ಬೆಂಗಳೂರು : ಜುಲೈ 1 ರಿಂದ
ರಾಜ್ಯಾದ್ಯಂತ 2021-22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು
ಆರಂಭವಾಗಲಿದ್ದು, 1 ರಿಂದ 10 ನೇ ತರಗತಿ
ವಿದ್ಯಾರ್ಥಿಗಳಿಗೆ ಪ್ರತಿದಿನ ಸಂವೇದಾ ವೀಡಿಯೋ ಪಾಠ ಪ್ರಸಾರವಾಗಲಿದೆ.
ಜುಲೈ 1 ರಿಂದ ಪ್ರತಿದಿನ
ಬೆಳಗ್ಗೆ 8 ಗಂಟೆಯಿಂದ 4 ಗಂಟೆಯವರೆಗೆ
ವೀಡಿಯೋ ಪಾಠಗಳು ನಡೆಯಲಿವೆ. ತರಗತಿವಾರುಉ ವೇಳಾಪಟ್ಟಿ ಶಾಲಾ ಮುಖ್ಯಸ್ಥರಿಗೆ ಕಳುಹಿಸಲಾಗಿದ್ದು,
ಜು. 1 ರಿಂದ 30 ದಿನಗಳ
ಸೇತುಬಂಧ ಕಾರ್ಯಕ್ರಮ ನಡೆಸಲಾಗುತ್ತದೆ. ಮೊದಲಿಗೆ ವಿದ್ಯಾರ್ಥಿಗಳಿಗೆ ಪೂರ್ವ ಪರೀಕ್ಷೆ ನಡೆಸಿ,
ಫಲಿತಾಂಶ ಆಧರಿಸಿ ಎ,ಬಿ, ಸಿ,
ಗ್ರೇಡ್ ವಿದ್ಯಾರ್ಥಿಗಳೆಂದು ವಿಂಗಡಿಸಲಾಗುತ್ತದೆ.
1,2, 3 ನೇ ತರಗತಿ ಮಕ್ಕಳಿಗೆ ಭಾನುವಾರ 1,30 ರಿಂದ 12, 1.30 ರಿಂದ 2 ರ ತನಕ
ನಲಿಕಲಿ ತರಗತಿ ನಡೆಯಲಿವೆ. 4 ನೇ ತರಗತಿ ಮಕ್ಕಳಿಗೆ ಶನಿವಾರ 10
ರಿಂದ 10.30 ರವರೆಗೆ ಹಾಗೂ 10,30 ರಿಂದ 11 ರ ತನಕ, ಭಾನುವಾರ 10
ರಿಂದ 10.30, 10.30 ರಿಂದ 11 ರ ತನಕ ಕನ್ನಡ, ಪರಿಸರ ಅಧ್ಯಯನ, ಗಣಿತ
ತರಗತಿಗಳು ನಡೆಯಲಿವೆ.
5 ನೇ ತರಗತಿ ಮಕ್ಕಳಿಗೆ ಶನಿವಾರ 9 ರಿಂದ 9.30 ರವರೆಗೆ, 9.30 ರಿಂದ 10,
ಭಾನುವಾರ 9 ರಿಂದ 9.30 ರಿಂದ
10 ರತನಕ ಕನ್ನಡ, ಗಣಿತ, ಪರಿಸರ ಅಧ್ಯಯನ ತರಗತಿಗಳು ನಡೆಯಲಿವೆ. 6 ನೇ ತರಗತಿ
ಮಕ್ಕಳಿಗೆ ಗುರುವಾರ 10.30 ರಿಂದ 11, 11.30 ರಿಂದ 12, 1.30 ರಿಂದ 2 ರ ತನಕ
ಇಂಗ್ಲಿಷ್, ಗಣಿತ, ಹಿಂದಿ, ವಿಜ್ಞಾನ, ಸಮಾಜ ವಿಷಯಗಳ ಕುರಿತು ತರಗತಿ ನಡೆಯಲಿವೆ.
7 ನೇ ತರಗತಿ ವಿದ್ಯಾರ್ಥಿಗಳಿಗೆ ಗುರುವಾರ 9ರಿಂದ 9.30, 9.30ರಿಂದ 10.00, 10ರಿಂದ
10.30 ರ ತನಕ ಹಾಗೂ ಶುಕ್ರವಾರ 9ರಿಂದ 9.30,
9.30ರಿಂದ 10, 10ರಿಂದ 10.30ರ ತನಕ ಇಂಗ್ಲಿಷ್, ಗಣಿತ, ಕನ್ನಡ,
ವಿಜ್ಞಾನ, ಸಮಾಜ, ಹಿಂದಿ
ವಿಷಯಗಳ ತರಗತಿಗಳು ನಡೆಯಲಿವೆ.
No comments:
Post a Comment