Monday, 7 June 2021

7 ಜೂನ್ 2021: ವಿಶ್ವ ಆಹಾರ ಸುರಕ್ಷತಾ ದಿನದ.

ಪ್ರತಿ ವರ್ಷ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು, ಆಹಾರದಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಲು, ಪತ್ತೆಹಚ್ಚಲು ಮತ್ತು ಕ್ರಮವನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ.


ಪ್ರತಿಯೊಬ್ಬ ಮನುಷ್ಯನೂ ಭೂಮಿಯ ಮೇಲೆ ತನ್ನ ಅಸ್ತಿತ್ವಕ್ಕಾಗಿ ಆಹಾರ, ನೀರು, ಗಾಳಿ ಮತ್ತು ಬಟ್ಟೆಯ ಮೇಲೆ ಅವಲಂಬನೆಯನ್ನು ಹೊಂದಿರುತ್ತಾನೆ. ಆಹಾರವು ನಮ್ಮ ದೇಹದಲ್ಲಿನ ಶಕ್ತಿಯ ವೇಗವರ್ಧಕವಾಗಿದೆ. ಅಲ್ಲದೆ, ನಮ್ಮ ದೇಹದ ಬೆಳವಣಿಗೆಗೆ ಎಲ್ಲಾ ಅಗತ್ಯ ಪೋಷಕಾಂಶಗಳು, ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು ಮತ್ತು ಪ್ರೋಟೀನ್‌ಗಳನ್ನು ಒದಗಿಸುತ್ತದೆ. ಹಾಗಾಗಿ ಆಹಾರ ಸುರಕ್ಷತಾ ದಿನ ಹೆಚ್ಚು ಗಮನಾರ್ಹವಾದುದು.


ವಿಶ್ವ ಆಹಾರ ಸುರಕ್ಷತಾ ದಿನ ಇತಿಹಾಸ: ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) 5 ವರ್ಷದೊಳಗಿನ ಮಕ್ಕಳು ಮತ್ತು ಕಡಿಮೆ ಆದಾಯವನ್ನು ಹೊಂದಿರುವ ದೇಶಗಳಲ್ಲಿ ವಾಸಿಸುವ ವ್ಯಕ್ತಿಗಳಲ್ಲಿ ಹರಡುತ್ತಿರುವ ಆಹಾರ ಸಮಸ್ಯೆಗಳನ್ನು ಗುರುತಿಸುತ್ತದೆ. ಹಾಗಾಗಿ 2018ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿ ವರ್ಷ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವೆಂದು ಘೋಷಿಸಲಾಯಿತು.


ವಿಶ್ವ ಆರೋಗ್ಯ ಅಸೆಂಬ್ಲಿಯು ಆಹಾರದಿಂದ ಹರಡುವ ರೋಗದ ಹೊರೆ ಕಡಿಮೆ ಮಾಡಲು ಆಹಾರ ಸುರಕ್ಷತೆಗಾಗಿ ಜಾಗತಿಕ ಪ್ರಯತ್ನಗಳನ್ನು ಬಲಪಡಿಸುವ ನಿರ್ಣಯವನ್ನು ಅಂಗೀಕರಿಸಿತು. ಡಬ್ಲ್ಯುಎಚ್‌ಒ ಹಾಗೂ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಜಂಟಿಯಾಗಿ ಸದಸ್ಯ ರಾಷ್ಟ್ರಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲು ಅನುಕೂಲ ಮಾಡಿಕೊಟ್ಟಿವೆ.

ವಿಶ್ವ ಆಹಾರ ಸುರಕ್ಷತಾ ದಿನ 2021ರಥೀಮ್:  ವಿಶ್ವ ಆಹಾರ ಸುರಕ್ಷತಾ ದಿನದ ಥೀಮ್ (ವಿಷಯ) 'ಆರೋಗ್ಯಕರ ನಾಳೆಗಾಗಿ ಇಂದು ಸುರಕ್ಷಿತ ಆಹಾರ'. ಸುರಕ್ಷಿತ ಆಹಾರವನ್ನು ಉತ್ಪಾದಿಸುವುದು ಮತ್ತು ಸೇವಿಸುವತ್ತ, ಗಮನಹರಿಸುವುದು ಈ ವರ್ಷದ ವಿಷಯವಾಗಿದೆ. ಸುರಕ್ಷಿತ ಆಹಾರವನ್ನು ಸೇವಿಸುವುದರಿಂದ ಮನುಷ್ಯನಿಗೆ ದೀರ್ಘಕಾಲದ ಆರೋಗ್ಯ ಲಭಿಸುತ್ತದೆ. ಇದರಿಂದ ಮನುಷ್ಯನು ಪ್ರಾಣಿಗಳು, ಸಸ್ಯಗಳು, ಪರಿಸರ ಮತ್ತು ಆರ್ಥಿಕತೆಯ ನಡುವೆ ವ್ಯವಸ್ಥಿತ ಸಂಪರ್ಕವನ್ನು ರೂಪಿಸುವಲ್ಲಿ ಮುಂದಾಗುತ್ತಾನೆ. ಹಾಗಾಗಿ ಇದು ಭವಿಷ್ಯದ ಅಗತ್ಯಗಳನ್ನು ಪೂರೈಸಲು ನಮಗೆ ಸಹಾಯ ಮಾಡುತ್ತದೆ.


ವಿಶ್ವ ಆಹಾರ ಸುರಕ್ಷತಾ ದಿನದ ಕುರಿತಾಗಿ ಪ್ರಸಿದ್ಧ ವ್ಯಕ್ತಿಗಳಿಂದ, ಅವರ ಮಾತುಗಳಲ್ಲಿ ಆಹಾರದ ಪ್ರಾಮುಖ್ಯತೆ.











No comments:

Post a Comment