Friday, 4 November 2022

ಚಿತ್ರದುರ್ಗ : ಒಂದೇ ಕುಟುಂಬದ ಮೂವರು ಮಹಿಳೆಯರ ದಾರುಣ ಸಾವು…!

 

 

ಚಿತ್ರದುರ್ಗ, (ನ.04) : ಒಂದೇ ಕುಟುಂಬದ ಮೂವರು ಮಹಿಳೆಯರು ನೀರಿನಲ್ಲಿ ವಿಷ ಬೆರೆಸಿಕೊಂಡು ಕುಡಿದು ಸಾವನ್ನಪ್ಪಿದ ದಾರುಣ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಎಂಬ ಊರಿನಲ್ಲಿ ನಡೆದಿದೆ.

ಮೃತರನ್ನು ಗೋಪನಹಳ್ಳಿ ಗ್ರಾಮದ
ದಲಿತ ಕಾಲೋನಿಯ ಮಂಗೇರ ತಿಪ್ಪಮ್ಮ(70), ಮಾರಕ್ಕ (45) ಮತ್ತು ದ್ಯಾಮಕ್ಕ(43) ಎಂದು ಗುರುತಿಸಲಾಗಿದೆ.

ಗುರುವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಬೆಳಗಾದರೂ ಬಾಗಿಲು ತೆಗೆಯದೆ ಇದ್ದಾಗ ಅಕ್ಕ ಪಕ್ಕದವರು ಕದ ತಟ್ಟಿದರೂ ಕಿಟಕಿ ಯಿಂದ ನೀರು ಎರಚಿ ಎಚ್ಚರವಾಗದ ಕಾರಣ ರಾತ್ರಿ ವೇಳೆಗೆ ಚಳ್ಳಕೆರೆ ಪೋಲಿಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚಳ್ಳಕೆರೆ ಪೋಲಿಸರು ಬಾಗಿಲು ಹೊಡೆದು ಒಳ ಪ್ರವೇಶಿಸಿದಾಗ ನೀರಿನಲ್ಲಿ ವಿಷಬೆರೆಸಿ ಕುಡಿದಿರುವ ಶಂಕೆ ವ್ಯಕ್ತವಾಗಿದೆ.

ಗ್ರಾಮಸ್ಥರು ಹೇಳುವ ಪ್ರಕಾರ, ತಿಪ್ಪಮ್ಮನ (70) ಇಬ್ಬರು ಪುತ್ರಿಯರು ಗಂಡನ ಮನೆ ಬಿಟ್ಟು ತವರು ಮನೆಯಲ್ಲಿ ವಾಸವಾಗಿದ್ದರು. ಪತಿ ಕೆಂಚಪ್ಪ ಎಂಟು ತಿಂಗಳ ಹಿಂದೆ ಮತ್ತು ಅಕ್ಟೋಬರ್ 6 ರಂದು ಮಗ ಕೂಡ ನಿಧನರಾಗಿರುತ್ತಾರೆ.
ಗಂಡ ಮತ್ತು ಮಗ ಸಾವನ್ನಪ್ಪಿದ ನಂತರ ಇಬ್ಬರೂ ಹೆಣ್ಣು ಮಕ್ಕಳ ನಿರ್ವಹಣೆ ಕಷ್ಟವಾಗಿ, ಮಾನಸಿಕ ಖಿನ್ನತೆಗೆ ಒಳಗಾಗಿ ಮೂವರು ಹೆಣ್ಣು ಮಕ್ಕಳು ಸಾಮೂಹಿಕವಾಗಿ ನೀರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಡಿವೈಎಸ್ಪಿ ರಮೇಶ್ ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

The post ಚಿತ್ರದುರ್ಗ : ಒಂದೇ ಕುಟುಂಬದ ಮೂವರು ಮಹಿಳೆಯರ ದಾರುಣ ಸಾವು…! first appeared on Kannada News | suddione.



source https://suddione.com/chitradurga-three-women-from-the-same-family-died-tragically/

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...