Friday 16 July 2021

ತುಪ್ಪ ನೀನೆಷ್ಟು ಪ್ರಯೋಜನವಪ್ಪ!!

ತುಪ್ಪ ಇಲ್ಲದೆ ಭಾರತೀಯರ ಅಡುಗೆ ಮನೆ ಅಪೂರ್ಣವಾಗಿರುತ್ತದೆ.  ಅಡುಗೆ ಮನೆ, ಪೂಜೆ ಇತ್ಯಾದಿ ವಿಷಯದಲ್ಲೂ ತುಪ್ಪಕ್ಕೆ ವಿಶೇಷ ಸ್ಥಾನಮಾನವಿದೆ. ಅದರಲ್ಲೂ ಮನೆಯಲ್ಲಿ ಮಾಡಿದ ತುಪ್ಪದ  ಪ್ರಯೋಜನ ತುಸು ಹೆಚ್ಚು.
·         ದೇಹಾರೋಗ್ಯಕ್ಕೆ ತುಪ್ಪ ಯಾಕೆ ಸಹಕಾರಿ? ತುಪ್ಪ ಎಷ್ಟರ ಪ್ರಮಾಣದಲ್ಲಿ ತಿನ್ನಬೇಕು? ಅದರಿಂದ ಲಾಭ ಏನು ?
·         ತುಪ್ಪದಲ್ಲಿರುವ ಸಿಎಲ್ ಎ ಮೆಟಬಾಲಿಸಂನ್ನು ಸಮಪ್ರಮಾಣದಲ್ಲಿಡುತ್ತದೆ. ಹಾಗಾಗಿಬೊಜ್ಜು ಬೆಳೆಯುವುದಿಲ್ಲ.
·         ಜೀರ್ಣಕ್ರಿಯೆಹಾರ್ಮೋನು ಸಮತೋಲನಕ್ಕೆ ತುಪ್ಪ ಸೇವನೆ ಅತ್ಯಗತ್ಯ.. 


ಭಾರತೀಯರ ಅಡುಗೆ ಮನೆಯಲ್ಲಿ ತುಪ್ಪ ಕ್ಕೆ ವಿಶೇಷ ಮಹತ್ವ ವಿದೆ. ತುಪ್ಪ ಇಲ್ಲದೆ ಭಾರತೀಯರ ಅಡುಗೆ ಮನೆ ಅಪೂರ್ಣವಾಗಿರುತ್ತದೆ.  ಅಡುಗೆ ಮನೆ, ಪೂಜೆ ಇತ್ಯಾದಿ ವಿಷಯದಲ್ಲೂ ತುಪ್ಪಕ್ಕೆ ವಿಶೇಷ ಸ್ಥಾನಮಾನವಿದೆ. ಅದರಲ್ಲೂ ಮನೆಯಲ್ಲಿ ಮಾಡಿದ ತುಪ್ಪದ  ಪ್ರಯೋಜನ ತುಸು ಹೆಚ್ಚು. ದೇಹಾರೋಗ್ಯಕ್ಕೆ ತುಪ್ಪ ಯಾಕೆ ಸಹಕಾರಿ? ತುಪ್ಪ  ಎಷ್ಟರ ಪ್ರಮಾಣದಲ್ಲಿ ತಿನ್ನಬೇಕು? ಅದರಿಂದ ಲಾಭ  ಏನು ? ಇವನ್ನೆಲ್ಲಾ ಇವತ್ತು ತಿಳಿದುಕೊಳ್ಳೋಣ.

ದೇಹಕ್ಕೆ ಎನರ್ಜಿ ನೀಡುವ ತುಪ್ಪ!
ತುಪ್ಪ, ಅದರಲ್ಲೂ ಅಮ್ಮ ಮಾಡಿದ ದೇಸಿ ತುಪ್ಪ ಶಕ್ತಿಯ ಮೂಲ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲರಿ, ಫ್ಯಾಟ್,  ಸಾಚುರೇಟೆಡ್ ಫ್ಯಾಟ್, ವಿಟಮಿನ್ ಎ, ಡಿ, , ಮತ್ತು ಕೆ ಸಿಗುತ್ತದೆ. ನಮ್ಮ ಹೃದಯಾರೋಗ್ಯಕ್ಕೆ, ಹೊಟ್ಟೆಗೆ, ತ್ವಚೆಗೆ ತುಪ್ಪ ತುಂಬಾ ಸಹಕಾರಿ.

ಬೊಜ್ಜು ಬೆಳೆಯುವುದಿಲ್ಲ:
ತುಪ್ಪ ನಮ್ಮ ದೇಹದ ಮೆಟಬಾಲಿಸಂನ್ನು ರಕ್ಷಿಸುತ್ತದೆ.  ತುಪ್ಪದಲ್ಲಿರುವ ಸಿಎಲ್ ಎ ಮೆಟಬಾಲಿಸಂನ್ನು ಸಮಪ್ರಮಾಣದಲ್ಲಿಡುತ್ತದೆ.  ಹಾಗಾಗಿ ಬೊಜ್ಜು  ಬೆಳೆಯುವುದಿಲ್ಲ. ಹಸುವಿನ ತುಪ್ಪದಲ್ಲಿ ಕೊಲೆಸ್ಟ್ರಾಲ್  ಇರುವುದಿಲ್ಲ. ಹಾಗಾಗಿ ಬೊಜ್ಜು ಬರಲು ಸಾಧ್ಯವಿಲ್ಲ.

ಬಲಗೊಳ್ಳುತ್ತದೆ ಎಲುಬು:
ತುಪ್ಪದಲ್ಲಿ ವಿಟಮಿನ್ ಕೆ2 ಹೇರಳವಾಗಿ ಸಿಗುತ್ತದೆ.  ಮೂಳೆಗಳನ್ನು ಬಲಿಷ್ಠಗೊಳಿಸಲು ವಿಟಮಿನ್ ಕೆ2 ಅತ್ಯಗತ್ಯ.  ಹಾಗಾಗಿ ನಿತ್ಯವೂ ತುಪ್ಪ ತಿಂದರೆ ನಮ್ಮ ಮೂಳೆಗಳು ಬಲಗೊಳ್ಳುತ್ತವೆ.

ಕಣ್ಣಿನ ಆರೋಗ್ಯಕ್ಕೂ ಸಹಕಾರಿ :
ದೇಸಿ ತುಪ್ಪದಲ್ಲಿ ಅಂಟಿಅಕ್ಸಿಡೆಂಟ್, ಅಂಟಿಬ್ಯಾಕ್ಟೀರಿಯಲ್  ಮತ್ತು ಮಿಟಮಿನ್  ಸಾಕಷ್ಟು ಪ್ರಮಾಣದಲ್ಲಿರುತ್ತವೆ.  ಇವು ನಮ್ಮ ದೇಹವನ್ನು ಸೋಂಕಿನಿಂದ ರಕ್ಷಿಸುತ್ತವೆ. ಈ ಎಲ್ಲಾ ಪದಾರ್ಥಗಳು ದೇಹಾದಲ್ಲಿನ ವಿಷಕಾರಕ ಅಂಶಗಳನ್ನು ಹೊರ ಹಾಕುತ್ತವೆ. ಒಂದು ಚಮಚ ಹಸುವಿನ ತುಪ್ಪಕ್ಕೆ  ಅದರ ಕಾಲು ಭಾಗದಷ್ಟು ಕರಿಮೆಣಸಿನ ಪುಡಿ ಮಿಕ್ಸ್ ಮಾಡಿ ರಾತ್ರಿ ಮಲಗುವ ಮುನ್ನಅಥವಾ ಬೆಳಗ್ಗೆ ಎದ್ದ ನಂತರ ತಿಂದರೆ, ದೃಷ್ಟಿಗೆ ತುಂಬಾ ಉಪಕಾರಿ..

ಕೇಶಾರೋಗ್ಯಕ್ಕೆ ಒಳ್ಳೆಯದು..!
ನಿಮ್ಮ ಕೂದಲು ಪೇಲವ ಅಥವಾ ಡ್ಯಾಮೇಜ್  ಆಗುತ್ತಿದ್ದರೆ ತುಪ್ಪ ತಿನ್ನಿ. ತುಪ್ಪ ತಲೆಯ ಸ್ಕೇಲ್ಪ್ ನ್ನು ಬಲಗೊಳಿಸುತ್ತದೆ.  ತುಪ್ಪದಲ್ಲಿ ಫ್ಯಾಟಿ ಆಸಿಡ್ ಹೇರಳವಾಗಿರುತ್ತದೆ. ಇದು ಕೂದಲನ್ನು ಒಳಗಿನಿಂದಲೇ ಹೈಡ್ರೇಟ್ ಮಾಡುತ್ತದೆ.  ತುಪ್ಪ ತಿನ್ನೋದರಿಂದ ನಿಮ್ಮ ಕೂದಲು ಒಣಗಿ ಹೋಗೋದಿಲ್ಲ. ಮಾಶ್ಚುರೈಸ್ಡ್ ಆಗಿರುತ್ತದೆ.

ಜೀರ್ಣಕ್ರಿಯೆ ಚೆನ್ನಾಗಿರುತ್ತದೆ:
ಚಳಿಗಾಲದಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚು. ನಿದ್ದೆ ಮಾಡುವ ಮೊದಲು ನೀವು ಒಂದು ಚಮಚ ತುಪ್ಪವನ್ನು ಒಂದು ಕಪ್ ಬೆಚ್ಚಗಿನ ಹಾಲಿನಲ್ಲಿ ಕುಡಿಯಿರಿ. ಇದರಿಂದ ಪಚನ ಕ್ರಿಯೆ ಚೆನ್ನಾಗಿರುತ್ತದೆ.  

ಹಾರ್ಮೋನುಗಳ ಸಮತೋಲನ:
ದೇಸಿ ತುಪ್ಪದಲ್ಲಿ ವಿಟಮಿನ್ ಡಿ, ವಿಟಮಿನ್ ಇ, ವಿಟಮಿನ್ ಎ ಮತ್ತು ವಿಟಮಿನ್ ಕೆ 2 ನಂತಹ ಪೋಷಕಾಂಶಗಳಿವೆ, ಇದು ದೇಹದ ಹಾರ್ಮೋನುಗಳನ್ನು ಸಮತೋಲನದಲ್ಲಿಡಲು  ಸಹಾಯ ಮಾಡುತ್ತದೆ.  ಗರ್ಭಿಣಿಯರು  ಮತ್ತು ಹಾಲುಣಿಸುವ ತಾಯಂದಿರು ತುಪ್ಪ ಚೆನ್ನಾಗಿ ತಿನ್ನಬೇಕು.

 


No comments:

Post a Comment