
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಏಕದಿನ ಸರಣಿಯ ಮೊದಲ ಪಂದ್ಯ ಇಂದು ಆಕ್ಲೆಂಡ್‌ನಲ್ಲಿ ನಡೆಯುತ್ತಿದೆ. ಟಿ20 ಸರಣಿಯಲ್ಲಿ ಮಳೆಯ ಅವಾಂತರ ಉಂಟಾಗಿದ್ದು, ಈ ಬಾರಿಯೂ ಅದೇ ರೀತಿ ಆಗುವ ಸಾಧ್ಯತೆ ಇದೆ. ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರು ಇಲ್ಲ. ಹೀಗಾಗಿ ತಂಡದ ಶಿಖರ್ ಧವನ್ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ತಂಡ ತನ್ನ ಅನುಭವಿ ಆಟಗಾರರೊಂದಿಗೆ ಮೈದಾನಕ್ಕಿಳಿಯಲಿದೆ. ಈ ಮೊದಲು ಟಿ20 ಸರಣಿಯನ್ನು ಭಾರತ 1-0 ಅಂತರದಲ್ಲಿ ಗೆದ್ದುಕೊಂಡಿತ್ತು.
source https://tv9kannada.com/sports/cricket-news/india-vs-new-zealand-1st-odi-live-score-ind-vs-nz-cricket-match-updates-from-eden-park-in-auckland-in-kannada-psr-au14-475504.html
No comments:
Post a Comment