Monday 14 June 2021

ಜೂನ್ 15 ರಿಂದ ದಾಖಲಾತಿ ಪ್ರಾರಂಭ: ತೀರ್ಮಾನವಾಗದ ಶಾಲಾ ಶುಲ್ಕ

ಬೆಂಗಳೂರು : ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಆರಂಭಿಸಲು ಎಲ್ಲ ಶಾಲೆಗಳು ಸಿದ್ಧವಾಗಿದ್ದರೂ ಸರಕಾರ ಮತ್ತು ಶಿಕ್ಷಣ ಇಲಾಖೆ ಶುಲ್ಕ ಗೊಂದಲವನ್ನು ಇನ್ನೂ ಬಗೆಹರಿಸಿಲ್ಲ.


2021-22ನೇ ಸಾಲಿಗೆ ಜೂ. 15 ರಿಂದ ದಾಖಲಾತಿ ಆರಂಭಿಸಲು ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ. ಆದರೆ ಖಾಸಗಿ ಶಾಲೆಗಳು ಎಷ್ಟು ಶುಲ್ಕ ಪಡೆಯಬೇಕು ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಪೂರ್ಣ ಶುಲ್ಕ ಪಡೆಯುವ ನಿರ್ಧಾರ ಪ್ರಕಟಿಸಿವೆ. ಆದರೆ ಸರಕಾರ ಇನ್ನೂ ಮೌನವಾಗಿವೆ.

ಪೂರ್ಣ ಶುಲ್ಕ ಪಡೆಯುತ್ತೇವೆ.
ಈ ಸಾಲಿನಲ್ಲಿ ಪೂರ್ತಿ ಶುಲ್ಕ ಪಡೆಯುವುದಾಗಿ ಖಾಸಗಿ ಶಾಲಾಡಳಿತ ಮಂಡಳಿಗಳು, ಶಿಕ್ಷಕ-ಶಿಕ್ಷಕೇತರ ಸಮನ್ವಯ ಸಮಿತಿ ನಿರ್ಧರಿಸಿದೆ. ಸರಕಾರ ಶೇ. 30ರಷ್ಟು ಶುಲ್ಕ ಕಡಿತ ಆದೇಶ ನೀಡಿದರೆ ಕೋರ್ಟ್‌ ಮೊರೆ ಹೋಗುವುದಾಗಿ ಈ ಸಮಿತಿ ಹೇಳಿದೆ.


ಶೇ. 30 ಕಡಿತ ಪ್ರಸ್ತಾವನೆ.
2020-21ನೇ ಸಾಲಿಗೆ ಬೋಧನ ಶುಲ್ಕದಲ್ಲಿ ಶೇ. 30ರಷ್ಟು ಕಡಿತ ಮಾಡಿ ನೀಡಿರುವ ಆದೇಶವನ್ನು 2021-22ನೇ ಸಾಲಿಗೂ ವಿಸ್ತರಿಸಲು ಸರಕಾರಕ್ಕೆ ಶಿಕ್ಷಣ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರ ಇದೇ ರೀತಿ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ ಎಂದು ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶಾಲಾ ಮಕ್ಕಳ ಶುಲ್ಕಕ್ಕೆ ಸಂಬಂಧಿಸಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಪ್ರಕಟಿಸಲಾಗುತ್ತದೆ. ಕಾನೂನಾತ್ಮಕವಾಗಿ ಏನೇನು ಮಾಡಬಹುದು ಎಂಬುದರ ಬಗ್ಗೆ ಯೋಚಿಸುತ್ತೇವೆ.
– ಬಿ.ಎಸ್‌. ಯಡಿಯೂರಪ್ಪ , ಮುಖ್ಯಮಂತ್ರಿ

No comments:

Post a Comment