Saturday, 28 August 2021

ಪ್ಯಾರಾಲಿಂಪಿಕ್ಸ್: ಟಿಟಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಭಾವಿನಾ ಐತಿಹಾಸಿಕ ಸಾಧನೆ

 


ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ ಟೇಬಲ್ ಟೆನಿಸ್ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿರುವ ಭಾರತದ ಭಾವಿನಾಬೆನ್ ಪಟೇಲ್, ನೂತನ ಇತಿಹಾಸ ನಿರ್ಮಿಸಿದ್ದಾರೆ.

ಕಳೆದ ದಿನವೇ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿರುವ ಭಾವಿನಾ, ಈಗ ಇನ್ನು ಒಂದು ಹೆಜ್ಜೆ ಮುಂದಿಟ್ಟು ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ.

ಈ ಮೂಲಕ ಪ್ಯಾರಾಲಿಂಪಿಕ್‌ನ ಟೇಬಲ್ ಟೆನಿಸ್‌ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಪ್ಯಾರಾ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

ಮಹಿಳೆಯರ ಸಿಂಗಲ್ಸ್ ಕ್ಲಾಸ್‌ 4 ವಿಭಾಗದಲ್ಲಿ ಅಂತಿಮ ನಾಲ್ಕರ ಘಟ್ಟದ ಹೋರಾಟದಲ್ಲಿ ಭಾವಿನಾಬೆನ್, ಚೀನಾದ ಜಾಂಗ್‌ ಮಿಯಾವೊ ವಿರುದ್ಧ 3-2ರಲ್ಲಿ ಗೆಲುವು ಸಾಧಿಸಿದರು.

34 ವರ್ಷದ ಭಾವಿನಾ, ವಿಶ್ವ ನಂ.3 ಆಟಗಾರ್ತಿ ವಿರುದ್ಧ 34 ನಿಮಿಷಗಳ ಹೋರಾಟದ ಅಂತ್ಯದಲ್ಲಿ 7-11 11-7 11-4 9-11 11-8ರಲ್ಲಿ ಗೆಲುವು ದಾಖಲಿಸಿದರು.

ಚಿನ್ನದ ಪದಕಕ್ಕಾಗಿ ಹೋರಾಟದಲ್ಲಿ ಭಾವಿನಾ ಈಗ, ವಿಶ್ವ ನಂ.1 ಸ್ಪರ್ಧಿ ಚೀನಾದವರೇ ಆಗಿರುವ ಯಿಂಗ್ ಜೌ ಸವಾಲನ್ನು ಎದುರಿಸಲಿದ್ದಾರೆ.

ಭಾವಿನಾಬೆನ್ ಎಂಟರಘಟ್ಟದಲ್ಲಿ ಹಣಾಹಣಿಯಲ್ಲಿ 11-5 11-6 11-7ರಿಂದ ಹಾಲಿ ಚಾಂಪಿಯನ್‌, ಸರ್ಬಿಯಾದ ಬೊರಿಸ್ಲಾವಾ ಪೆರಿಚ್‌ ರ‍್ಯಾಂಕೊವಿಚ್‌ ಅವರನ್ನು ಪರಾಭಗೊಳಿಸಿದರು. ಇದಕ್ಕೂ ಮೊದಲು 16ರ ಘಟ್ಟದ ಪಂದ್ಯದಲ್ಲಿ ಭಾರತದ ಆಟಗಾರ್ತಿಯು 12-10, 13-11, 11-6ರಿಂದ ಬ್ರೆಜಿಲ್‌ನ ಜಾಯ್ಸ್ ಡಿ ಒಲಿವೆರಾ ಅವರನ್ನು ಮಣಿಸಿದ್ದರು.

ಭಾವಿನಾಬೆನ್ ಸಾಧನೆಯನ್ನು ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಅತ್ತ ತಮ್ಮನ್ನು ತಾವು ದೈಹಿಕ ಅಸಮರ್ಥಳೆಂದು ಪರಿಗಣಿಸುವುದಿಲ್ಲ ಎಂದು ಭಾವಿನಾಬೆನ್ ಅಭಿಪ್ರಾಯಪಟ್ಟಿದ್ದಾರೆ.



No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...