Friday, 11 November 2022

ವಿಶ್ವಕಪ್ ಸೆಮಿಫೈನಲ್ ನಲ್ಲಿ ಪಾಕ್ ಗೆಲುವು: ಚಿಕ್ಕಮಗಳೂರಿನಲ್ಲಿ ಸಂಭ್ರಮಾಚರಿಸಿದವರ ಬಂಧನ..!

ಚಿಕ್ಕಮಗಳೂರು: T20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದೆ. ಆದ್ರೆ ಈ ಗೆಲುವನ್ನು ಜಿಲ್ಲೆಯಲ್ಲಿ ಸಂಭ್ರಮಾಚರಿಸಿದ್ದಾರೆ. ಈ ಹಿನ್ನೆಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಜರ್ ಅಲಿ, ಅಹಿದ್ ಉದ್ದಿನ್ ಬಂಧಿತ ಆರೋಪಿಗಳು.

ಎನ್ ಆರ್ ಪುರದ ಬಾಳೆಹೊನ್ನೂರು ಸಮೀಪದ ಕಾಫಿ ತೋಟದಲ್ಲಿ ಈ ಘಟನೆ ನಡೆದಿದೆ. ನವೆಂಬರ್ 6ರಂದು ನ್ಯೂಜಿಲೆಂಡ್ ವಿರುದ್ಧ ಪಾಕ್ ಗೆಲುವು ಪಡೆದಿತ್ತು. ಆ ವೇಳೆ ಇಬ್ಬರು ಅಪ್ರಾಪ್ತರು ಸೇರಿದಂತೆ ಈ ನಾಲ್ಕು ಜನ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು.

ಈ ಘೋಷಣೆಗಳನ್ನು ಕೇಳಿಸಿಕೊಂಡ ಸ್ಥಳೀಯರು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕರು ಮ್ಯಾನೇಜರ್ ಗೆ ತಿಳಿಸಿದ್ದಾರೆ. ಈ ಯುವಕರು ಅಸ್ಸಾಂ ಮೂಲದವರೆಂದು ಕಾಫಿತೋಟಕ್ಕೆ ಕೆಲಸಕ್ಕೆ ಸೇರಿದ್ದರಂತೆ. ಇದೀಗ ಪಾಕ್ ಪರ ಘೋಷಣೆ ಕೂಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಪೊಲೀಸರು ಬಂಧಿಸಿದ್ದು, ವಿಚಾರಣೆಯ ಬಳಿಕ ಅಸ್ಸಾಂನವರಂತೆ ಸೋಗಿನಲ್ಲಿದ್ದರಾ ಎಂಬುದು ತಿಳಿಯಲಿದೆ.

The post ವಿಶ್ವಕಪ್ ಸೆಮಿಫೈನಲ್ ನಲ್ಲಿ ಪಾಕ್ ಗೆಲುವು: ಚಿಕ್ಕಮಗಳೂರಿನಲ್ಲಿ ಸಂಭ್ರಮಾಚರಿಸಿದವರ ಬಂಧನ..! first appeared on Kannada News | suddione.



source https://suddione.com/pakistans-victory-in-the-world-cup-semi-final-those-who-celebrated-in-chikkamagalur-were-arrested/

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...