Monday, 23 August 2021

ತಾಲಿಬಾನಿಗಳು ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಾರೆ: ಆಫ್ಘನ್ ಮಹಿಳಾ ಪೇದೆ ನೀಡಿದ ಬೆಚ್ಚಿ ಬೀಳಿಸುವ ವಿವರ.

 

ನವದೆಹಲಿ: ತಾಲಿಬಾನಿಗಳ ಮೇಲಿನ ಭಯದಿಂದ ಭಾರತಕ್ಕೆ ಓಡಿಬಂಡಿದ್ದ ಆಫ್ಘನ್ ಮಹಿಳೆಯೋರ್ವಳು ತಾಲಿಬಾನಿಗಳ ಕುರಿತಾದ ಬೆಚ್ಚಿ ಬೀಳಿಸುವ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ತಾಲಿಬಾನಿಗಳು ಶವಗಳೊಂದಿಗೆ ಸೆಕ್ಸ್ ಮಾಡುತ್ತಾರೆ ಎಂದು ಆಕೆ ಟಿವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ. ಆಕೆಯ ಹೆಸರು ಮುಸ್ಕಾನ್ ಎಂಬುದಾಗಿದ್ದು, ಅಫ್ಘಾನಿಸ್ತಾನದಲ್ಲಿ ಆಕೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಳು. ತಾಲಿಬಾನಿಗಳಿಂದ ಜೀವ ಬೆದರಿಕೆ ಎದುರಿಸುತ್ತಿರುವ ಆಕೆ ಭಾರತಕ್ಕೆ ಹಾರಿ ಬಂಡಿದ್ದಳು. ಸದ್ಯ ಆಕೆ ನವದೆಹಲಿಯಲ್ಲಿ ವಾಸಿಸುತ್ತಿದ್ದಾಳೆ.

ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೆಕ್ರೊಫೀಲಿಯಾ ಎನ್ನುತ್ತಾರೆ. ತಾಲಿಬಾನಿಗಳು ಮಹಿಳೆಯರನ್ನು ಹೊತ್ತೊಯ್ದು ಗುಂಡಿಕ್ಕಿ ಕೊಂದ ನಂತರ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಪ್ರವೃತ್ತಿ ಹೊಂದಿದ್ದಾರೆ. ತಾಲಿಬಾನಿಗಳು ಪ್ರತಿ ಮನೆಯಿಂದ ಒಂದೊಂದು ಹೆಣ್ಣುಮಕ್ಕಳನ್ನು ಅಪೇಕ್ಷಿಸುತ್ತಾರೆ ಎಂದಾಕೆ ಹೇಳಿಕೊಂಡಿದ್ದಾಳೆ.

ಪೊಲೀಸ್ ನೌಕರಿಯಲ್ಲಿದ್ದ ಮುಸ್ಕಾನ್ ಗೆ ಮಹಿಳೆಯೊಬ್ಬಳು ಉದ್ಯೋಗ ಮಾಡುತ್ತಿರುವುದನ್ನು ಸಹಿಸದ ತಾಲಿಬಾನಿಗಳು ಅಕೆಗೆ ಜೀವ ಬೆದರಿಕೆ ಹಾಕಿದ್ದರು. ಕಡೆಗೆ ಮನೆಯಯವರ ಒತ್ತಡ ತಾಳಲಾರದೆ ಆಕೆ ನೌಕರಿಗೆ ವಿದಾಯ ಹೇಳಿದ್ದರು. ಇದಾದ ಸ್ವಲ್ಪ ಸಮಯದಲ್ಲೇ ಅವರು ದೇಶ ತೊರೆದು ಭಾರತಕ್ಕೆ ಪಲಾಯನ ಮಾಡಿದ್ದರು.

ಸರ್ಕಾರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದ ಪ್ರತಿಯೊಬ್ಬರಿಗೂ ತಾಲಿಬಾನಿ ನಿಂದ ಜೀವ ಬೆದರಿಕೆ ಇದೆ. ಸೇನೆಯಲ್ಲಿ ಕೆಲಸ ನಿರ್ವಹಿಸಿದವರ ಪಾಡೂ ಅದೇ ಎಂದು ಮುಸ್ಕಾನ್ ಹೇಳಿದ್ದಾಳೆ.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...