

.

ಕಳೆದ ವಾರ ಚಿನ್ನದ ಬೆಲೆ 5 ತಿಂಗಳ ಗರಿಷ್ಠ 49,750 ರೂಪಾಯಿಗೆ ತಲುಪಿದ ನಂತರ ಚಿನ್ನವು ಇಳಿಮುಖದತ್ತ ಸಾಗಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ, ಅಮೂಲ್ಯವಾದ ಲೋಹವು ದಾಖಲೆಯ ಗರಿಷ್ಠ 56,200 ರೂಪಾಯಿಗೆ ಮುಟ್ಟಿತ್ತು.

 

ಎಂಸಿಎಕ್ಸ್ ಚಿನ್ನವು 49,880ರ ಪ್ರಮುಖ ಪ್ರತಿರೋಧವನ್ನು ಎದುರಿಸಿದರೆ, ಅಮೆರಿಕಾದ ಹಣದುಬ್ಬರವು ಒಂದು ವರ್ಷದ ಹಿಂದೆ ಶೇಕಡಾ 5ರಷ್ಟು ಹೆಚ್ಚಾಗಿದೆ. ಇದು ಆಗಸ್ಟ್ 2008 ರ ನಂತರದ ಅತಿದೊಡ್ಡ ಏರಿಕೆಯಾಗಿದೆ.

 

ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ ಶೇಕಡಾ 0.5ರಷ್ಟು ಏರಿಕೆಯಾಗಿ 28.10 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಸ್ಥಿರವಾಗಿ 1,151.47 ಡಾಲರ್‌ಗೆ ತಲುಪಿದೆ.

 

No comments:

Post a Comment