Tuesday, 1 June 2021

ಇಂದಿನ ಗ್ರಹಬಲ: ಯಾರಿಗೆ ಶುಭ? ಯಾರಿಗೆ ಲಾಭ?


 01-06-2021

ಮೇಷ: ನಿಮ್ಮ ಆಪ್ತರು ಬೇಜವಾಬ್ದಾರಿಯಿಂದ ವರ್ತಿಸಬಹುದು. ಅದರ ಹೊಣೆಗೇಡಿತನವು ನಿಮ್ಮನ್ನು ಕಷ್ಟಕ್ಕೆ ಸಿಲುಕಿಸಬಹುದು. ಎಚ್ಚರದಿಂದಿರಿ. ಅನಿರೀಕ್ಷಿತ ದೂರ ಸಂಚಾರದ ಸಾಧ್ಯತೆ ಕಾರ್ಯಾನುಕೂಲವಾಗಲಿದೆ.

ವೃಷಭ: ಸಾಮಾಜಿಕ ಚಟುವಟಿಕೆಗಳಲ್ಲಿ ಬಹು ಚುರುಕಾಗಿ ಕೆಲಸ ಮಾಡಲಿದ್ದೀರಿ. ಯಾವುದೇ ಕೆಲಸ ಮಾಡುವ ಮುನ್ನ ದುಡುಕದೆ ಪೂರ್ವ ತಯಾರಿಯ ಅಗತ್ಯವಿದೆ. ಗೆಳೆಯರ ಬಳಗವು ಬಹಳ ದೊಡ್ಡದಾದೀತು.

ಮಿಥುನ: ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಜಾಗ್ರತೆ ಮಾಡುವುದು. ನಿಮ್ಮ ಸ್ಫೂರ್ತಿಯು ನಿಮ್ಮನ್ನು ಮುನ್ನಡೆಸಿ ವಿಜಯದ ಪಥದತ್ತ ಸಾಗಿಸಲಿದೆ. ಬ್ಯಾಂಕ್‌, ಫೈನಾನ್ಸ್‌ಗಳಲ್ಲಿ ಆದಾಯ ವೃದ್ಧಿ ಇದೆ.

ಕರ್ಕ: ನಿಮ್ಮ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯು ಹೆಚ್ಚಲಿದೆ. ಅವಿವಾಹಿತರಿಗೆ ಮಾತುಕತೆಯಿಂದ ವೈವಾಹಿಕ ಸಂಬಂಧವು ಕುದುರಲಿದೆ. ಕೆಲವೊಂದು ಅದ್ಭುತ ಹೊಳಹುಗಳು ನಿಮ್ಮ ಗೋಚರಕ್ಕೆ ಬರಲಿದೆ.

ಸಿಂಹ: ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ವಿಶ್ವಾಸವಿರಲಿ. ಮೇಲಾಧಿಕಾರಿಗಳಿಂದ ಮೆಚ್ಚುಗೆ ಗಳಿಸಲಿದ್ದೀರಿ. ಸಾಮಾಜಿಕ ಕ್ಷೇತ್ರದಲ್ಲಿ ಯಶಸ್ಸು, ಸೂಕ್ತ ಸ್ಥಾನಮಾನವು ನಿಮ್ಮದಾಗಲಿದೆ. ಗೃಹದಲ್ಲಿ ಮಂಗಲಕಾರ್ಯದ ತಯಾರಿ.

ಕನ್ಯಾ: ಭವಿಷ್ಯಕ್ಕೆ ಒಳ್ಳೆಯ ಯೋಜನೆ ರೂಪಿಸಲು ಇದು ಸಕಾಲವೆನ್ನಬಹುದು. ಆಗಾಗ ಅನಿರೀಕ್ಷಿತ ಖರ್ಚುವೆಚ್ಚಗಳು ಬಂದೊದಗಬಹುದು. ಉಳಿತಾಯದ ಹೆಚ್ಚಳಕ್ಕೆ ಗಮನ ನೀಡಿರಿ. ಮುಂದಕ್ಕೆ ಉಪಯೋಗವಿದೆ.

ತುಲಾ: ನಿಮ್ಮ ಉದಾಸೀನತೆಯ ವಿಳಂಬ ನೀತಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಲಿದೆ. ಶೇರು, ಬಿಜಿನೆಸ್‌, ಲಾಟರಿ ಫೈನಾನ್ಸ್‌ಗಳ ಬಗ್ಗೆ ಭರವಸೆ ಬೇಡ. ವಿದ್ಯಾರ್ಥಿಗಳಿಗೆ ಫ‌ಲಿತಾಂಶದಿಂದ ನಿರಾಸೆ.

ವೃಶ್ಚಿಕ: ಗೃಹಿಣಿಗೆ ಅನಾವಶ್ಯಕವಾಗಿ ಉದ್ವೇಗ, ಕೋಪ-ತಾಪಗಳು ಹೆಚ್ಚಾದೀತು. ಆರೋಗ್ಯದ ಕಡೆ ಗಮನಹರಿಸುವುದು ಉತ್ತಮ. ಕೆಲವೊಮ್ಮೆ ವಿಷವೂ ಅಮೃತವಾದೀತು. ವೃತ್ತಿಯಲ್ಲಿ ಸ್ತ್ರೀ ಮೂಲಕ ಅಪವಾದ ಭೀತಿ.

ಧನು: ಯಾವುದಕ್ಕೂ ನಿಧಾನಗತಿಯ ದಿನಗಳಿವು. ವೃತ್ತಿರಂಗದಲ್ಲಿ ಆಶಾಭಂಗವಾಗಲಿದ್ದರೂ ಕಾರ್ಯಸಿದ್ಧಿಯಿಂದ ನೆಮ್ಮದಿ ಸಿಗಲಿದೆ. ಮಕ್ಕಳ ವೈವಾಹಿಕ ಸಂಬಂಧ ವಿಚಾರದಲ್ಲಿ ಮಾತುಕತೆಯು ಮಂಗಲ ಹಾಡಲಿದೆ.

ಮಕರ: ನೀವು ಬಯಸಿದ್ದು ದೊರಕಲಾರದು. ಆ ಬಗ್ಗೆ ಕೊರಗುತ್ತಾ ಕೂರಬೇಡಿರಿ. ಮುಂದಿನ ಯೋಜನೆಗೆ ಕಾರ್ಯರೂಪಿಸಿರಿ. ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಆಶಾವಾದಿಗಳಾಗಿರಿ. ಭರವಸೆಯನ್ನಿಡಿರಿ.

ಕುಂಭ: ಸರಕಾರೀ ಕೆಲಸ ಕಾರ್ಯಗಳು ಕಾರ್ಯ ರೂಪಕ್ಕೆ ಬರಲಿದೆ. ಸಂಬಂಧಗಳನ್ನು ಜತನ ದಿಂದ ಕಾಯ್ದುಕೊಳ್ಳಿರಿ. ಸಂಬಂಧ ಕೆಡಿಸುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಂಡರೆ ಉತ್ತಮ.

ಮೀನ: ಅವಿವಾಹಿತರಿಗೆ ವಿವಾಹಯೋಗ ತಡೆ-ತೊಂದರೆಗಳಿಂದಲೇ ಕಾರ್ಯಸಿದ್ಧಿಯಾಗಲಿದೆ. ಆರೋಗ್ಯದ ಕಡೆ ಗಮನ ಅಗತ್ಯವಿದೆ. ಸಾಂಸಾರಿಕವಾಗಿ ಕಲಹ, ಭಿನ್ನಾಭಿಪ್ರಾಯಗಳಿಗೆ ಬಲಿಯಾಗದಿರಿ. ಶುಭವಿದೆ.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...