Friday 11 June 2021

20ನೇ ಶತಮಾನದ ಭಾರತೀಯ ಬರಹಗಾರ, ನಾಟಕಕಾರ, ದಲಿತ ಕವಿ ಡಾ. ಸಿದ್ದಲಿಂಗಯ್ಯ ನಿಧನ

ಬೆಂಗಳೂರು: ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರು ನಿಧನರಾಗಿದ್ದಾರೆ. ಕೊರೊನಾ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ (67) ಇಂದು ಸಾವನಪ್ಪಿದ್ದಾರೆ. 


ಸಿದ್ದಲಿಂಗಯ್ಯ ಅವರು ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು.

ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್ಪೆರಿಯಾರ್ವಸುದೇವಭೂಪಾಲಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.



ಸಿದ್ದಲಿಂಗಯ್ಯ ಅವರು ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದರು. ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದರು.

1975ರಲ್ಲಿ ಅವರ ಹೊಲೆಮಾದಿಗ ಹಾಡು, ಕವನ ಸಂಕಲನ ಪ್ರಕಟಗೊಂಡಿತು, ಬಳಿಕ ಸಾವಿರಾರು ನದಿಗಳು(1979), ಕಪ್ಪುಕಾಡಿನ ಹಾಡು(1982), ಮೆರವಣಿಗೆ(2000), ನನ್ನ ಜನರು(2005) ಇತರ ಕವನಗಳು, ಆತ್ಮಚರಿತ್ರೆ ನಾಟಕಗಳು, ವಿಮರ್ಶೆ ಮತ್ತು ಪ್ರಬಂಧಗಳು ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿನ ಅಭಿರುಚಿಗಳನ್ನು ಹೊರತಂದಿದ್ದರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಪಂಪ ಪ್ರಶಸ್ತಿ , ನೃಪತುಂಗ ಪ್ರಶಸ್ತಿ, ರಾಜ್ಸೋತ್ಸನ ಪ್ರಶಸ್ತಿ ನಾಡೋಜ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳಿಂದ ಸನ್ಮಾನಿಸಲಾಗಿದೆ

No comments:

Post a Comment