Thursday 10 June 2021

ವಿಶ್ವದ ಟಾಪ್ ಸಂಶೋಧನಾ ವಿವಿಯಲ್ಲಿ ಬೆಂಗಳೂರಿನ ಐಐಎಸ್ಸಿ ನಂ. 1


 ಬೆಂಗಳೂರು, ಜೂನ್ 9: ಭಾರತದ ಮೂರು ವಿಶ್ವವಿದ್ಯಾಲಯಗಳು ಕ್ಯೂ.ಎಸ್. ವಿಶ್ವವಿದ್ಯಾಲಯ ಶ್ರೇಯಾಂಕಗಳು 2022ರಲ್ಲಿ ಉನ್ನತ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬೆಂಗಳೂರಿನ ಐ.ಐ.ಎಸ್.ಸಿ.ಯು ಸಂಶೋಧನೆಗೆ ಸಂಬಂಧಿಸಿದಾ ಪಟ್ಟಿಯಲ್ಲಿ ವಿಶ್ವದಲ್ಲಿಯೇ ಒಂದನೇ ಸ್ಥಾನದಲ್ಲಿದೆ. ಜಾಗತಿಕ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆ ಕ್ಯೂಎಸ್ ಕ್ವಾಕರೇಲಿ ಸೀಮಂಡ್ಸ್ ಇಂದು ಜಾಗತಿಕ ಅಂತಾರಾಷ್ಟ್ರೀಯ ಶ್ರೇಯಾಂಕಗಳ 18 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಐ.ಐ.ಟಿ. ಬಾಂಬೆ 177 ನೇ ಸ್ಥಾನವನ್ನು ಗಳಿಸಿದೆ. ಐ.ಐ.ಟಿ. ದಿಲ್ಲಿ 185 ನೇ ಸ್ಥಾನ ಪಡೆದಿದೆ ಮತ್ತು ಐ.ಐ.ಎಸ್.ಸಿ ಬೆಂಗಳೂರು, ವಿಶ್ವವಿದ್ಯಾಲಯಗಳ ಶ್ರೇಯಾಂಕಗಳಲ್ಲಿ 186 ನೇ ಸ್ಥಾನ ಪಡೆದಿದ್ದು, ಕೇಂದ್ರ ಶಿಕ್ಷಣ ಸಚಿವರಾದ ರಮೇಶ ಪೋಖ್ರಿಯಾಲ್ ಅಭಿನಂದಿಸಿದ್ದಾರೆ.


ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಭಾರತವು ದಾಪುಗಾಲಿಕ್ಕುತ್ತಿದೆ ಮತ್ತು ಅದು ವಿಶ್ವಗುರುವಾಗಿ ಹೊರಹೊಮ್ಮುತ್ತಿದೆ ಎಂದು ಶ್ರೀ ಪೋಖ್ರಿಯಾಲ್ ಹೇಳಿದ್ದಾರೆ. ನಾವು ಗುರು ವಿನಂತಹ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಹೊಂದಿರುವ ಬಗ್ಗೆ ಅಷ್ಟೇ ಹೆಮ್ಮೆ ಪಡುತ್ತೇವೆ, ಅವರು ವಿದ್ಯಾರ್ಥಿಗಳು, ಬೋಧಕ ವರ್ಗ ಮತ್ತು ಭಾರತೀಯ ಶಿಕ್ಷಣ ವಲಯದ ಇತರ ಎಲ್ಲಾ ಭಾಗೀದಾರರ ಕಲ್ಯಾಣದ ಬಗ್ಗೆ ನಿರಂತರ ಚಿಂತಿಸುತ್ತಿರುತ್ತಾರೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.


ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ಶ್ರೇಷ್ಠತಾ ಸಂಸ್ಥೆಗಳಂತಹ ಉಪಕ್ರಮಗಳು ನಮ್ಮ ಕಾಲೇಜುಗಳನ್ನು ಮತ್ತು ಸಂಸ್ಥೆಗಳನ್ನು ಜಾಗತಿಕವಾಗಿ ಶ್ರೇಯಾಂಕಕ್ಕೆ ಪರಿಗಣಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿವೆ ಎಂದೂ ಸಚಿವರು ಹೇಳಿದ್ದಾರೆ. ಇದನ್ನು ಕ್ಯೂ ಎಸ್ ಮತ್ತು ಟೈಮ್ಸ್ ಗುಂಪು ಘೋಷಿಸಿದ ವಿಶ್ವವಿದ್ಯಾಲಯ ಶ್ರೇಯಾಂಕಗಳನ್ನು ನೋಡಿದಾಗ ಅನುಭವಕ್ಕೆ ಬರುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ಯು.ಎಸ್. ಜಗತ್ತಿನ ವಿಶ್ವವಿದ್ಯಾಲಯಗಳ ಶ್ರೇಯಾಂಕ 2022ರ ಮೊದಲ 200ರಲ್ಲಿ ಸ್ಥಾನ ಪಡೆದಿರುವ ಐಐಟಿ ಬಾಂಬೆ, ಐಐಟಿ ದೆಹಲಿ ಮತ್ತು ಐಐಎಸ್ಸಿ ಬೆಂಗಳೂರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

"@ಐಐಎಸ್ಸಿ ಬೆಂಗಳೂರು, @ಐಐಟಿಬಾಂಬೆ ಮತ್ತು @ಐಐಟಿ ದೆಹಲಿಗೆ ಅಭಿನಂದನೆಗಳು. ಭಾರತದ ಇನ್ನೂ ಹಲವು ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ಜಾಗತಿಕ ಔನ್ನತ್ಯ ಖಾತ್ರಿಪಡಿಸಲು ಮತ್ತು ಯುವಕರಲ್ಲಿನ ಬೌದ್ಧಿಕ ಶಕ್ತಿಯನ್ನು ಬೆಂಬಲಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

No comments:

Post a Comment