Saturday, 19 November 2022

FIFA World Cup 2022: ಫಿಫಾ ವಿಶ್ವಕಪ್ 2022 ಆರಂಭಕ್ಕೆ ಒಂದೇ ದಿನ ಬಾಕಿ: ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಾ

FIFA World Cup 2022

ಬಹುನಿರೀಕ್ಷಿತ ಫಿಫಾ ವಿಶ್ವಕಪ್‌ 2022 ಫುಟ್​​ಬಾಲ್‌ (FIFA World Cup 2022) ಪಂದ್ಯಾವಳಿ ಆರಂಭಕ್ಕೆ ಕೇವಲ ಒಂದು ದಿನವಷ್ಟೇ ಬಾಕಿಯಿದೆ. ಫುಟ್​​ಬಾಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಕತಾರ್ (Qatar) ವಿಶ್ವಕಪ್ ಅನ್ನು ಆಯೋಜಿಸಲು ಸಿದ್ಧವಾಗಿ ನಿಂತಿದೆ. ಆತಿಥೇಯ ರಾಷ್ಟ್ರ ಎನ್ನುವ ಕಾರಣಕ್ಕೆ ಕತಾರ್​ಗೆ ನೇರ ಪ್ರವೇಶ ದೊರೆಯಿತು. ಈ ಬಾರಿಯ ಫುಟ್​ಬಾಲ್ (Football) ಫೀವರ್​ಗೆ ನವೆಂಬರ್ 20ಕ್ಕೆ ಚಾಲನೆ ಸಿಗಲಿದ್ದು ಡಿಸೆಂಬರ್ 18 ರಂದು ಕೊನೆಗೊಳ್ಳುತ್ತದೆ. ಕಾಲ್ಚೆಂಡಿನ ಕಾದಾಟಕ್ಕೆ 32 ತಂಡಗಳು ಭರದ ಸಿದ್ಧತೆಯಲ್ಲಿ ತೊಡಗಿವೆ. ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ನಾಕೌಟ್‌ ಹಂತಕ್ಕೆ ಪ್ರವೇಶಿಸಲಿವೆ. 8 ಪ್ರಿ ಕ್ವಾರ್ಟರ್‌ ಫೈನಲ್‌, 4 ಕ್ವಾರ್ಟರ್‌ ಫೈನಲ್‌, 2 ಸೆಮಿಫೈನಲ್‌ಗಳ ಬಳಿಕ ಫೈನಲ್‌ಗೇರುವ ತಂಡಗಳು ಯಾವುವು ಎನ್ನುವುದು ನಿರ್ಧಾರವಾಗಲಿದೆ. ಹೀಗೆ ಸಾಕಷ್ಟು ರೋಚಕತೆ ಸೃಷ್ಟಿಸಿರುವ ಈ ಪಂದ್ಯಾವಳಿಯ ಟಿಕೆಟ್ ದರ ಕೇಳಿದ್ರೆ ಅಚ್ಚರಿ ಆಗುತ್ತೆ.

ನಾಲ್ಕು ವರ್ಷಗಳ ಹಿಂದೆ ರಷ್ಯಾದಲ್ಲಿ ನಡೆದ ವಿಶ್ವಕಪ್‌ ಫುಟ್​ಬಾಲ್ ವೇಳೆಯಿದ್ದ ಟಿಕೆಟ್‌ ದರಕ್ಕಿಂತ ಈ ಬಾರಿ ಶೇ. 40 ರಷ್ಟು ಏರಿಕೆಯಾಗಿದೆ. ಅಂದು ಸರಾಸರಿ 214 ಪೌಂಡ್‌ಗಳಾಗಿದ್ದರೆ (20 ಸಾವಿರ ರೂ.) ಕತಾರ್‌ನಲ್ಲಿ ಇದು 286 ಪೌಂಡ್‌ಗಳಿಗೆ ಏರಿದೆ (28 ಸಾವಿರ ರೂ.). 2018ರ ವಿಶ್ವಕಪ್‌ ಫೈನಲ್‌ ಪಂದ್ಯದ ಟಿಕೆಟ್‌ ದರದೊಂದಿಗೆ ಹೋಲಿಸಿದರೆ ಈ ಸಲದ ದರದಲ್ಲಿ ಶೇ. 59ರಷ್ಟು ಏರಿಕೆ ಆಗಿದೆ. ಅಲ್ಲದೆ ಫೈನಲ್‌ ಪಂದ್ಯದ ಅತ್ಯಂತ ದುಬಾರಿ ಟಿಕೆಟ್‌ ಬೆಲೆ 686 ಪೌಂಡ್‌ (66,689 ರೂ.) ಆಗಿದೆ. ಇದು ಕಳೆದ 20 ವರ್ಷಗಳ ವಿಶ್ವಕಪ್‌ ಫುಟ್​ಬಾಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಎಂಬುದಾಗಿ ಸಮೀಕ್ಷೆಯೊಂದು ತಿಳಿಸಿದೆ.

ನವೆಂಬರ್ 20 ರಂದು ಫಿಫಾ ಫುಟ್​ಬಾಲ್ ವಿಶ್ವಕಪ್​ ಉದ್ಘಾಟನಾ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 9:30ಕ್ಕೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ 3.30ಕ್ಕೆ ಮೊದಲ ಪಂದ್ಯ, ಎರಡನೇ ಪಂದ್ಯ ಸಂಜೆ 6.30ಕ್ಕೆ, ಮೂರನೇ ಪಂದ್ಯ 9.30ಕ್ಕೆ ಹಾಗೂ ಮಧ್ಯರಾತ್ರಿ ನಾಲ್ಕನೇ ಪಂದ್ಯ 12.30ಕ್ಕೆ ನಡೆಯಲಿದೆ. ಡಿಸೆಂಬರ್ 18 ರಂದು ಫೈನಲ್ ಏರ್ಪಡಿಸಲಾಗಿದೆ. ಈ ಪಂದ್ಯಗಳನ್ನು ಭಾರತದಲ್ಲಿ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಅದೇ ಸಮಯದಲ್ಲಿ Voot ಅಪ್ಲಿಕೇಶನ್ ಡಿಜಿಟಲ್‌ನಲ್ಲಿ ನೇರ ಪ್ರಸಾರವಾಗುತ್ತದೆ.

ಕತಾರ್ ಈ ಬಾರಿಯ ವಿಶ್ವಕಪ್‌ಗಾಗಿ ಒಟ್ಟು 7 ಅತ್ಯಾಧುನಿಕ ಸ್ಟೇಡಿಯಂಗಳನ್ನು ನಿರ್ಮಿಸಿದೆ. 64 ಪಂದ್ಯಗಳು ಅಲ್ ಬೇತ್ ಸ್ಟೇಡಿಯಂ, ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂ, ಅಲ್ ಥುಮಾಮಾ ಸ್ಟೇಡಿಯಂ, ಅಹ್ಮದ್ ಬಿನ್ ಅಲಿ ಸ್ಟೇಡಿಯಂ, ಲುಸೈಲ್ ಸ್ಟೇಡಿಯಂ, ಸ್ಟೇಡಿಯಂ 974, ಎಜುಕೇಶನ್ ಸಿಟಿ ಸ್ಟೇಡಿಯಂ ಮತ್ತು ಅಲ್ ಜನೌಬ್ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ.

ಅಲ್ ಬೇತ್ ಸ್ಟೇಡಿಯಂನಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಇಲ್ಲಿ ಸುಮಾರು 60,000 ಆಸನ ಸಾಮರ್ಥ್ಯವನ್ನು ಏರ್ಪಡಿಸಲಾಗಿದೆ. ಉದ್ಘಾಟನಾ ಸಮಾರಂಭವು ನವೆಂಬರ್ 20 ರಂದು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುತ್ತದೆ. ಭಾರತೀಯ ಕಾಲ ಮಾನದ ಪ್ರಕಾರ ಸಂಜೆ 7:30ಕ್ಕೆ ಶುರುವಾಗಲಿದೆ. ಉದ್ಘಾಟನಾ ಸಮಾರಂಭಕ್ಕಾಗಿ ಪ್ರಸಿದ್ಧ ಬಾಯ್ ಬ್ಯಾಂಡ್‌ನ ಏಳು ಸದಸ್ಯರಲ್ಲಿ ಒಬ್ಬರಾದ ಜಂಗ್‌ಕುಕ್ ಪ್ರದರ್ಶನ ನೀಡಲಿದ್ದಾರೆ ಎಂದು ದಕ್ಷಿಣ ಕೊರಿಯಾದ ಬಿಟಿಎಸ್ ಹೇಳಿದೆ. ಕೊಲಂಬಿಯಾದ ಪಾಪ್ ತಾರೆ ಶಕೀರಾ ಕೂಡ ಇದ್ದಾರೆ. ಇವರು 2010 ರ ವಿಶ್ವಕಪ್‌ನ ಅಧಿಕೃತ ಹಾಡು, ಬ್ಲ್ಯಾಕ್ ಐಡ್ ಪೀಸ್, ರಾಬಿ ವಿಲಿಯಮ್ಸ್ ಮತ್ತು ನೋರಾ ಫತೇಹಿ ಹಾಡಿದ್ದಾರೆ.



source https://tv9kannada.com/sports/other-sports/fifa-2022-ticket-prices-in-qatar-are-the-most-expensive-ever-for-world-cup-games-in-the-last-20-years-vb-au48-472379.html

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...