Monday, 21 November 2022

Kane Williamson: ಮೂರನೇ ಟಿ20ಗೂ ಮುನ್ನ ಟೀಮ್ ಇಂಡಿಯಾಕ್ಕೆ ಸಿಕ್ತು ಗುಡ್​ ನ್ಯೂಸ್: ನ್ಯೂಜಿಲೆಂಡ್​ಗೆ ಬಿಗ್ ಶಾಕ್

Team India and kane williamson

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಟಿ20 ಸರಣಿ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ವೆಲ್ಲಿಂಗ್ಟನ್​ನಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಮೌಂಟ್ ಮೌಂಗನುವಿನ ಬೇ ಓವಲ್ ಮೈದಾನದಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 65 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಪಡೆ 1-0 ಮುನ್ನಡೆ ಪಡೆದುಕೊಂಡಿದೆ. ಉಳಿದಿರುವ ಒಂದು ಪಂದ್ಯ ನವೆಂಬರ್ 22 ಮಂಗಳವಾರದಂದು ನೆಪಿಯರ್​ನ ಮಕ್​ಲಿನ್ ಪಾರ್ಕ್​ನಲ್ಲಿ ನಡೆಯಲಿದೆ. ಇದರಲ್ಲಿ ಭಾರತ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಸೋತರೆ ಸಮಬಲ ಆಗಲಿದೆ. ಹೀಗಾಗಿ ಮಾನ ಉಳಿಸಿಕೊಳ್ಳಲು ಕಿವೀಸ್ ಪಡೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಹೀಗಿರುವಾಗ ನ್ಯೂಜಿಲೆಂಡ್​ಗೆ ದೊಡ್ಡ ಆಘಾತ ಉಂಟಾಗಿದೆ. ಇದು ಭಾರತಕ್ಕಂತು ಶುಭ ಸುದ್ದಿ.

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅಂತಿಮ ಮೂರನೇ ಟಿ20 ಪಂದ್ಯದಿಂದ ಹೊರಬಿದ್ದಿದ್ದಾರೆ. ಪೂರ್ವ ನಿಯೋಜಿತ ವೈದ್ಯಕೀಯ ತಪಾಸಣೆ ಇರುವ ಕಾರಣ ತೃತೀಯ ಟಿ20 ಯಲ್ಲಿ ಕೇನ್ ಕಣಕ್ಕಿಳಿಯುತ್ತಿಲ್ಲ. “ಬ್ಲ್ಯಾಕ್‌ಕ್ಯಾಪ್ಸ್ ನಾಯಕ ಕೇನ್ ವಿಲಿಯಮ್ಸನ್ ಮಂಗಳವಾರ ನೆಪಿಯರ್‌ನಲ್ಲಿ ನಡೆಯಲಿರುವ ಮೂರನೇ T20I ಅನ್ನು ಪೂರ್ವ ನಿಗದಿತ ವೈದ್ಯಕೀಯ ಅಪಾಯಿಂಟ್‌ಮೆಂಟ್‌ಗೆ ಹಾಜರಾಗಲಿರುವ ಕಾರಣ ಆಡುತ್ತಿಲ್ಲ,” ಎಂದು ಸೋಮವಾರ ನ್ಯೂಜಿಲೆಂಡ್ ಕ್ರಿಕೆಟ್ (NZC) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇವರ ಬದಲು ಆಕ್ಲೆಂಡ್ ಏಸಸ್ ಬ್ಯಾಟ್ಸ್‌ಮನ್ ಮಾರ್ಕ್ ಚಾಪ್‌ಮನ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಏಕದಿನ ಪಂದ್ಯ ಆರಂಭವಾಗುವ ಹೊತ್ತಿಗೆ ವಿಲಿಯಮ್ಸನ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ದ್ವಿತೀಯ ಟಿ20 ಪಂದ್ಯದಲ್ಲಿ ವಿಲಿಯಮ್ಸನ್ ತಂಡದ ಗೆಲುವಿಗೆ ಕಠಿಣ ಹೋರಾಟ ನಡೆಸಿದರು. 52 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ ಬಾರಿಸಿ 61 ರನ್ ಗಳಿಸಿದರು. ಆದರೆ, ಇವರಿಗೆ ಇತರೆ ಬ್ಯಾಟರ್​ಗಳು ಸಾಥ್ ನೀಡಲಿಲ್ಲ. ಇದರ ನಡುವೆ ಕೇನ್ ಅವರ ಕಡಿಮೆ ಸ್ಟ್ರೈಕ್ ರೇಟ್‌ ಕೂಡ ತಂಡಕ್ಕೆ ಚಿಂತೆಯಾಗಿದೆ. ಈ ವರ್ಷ 13 ಪಂದ್ಯಗಳಲ್ಲಿ ಕೇನ್ ಬ್ಯಾಟ್​ನಿಂದ ಕೇವಲ ಮೂರು ಅರ್ಧಶತಕ ಬಂದಿದೆಯಷ್ಟೆ. 36.91 ಸರಾಸರಿಯಲ್ಲಿ 443 ರನ್ ಗಳಿಸಿದ್ದಾರೆ. ಕೇನ್ ವಿಲಿಯಮ್ಸನ್ ಅಲಭ್ಯತೆಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮೂರನೇ ಟಿ20 ಪಂದ್ಯದಲ್ಲಿ ಟಿಮ್ ಸೌಥೀ ನಾಯಕನಾಗಿ ಮುನ್ನಡೆಸಲಿದ್ದಾರೆ.

ಸೂರ್ಯನ ಬಗ್ಗೆ ಕೇನ್ ಮೆಚ್ಚುಗೆ:

ಎರಡನೇ ಟಿ20 ಪಂದ್ಯದಲ್ಲಿ ಭಾರತ ಪರ ಆಕರ್ಷಕ ಶತಕ ಸಿಡಿಸಿ ಮಿಂಚಿದ ಸೂರ್ಯಕುಮಾರ್ ಯಾದವ್ ಬಗ್ಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯ್ಸನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಕೇನ್, ”ಸೂರ್ಯಕುಮಾರ್ ಆಟದ ವೈಕರಿ ಈ ಪ್ರಪಂಚದಿಂದಲೇ ಹೊರತಾಗಿದೆ. ನಾನು ನೋಡಿದ ಬೆಸ್ಟ್ ಇನ್ನಿಂಗ್ಸ್‌ನಲ್ಲಿ ಇದು ಒಂದು. ಆತನ ಕೆಲವೊಂದು ಶಾಟ್‌ಗಳನ್ನು ನಾನು ಇದುವರೆಗೂ ನೋಡಿಯೇ ಇರಲಿಲ್ಲ. ಅವರ ಒಂದೊಂದು ಹೊಡೆತಗಳು ಅದ್ಭುತವಾಗಿದ್ದವು. ಸೂರ್ಯ ವಿಶ್ವದ ಬೆಸ್ಟ್ ಕ್ರಿಕೆಟರ್‌ಗಳಲ್ಲಿ ಒಬ್ಬರು,” ಎಂದು ಹೇಳಿದ್ದಾರೆ.

ಸೂರ್ಯಕುಮಾರ್ ಕೇವಲ 51 ಎಸೆತಗಳಲ್ಲಿ ಬರೋಬ್ಬರಿ 11 ಫೋರ್ ಹಾಗೂ 7 ಮನಮೋಹಕ ಸಿಕ್ಸರ್ ಸಿಡಿಸಿ ಅಜೇಯ 111 ರನ್ ಚಚ್ಚಿದರು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡರು. ಇದರ ಜೊತೆಗೆ ದಾಖಲೆ ಕೂಡ ಬರೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕೂಡ ಟೀಮ್ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡಿತು. ಆಲ್ರೌಂಡರ್ ದೀಪಕ್ ಹೂಡ 2.5 ಓವರ್ ಬೌಲಿಂಗ್ ಮಾಡಿ ಕೇವಲ 10 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು.



source https://tv9kannada.com/sports/cricket-news/kane-williamson-has-been-ruled-out-of-the-third-and-final-t20i-against-india-in-napier-cricket-news-in-kannada-vb-au48-473372.html

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...