Monday, 7 June 2021

25000 ಬಜೆಟ್ ನಲ್ಲಿ Online ಕ್ಲಾಸಿಗಾಗಿ Laptop ಖರೀದಿಸಬೇಕಾ? ಅಥವಾ ಆಂಡ್ರಾಯ್ಡ್ ಟ್ಯಾಬ್ಲೆಟ್ ಖರೀದಿಸಬೇಕಾ?


 ಆನ್ ಲೈನ್ ಕ್ಲಾಸ್ ಗಳ ಹಾವಳಿಯಲ್ಲಿ ಪೋಷಕರು ಬೆಂಡಾಗುತ್ತಿದ್ದಾರೆ.ಲ್ಯಾಪ್ ಟಾಪ್ ಖರೀದಿಸಬೇಕಾ?ಮೊಬೈಲ್ ಖರೀದಿಸಬೇಕಾ?ಎಂಬ ಗೊಂದಲದಲ್ಲಿದ್ದಾರೆ.ಹೆಚ್ಚಿನ ಪೋಷಕರು ಬಹಳಷ್ಟು ಹಣ ವ್ಯಯಿಸಿ ಮಕ್ಕಳ ಭವಿಷ್ಯಕ್ಕಾಗಿ ಹೆಣಗಾಡುತ್ತಿದ್ದಾರೆ. ಇಂತಹ ಕರೋನಾ ಸಂದರ್ಬದಲ್ಲಿ ಪೋಷಕರ ಕಷ್ಟ ಹೇಳತೀರದ್ದೇ ಆಗಿದ್ದರೂ ಅನಿವಾರ್ಯ ಕಾರಣಕ್ಕಾಗಿ ಲ್ಯಾಪ್ ಟಾಪ್ ಖರೀದಿಸಬೇಕಾದ ಒತ್ತಡಕ್ಕೆ ಸಿಲುಕುತ್ತಿದ್ದಾರೆ.

ಇದೀಗ ಹೆಚ್ಚಿನ ಪೋಷಕರು ದುಬಾರಿ ಡಿವೈಸ್ ಗಳನ್ನು ಖರೀದಿಸುತ್ತಿದ್ದರೆ ಇನ್ನು ಕೆಲವರು 25,000 ಬಜೆಟ್ ಇಟ್ಟುಕೊಂಡು ಯಾವುದಾದರೂ ಮಕ್ಕಳಿಗೆ ಅನುಕೂಲಕರವಾಗಿರುವ ಡಿವೈಸ್ ಖರೀದಿಸಬೇಕು ಎಂದು ಆಶಿಸುತ್ತಿದ್ದಾರೆ. ಮಕ್ಕಳ ಆನ್ ಲೈನ್ ಕ್ಲಾಸ್ ಗಾಗಿ ವಿಂಡೋಸ್ ಲ್ಯಾಪ್ ಟಾಪ್ ಖರೀದಿಸುವುದು ಒಳ್ಳೆಯದಾ ಅಥವಾ ಆಂಡ್ರಾಯ್ಡ್ ಮೊಬೈಲ್ ಟ್ಯಾಬ್ಲೆಟ್ ಖರೀದಿಸುವುದು ಒಳ್ಳೆಯದಾ ಎಂಬುದು ಹೆಚ್ಚಿನವರಲ್ಲಿರುವ ಗೊಂದಲ.

30,000 ರುಪಾಯಿಯೊಳಗಿನ ಲ್ಯಾಪ್ ಟಾಪ್ ಖರೀದಿಗೂ ಮುನ್ನ ನೀವು ತಿಳಿದರಬೇಕಿರುವ ಕೆಲವು ಅಂಶಗಳು:

20,000 ರುಪಾಯಿಯೊಳಗೆ ಪ್ರಸಿದ್ಧ ಬ್ರ್ಯಾಂಡಿನ ಯಾವುದೇ ವಿಂಡೋಸ್ ಲ್ಯಾಪ್ ಟಾಪ್ ಗಳು ಲಭ್ಯವಿಲ್ಲ.ಹಾಗಾಗಿ ನೀವು ನಿಮ್ಮ ಬಜೆಟ್ ನ್ನು 25,000ಕ್ಕೆ ಅಚಾನಕ್ ಆಗಿ ಹೆಚ್ಚಿಕೊಳ್ಳುತ್ತೀರಿ.25,000 ಬಜೆಟ್ ನಲ್ಲಿ ಕೆಲವು ನಿರ್ಧಿಷ್ಟ ಬ್ರ್ಯಾಂಡ್ ಗಳು ಲಭ್ಯವಾಗಿದ್ದರೂ ಕೂಡ ಲೋ-ಎಂಡ್ ಇಂಟೆಲ್ ಸೆರೆಲಾನ್ ಡುಯಲ್ ಕೋರ್ ಅಥವಾ ಕ್ವಾಡ್ ಕೋರ್ ಪೆಂಟಿನಮ್ ಎನ್5000ಸಿರೀಸ್ ಪ್ರೊಸೆಸರ್ ನ್ನು ಕೊಂಡುಕೊಳ್ಳಬೇಕಾಗುತ್ತದೆ. ಇದರಲ್ಲಿ ಏಸರ್,ಅಸುಸ್ ಮತ್ತು ಲೆನೊವಾ ಕಂಪೆನಿಯ ಲ್ಯಾಪ್ ಟಾಪ್ ಗಳು ಸಿಗಬಹುದು.ಎಎಂಡಿ ಅಥ್ಲಾನ್ ಸಿಲ್ವರ್ 3050ಯುಪ್ರೊಸೆಸರ್ ನ್ನು ನೀವು ಕೂಡ ಈ ಬಜೆಟ್ ನಲ್ಲಿ ಪಡೆಯಬಹುದು.

ಇದೀಗ ಲೋ ಎಂಡ್ ಪ್ರೊಸೆಸರ್ ಗಳನ್ನು ಹೊಂದಿರುವ ಇಂಟೆಲ್ ಮತ್ತು ಎಎಂಡಿಗಳನ್ನು ಖರೀದಿಸುವುದು ಅಷ್ಟು ಸೂಕ್ತವಲ್ಲ.25,000ದ ಒಳಗಿನ ಲ್ಯಾಪ್ ಟಾಪ್ ಗಳು ಕೆಲವು ಬೇಸಿಕ್ ಫೀಚರ್ ಗಳನ್ನು ಮಾತ್ರವೇ ಹೊಂದಿರುವ ಸಾಧ್ಯತೆಗಳಿರುತ್ತದೆ. ವೆಬ್ ಬ್ರೌಸಿಂಗ್,ಎಂಎಸ್ ಆಫೀಸ್ ನಲ್ಲಿ ಕೆಲಸ ಮಾಡೋದು, ಕೆಲವು ಬೇಸಿಕ್ ಕೆಲಸಗಳನ್ನು ಮಾಡುವುದಕ್ಕೆ ಮಾತ್ರವೇ ಈ ಲ್ಯಾಪ್ ಟಾಪ್ ಗಳು ಪ್ರಯೋಜನಕಾರಿ.

ಗೂಗಲ್ ಕ್ರೋಮ್ ನಲ್ಲಿ ಕೆಲಸ ಹೆಚ್ಚು ಮಾಡುವವರಾಗಿದ್ದು ಒಂದು ವೇಳೆ ಮೆಮೊರಿ ಬಳಕೆ ಅಧಿಕವಿದ್ದಲ್ಲಿ ಗೂಗಲ್ ಕ್ರೋಮ್ ನಲ್ಲಿ ಆರನೇ ಟ್ಯಾಬ್ ತೆರೆದು ಕೆಲಸ ಮಾಡಲು ಕಷ್ಟವಾಗಬಹುದು.ಝೂಮ್,ಗೂಗಲ್ ಮೀಟ್ ಇತ್ಯಾದಿ ವೀಡಿಯೋ ಕಾನ್ಫರೆನ್ಸ್ ಗಳನ್ನು ಮಾಡಲು ಬಹಳ ಕಷ್ಟವೆನಿಸಬಹುದು. ಸ್ಕ್ರೀನ್ ಶೇರ್,ಮಲ್ಟಿಟಾಸ್ಕ್ ಮಾಡುವುದಕ್ಕೆ ಇವು ಅಷ್ಟೇನು ಪ್ರಯೋಜನಕಾರಿಯಲ್ಲದೆ ಇರಬಹುದು.

ಹಾಗಾಗಿ ಬಜೆಟ್ ನ್ನು ಇನ್ನಷ್ಟು ಹೆಚ್ಚಿಸಬೇಕು ಅಂದುಕೊಂಡರೂ 25000 ವೇ ದೊಡ್ಡ ಮೊತ್ತವೆನಿಸಿ ನೀವು ಸುಮ್ಮನಾಗಬಹುದು.25,000 ಬಜೆಟ್ ನಲ್ಲಿ ನೀವು ಬಹಳ ಕಡಿಮೆ ಆಯ್ಕೆಗಳನ್ನು ವಿಂಡೋಸ್ ಲ್ಯಾಪ್ ಟಾಪ್ ಗಳಲ್ಲಿ ಗಮನಿಸುತ್ತೀರಿ.

ಕ್ರೋಮ್ ಬುಕ್ ಖರೀದಿಸಿದರೆ ಹೇಗೆ?

21,999 ರುಪಾಯಿ ಬೆಲೆಗೆ ಇತ್ತೀಚೆಗೆ ಕ್ರೋಮ್ ಬುಕ್ ನ್ನು ಹೆಚ್ ಪಿ ಸಂಸ್ಥೆ ಬಿಡುಗಡೆಗೊಳಿಸಿದೆ. ಹೆಚ್ಚಿನವರಿಗೆ ತಿಳಿದಿಲ್ಲ ಕ್ರೋಮ್ ಬುಕ್ ಗೂಗಲ್ ಕ್ರೋಮ್ ಆಪರೇಟಿಂಗ್ ಸಿಸ್ಟಮ್ ನಿಂದ ರನ್ ಆಗುತ್ತದೆ ಮತ್ತು ವಿಂಡೋಸ್ ನಿಂದ ಇದರಲ್ಲಿ ಮಾಡುವುದೇನೂ ಇಲ್ಲ. ನೀಡುವ ಅನುಭವಗಳು ಒಂದೇ ರೀತಿಯಾಗಿದ್ದರೂ,ಆಂಡ್ರಾಯ್ಡ್ ಫೋನ್ ಬಳಸಿದ ರೀತಿಯಲ್ಲಿ ಅನ್ನಿಸುತ್ತದೆ.ಭಾರತದಲ್ಲಿ ಕ್ರೊಮೋಬುಕ್ ಗಳು ಅಷ್ಟು ಪ್ರಸಿದ್ಧಿಯಾಗಿಲ್ಲ.ಆದರೆ ಹೆಚ್ ಪಿ ಕ್ರೊಮೋ ಬುಕ್ ನಿಮಗೆ ನಿಮ್ಮ ಮನಸ್ಥಿತಿಯನ್ನು ಬದಲಿಸಬಹುದು. ಯಾಕೆಂದರೆ ಇದು ಗೂಗಲ್ ಇಕೋಸಿಸ್ಟಮ್ ನ್ನುಹೊಂದಿದೆ.

ಆಂಡ್ರಾಯ್ಡ್ ನಲ್ಲಿ ಆಪ್ ಗಳನ್ನು ಬಳಸಿದಂತೆಯೇ ಕ್ರೋಮ್ ಬುಕ್ ಬಳಕೆ ಅನ್ನಿಸುತ್ತದೆ.ಆನ್ ಲೈನ್ ಕ್ಲಾಸ್ ಗಳಿಗೆ ಕ್ರೋಮ್ ಬುಕ್ ಗಳು ಖಂಡಿತ ಓಕೆ ಅನ್ನಿಸುವಂತಹವುಗಳೇ.ಆದರೆ 25000 ದ ವಿಂಡೋಸ್ ಲ್ಯಾಪ್ ಟಾಪ್ ಗಳಿಗಿಂತ ಗೂಗಲ್ ವಾತಾವರಣ ಬಳಸುವವರಿಗೆ ಕ್ರೋಮ್ ಬುಕ್ ಖಂಡಿತ ಹೇಳಿ ಮಾಡಿಸಿದ್ದೇ ಆಗಿದೆ.

ಕಡಿಮೆ ಬಜೆಟ್ಟಿನ ವಿಂಡೋಸ್ ಲ್ಯಾಪ್ ಟಾಪ್ ನ ಸ್ಥಾನವನ್ನು ಆಂಡ್ರಾಯ್ಡ್ ಟ್ಯಾಬ್ಲೆಟ್ ಗಳು ತುಂಬಲಿವೆಯೇ?

ಕೆಲಸ ಮತ್ತು ವಿಧ್ಯಾಬ್ಯಾಸಕ್ಕೆ ಲ್ಯಾಪ್ ಟಾಪ್ ನ್ನು ಆಯ್ಕೆ ಮಾಡುವುದಕ್ಕೆ ಪ್ರಮುಖ ಕಾರಣವೆಂದರೆ ದೊಡ್ಡ ಸ್ಕ್ರೀನ್.ಕೀಬೋರ್ಡ್ ಮತ್ತು ಮೌಸ್ ನ ಅಧ್ಬುತ ಅನುಭವಗಳು. ಇದೀಗ ಸಿಹಿ ಸುದ್ದಿ ಏನೆಂದರೆ ಕೀಬೋರ್ಡ್ ಮತ್ತು ಮೌಸ್ ನ್ನು ಆಂಡ್ರಾಯ್ಡ್ ಟ್ಯಾಬ್ಲೆಟ್ ಗಳಿಗೂ ಕೂಡ ಅಟ್ಯಾಚ್ ಮಾಡಬಹುದಾಗಿದೆ.ಸ್ಕ್ರೀನ್ ಸೈಜ್ ಬಗ್ಗೆ ಮಾತನಾಡುವುದಾದರೆ ಅದಾಗಲೇ 10 ಇಂಚಿನ ಸ್ಕ್ರೀನ್ ಹೊಂದಿರುವ ಟ್ಯಾಬ್ಲೆಟ್ ಗಳು ಲಭ್ಯವಿದೆ. ವಿಧ್ಯಾಬ್ಯಾಸದ ವಿಚಾರಕ್ಕೆ ಈ ಸ್ಕ್ರೀನ್ ಸೈಜ್ ಖಂಡಿತ ಸಾಕಾಗುತ್ತದೆ.ಟ್ಯಾಬ್ಲೆಟ್ ನಲ್ಲಿ ಉತ್ತಮ ಬ್ಯಾಟರಿ ಲೈಫ್,ಕ್ಯಾಮರಾ ಕ್ವಾಲಿಟಿ,ಉತ್ತಮ ಪ್ರದರ್ಶನವಿರುತ್ತದೆ.ಆಂಡ್ರಾಯ್ಡ್ ಸದ್ಯವಿರುವ ಪ್ರಸಿದ್ಧ ಆಪರೇಟಿಂಗ್ ಸಿಸ್ಟಮ್ ಆಗಿದೆ.ಶಾಲೆಯ ಮಕ್ಕಳು ಬಳಸಬೇಕಾದ ಯಾವುದೇ ಆಪ್ ಗಳು ಇದ್ರಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಲಾಗುವುದಿಲ್ಲ.

ಸ್ಯಾಮ್ ಸಂಗ್,ಲೆನೋವಾ,ಇತರೆ ಹಲವು ಟ್ಯಾಬ್ಲೆಟ್ ಗಳು 10,000 ರುಪಾಯಿಯಿಂದ ಆರಂಭವಾಗಿ 25,000 ರುಪಾಯಿವರೆಗೂ ಇದೆ.25,000 ರುಪಾಯಿ ಒಳಗಿನ ಹಲವು ಡಿವೈಸ್ ಗಳು ಲಭ್ಯವಾಗುತ್ತದೆ. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಹೈ ಎಂಡ್ ಲ್ಯಾಪ್ ಟಾಪ್ ಗಳನ್ನು ಖರೀದಿಸಬಹುದು. ಆ ಸಮಯಕ್ಕೆ ಅವರ ಟೆಕ್ನಿಕಲ್ ಸ್ಕಿಲ್ ಕೂಡ ಅಧಿಕವಾಗಿರುವ ಸಾಧ್ಯತೆ ಇರುತ್ತೆ ಜೊತೆಗೆ ಮಾರ್ಡನ್ ಡಿವೈಸ್ ಗಳು ಬಂದಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಆ ಸಮಯದವರೆಗೆ ನೀವು ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಕ್ರೋಮೋಬುಕ್ ಗಳನ್ನು ಆಯ್ಕೆ ಮಾಡುವುದೇ ಸೂಕ್ತ.ಹೆಚ್ಚಿನ ಆಕ್ಟಿವಿಟಿಗಳು ಆನ್ ಲೈನ್ ಕ್ಲಾಸ್ ಮತ್ತು ವಿಧ್ಯಾಬ್ಯಾಸಕ್ಕೆ ಸಂಬಂಧಿಸಿದ್ದೇ ಆಗಿರುವುದರಿಂದಾಗಿ ಲ್ಯಾಪ್ ಟಾಪ್ ಗಿಂತ ಹೆಚ್ಚಾಗಿ ಆಂಡ್ರಾಯ್ಡ್ ಟ್ಯಾಬ್ಲೆಟ್ ಗಳಲ್ಲಿ ಮುಗಿಸುವುದಕ್ಕೆ ಮಕ್ಕಳಿಗೆ ಸಾಧ್ಯಯವಿರುತ್ತದೆ.

No comments:

Post a Comment