Thursday, 17 November 2022

IND vs AUS: ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸ: ಬರೋಬ್ಬರಿ 5 ವರ್ಷಗಳ ಬಳಿಕ ಡೆಲ್ಲಿಯಲ್ಲಿ ಟೆಸ್ಟ್ ಪಂದ್ಯ ಆಯೋಜನೆ

IND vs AUS

ಭಾರತ ಕ್ರಿಕೆಟ್ ತಂಡ ಸದ್ಯ ನ್ಯೂಜಿಲೆಂಡ್ (IND vs AUS) ಪ್ರವಾಸದಲ್ಲಿದೆ. ಇಲ್ಲಿ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿದೆ. ಬಳಿಕ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಮುಂದಿನ ವರ್ಷ ಕೂಡ ಟೀಮ್ ಇಂಡಿಯಾ (Team India) ಎಡೆಬಿಡದೆ ಕ್ರಿಕೆಟ್ ಆಡಲಿದೆ. ಮುಖ್ಯವಾಗಿ ಫೆಬ್ರವರಿ-ಮಾರ್ಚ್‌ ತಿಂಗಳಲ್ಲಿ ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯ (India vs Australia) ವಿರುದ್ಧ ಬಾರ್ಡರ್- ಗವಾಸ್ಕರ್ ಟ್ರೋಫಿಯ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ವೇಳೆ ಹೊಸದಿಲ್ಲಿಗೆ ಬರೋಬ್ಬರಿ 5 ವರ್ಷಗಳಷ್ಟು ಸುದೀರ್ಘಾವಧಿಯ ಬಳಿಕ ಟೆಸ್ಟ್‌ ಪಂದ್ಯವೊಂದರ ಆತಿಥ್ಯ ಲಭಿಸುವ ಸಾಧ್ಯತೆ ಇದೆ. 2017ರ ಡಿಸೆಂಬರ್‌ನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯವೇ ಇಲ್ಲಿ ನಡೆದ ಕೊನೆಯ ಟೆಸ್ಟ್‌ ಆಗಿದೆ. ಬಿಸಿಸಿಐ ರೊಟೇಷನ್‌ ಪದ್ಧತಿಯಂತೆ ದೆಹಲಿಗೆ ಐದು ವರ್ಷಗಳ ಬಿಡುವಿನ ಬಳಿಕ ಟೆಸ್ಟ್‌ ಆತಿಥ್ಯ ದೊರೆತಿದೆ.

ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಯಾವ ಪಂದ್ಯವನ್ನು ಹೊನಲು ಬೆಳಕಿನಡಿ (ಪಿಂಕ್‌ ಬಾಲ್‌) ನಡೆಸಬೇಕು ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಸರಣಿಯ ಉಳಿದ ಮೂರು ಟೆಸ್ಟ್‌ ಪಂದ್ಯ ಗಳಿಗಾಗಿ ಅಹ್ಮದಾಬಾದ್‌, ಧರ್ಮಶಾಲಾ ಮತ್ತು ಚೆನ್ನೈ ಆಯ್ಕೆಯಾಗಬಹುದು. ಕೋವಿಡ್‌ನಿಂದಾಗಿ ಎರಡು ವರ್ಷಗಳ ಆತಿಥ್ಯದಿಂದ ಹೊಸದಿಲ್ಲಿ ವಂಚಿತ ವಾಗಿತ್ತು. ಇಲ್ಲಿ ಸರಣಿಯ 3ನೇ ಟೆಸ್ಟ್‌ ನಡೆಯುವುದು ಬಹುತೇಕ ಖಚಿತವಾಗಿದೆ. ಈ ಸರಣಿಯ ವೇಳಾಪಟ್ಟಿ ಇನ್ನಷ್ಟೆ ಪ್ರಕಟವಾಗಬೇಕಿದೆ.

ವಾರ್ನರ್ ನಿವೃತ್ತಿ ಸಾಧ್ಯತೆ:

ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಆರಂಭಿಕ ಬ್ಯಾಟರ್​ ಡೇವಿಡ್ ವಾರ್ನರ್ ಸದ್ಯದಲ್ಲೇ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಹೊಂದುವ ಬಗ್ಗೆ ಸುಳಿವು ನೀಡಿದ್ದಾರೆ. ಆದರೆ ಅವರು ವೈಟ್​​ ಬಾಲ್ ಕ್ರಿಕೆಟ್ ಅಂಗಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್‌ನಿಂದ ಬೇಗ ನಿರ್ಗಮಿಸಿದ ಬಳಿಕ ವಾರ್ನರ್ ಈ ಹೇಳಿಕೆ ನೀಡಿದ್ದಾರೆ. ‘ಬಹುಶಃ ನಾನು ಟೆಸ್ಟ್ ಕ್ರಿಕೆಟ್​ನಿಂದ ಮೊದಲ ದೂರ ಉಳಿಯಬಹುದು. ಮುಂಬರುವ 12 ತಿಂಗಳುಗಳು ನನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯ ದಿನಗಳೂ ಆಗಬಹುದು. ಯಾಕೆಂದರೆ ಟಿ20 ವಿಶ್ವಕಪ್ ಟೂರ್ನಿಯು 2024 ಹಾಗೂ 2023ರಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಇದೆ’ ಎಂದು ಆಸ್ಟ್ರೇಲಿಯಾದ ಟಿವಿ ಕಾರ್ಯಕ್ರಮವೊಂದರಲ್ಲಿ ವಾರ್ನರ್ ಹೇಳಿಕೆ ನೀಡಿದ್ದಾರೆ.

ಭಾರತ- ನ್ಯೂಜಿಲೆಂಡ್ ಸರಣಿ:

ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್​ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದ ಎರಡು ತಂಡಗಳಾದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಕಾಳಗಕ್ಕೆ ಒಂದು ದಿನವಷ್ಟೆ ಬಾಕಿಯಿದೆ. ಈಗಾಗಲೇ ಕಿವೀಸ್ ನಾಡಿಗೆ ಟೀಮ್ ಇಂಡಿಯಾ ತಲುಪಿದ್ದು, ಅಭ್ಯಾಸ ಕೂಡ ಶುರು ಮಾಡಿದೆ. ಭಾರತ- ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿ ಆಯೋಜಿಸಲಾಗಿದೆ. ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ನೇತೃತ್ವದ ತಂಡ ಕಿವೀಸ್​ ನಾಡಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಿದೆ.

ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಉತ್ಸಾಹಿ ತರುಣರೇ ಇರುವ ಭಾರತ ತಂಡ 3 ಪಂದ್ಯಗಳ ಟಿ20 ಪಂದ್ಯವನ್ನಾಡಲಿದೆ. ಟಿ20 ಸರಣಿಯನ್ನು ಹಾರ್ದಿಕ್ ಪಾಂಡ್ಯ ನಾಯಕನಾಗಿ ಮುನ್ನಡೆಸಲಿದ್ದಾರೆ. ಶಿಖರ್ ಧವನ್ ಏಕದಿನ ಸರಣಿಗೆ ಕ್ಯಾಪ್ಟನ್ ಆಗಿದ್ದಾರೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅವರಿಗೆ ನ್ಯೂಜಿಲೆಂಡ್ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ.



source https://tv9kannada.com/sports/cricket-news/india-vs-australia-border-gavaskar-four-match-series-delhi-will-be-hosting-a-test-match-after-more-than-five-years-vb-au48-471352.html

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...