Sunday, 6 November 2022

India vs Zimbabwe: ಜಿಂಬಾಬ್ವೆ ವಿರುದ್ಧ ಸೋತರೂ ನೋ ಟೆನ್ಶನ್: ಸೆಮಿ ಫೈನಲ್​ಗೆ ಭಾರತ ಎಂಟ್ರಿ

India Semi Final

ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಊಹಿಸಲಾಗದ ಅನೇಕ ಘಟನೆಗಳು ನಡೆದಿವೆ. ದುರ್ಬಲ ಎಂದುಕೊಂಡಿದ್ದ ತಂಡಗಳೆಲ್ಲ ಬಲಿಷ್ಠ ಆಟಗಾರರನ್ನು ಹೊಂದಿರುವ ತಂಡದ ಎದುರು ಗೆಲುವು ಸಾಧಿಸಿದ ಉದಾಹರಣೆ ಅನೇಕ ಬಾರಿ ಕಾಣಿಸಿಕೊಂಡಿತು. ಇದಕ್ಕೆ ಇಂದು ಸೂಪರ್ 12 ಹಂತದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ನೆದರ್​ಲೆಂಡ್ಸ್ (South Africa vs Netherlands) ನಡುವಣ ಪಂದ್ಯ ಕೂಡ ಸಾಕ್ಷಿಯಾಯಿತು. ಇಡೀ ಟೂರ್ನಿಯಲ್ಲಿ ಒಂದು ಬಾರಿಕೂಡ ಸೋಲು ಕಾಣದೆ ಸೆಮಿ ಫೈನಲ್​ಗೇರುವ ನೆಚ್ಚಿನ ತಂಡವಾಗಿದ್ದ ಆಫ್ರಿಕಾ ಇದೀಗ ನೆದರ್​ಲೆಂಡ್ಸ್ ವಿರುದ್ಧ ಸೋತ ಪರಿಣಾಮ ಸೆಮೀಸ್ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಇದು ಒಂದು ಕಡೆಯಾದರೆ ಅತ್ತ ಭಾರತ ತಂಡ ಜಿಂಬಾಬ್ವೆ (India vs Zimbabwe) ವಿರುದ್ಧ ಆಡುವ ಮುನ್ನವೇ ನೇರವಾಗಿ ಸೆಮಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. ಆಫ್ರಿಕಾ-ನೆದರ್​ಲೆಂಡ್ಸ್ ನಡುವಣ ಅಚ್ಚರಿಯ ಫಲಿತಾಂಶದಿಂದ ಟೀಮ್ ಇಂಡಿಯಾ ಸೆಮೀಸ್​ಗೆ ಕ್ವಾಲಿಫೈಯರ್ ಆಗಿದ್ದು, ಇದೀಗ ಜಿಂಬಾಬ್ವೆ ವಿರುದ್ಧ ಸೋತರೂ ಯಾವುದೇ ಪರಿಣಾಮ ಬೀರುವುದಿಲ್ಲ.

ಭಾರತ ಈವರೆಗೆ ಆಡಿದ 4 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಒಂದರಲ್ಲಿ ಸೋತು 6 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ. +0.730 ರನ್​ರೇಟ್ ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾ ಆಡಿದ ಐದು ಪಂದ್ಯಗಳ ಪೈಕಿ ಒಂದು ಮಳೆಯಿಂದ ರದ್ದಾದರೆ ತಲಾ ಎರಡು-ಸೋಲು ಗೆಲುವಿನಿಂದ 5 ಅಂಕ ಪಡೆದು +0.864 ರನ್​ರೇಟ್​ನಿಂದ ದ್ವಿತೀಯ ಸ್ಥಾನದಲ್ಲಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಸೋಲು ಗೆಲುವು ಪಡೆದು ರನ್​ರೇಟ್ ಆಧಾರದ ಮೇಲೆ ಪಾಕ್ ಮೂರನೇ ಸ್ಥಾನದಲ್ಲಿದ್ದರೆ ಬಾಂಗ್ಲಾ ಐದನೇ ಸ್ಥಾನದಲ್ಲಿದೆ. ಹೀಗಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯ ಮೂರು ತಂಡಗಳ ಸೆಮೀಸ್ ಭವಿಷ್ಯ ನಿರ್ಧರಿಸಲಿದೆ.

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯದಲ್ಲಿ ಪಾಕ್ ಗೆದ್ದರೆ 6 ಅಂಕದೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿಯಲಿದೆ, ಸೆಮಿ ಫೈನಲ್​ಗೆ ಕ್ವಾಲಿಫೈಯರ್ ಆಗಲಿದೆ. ಬಾಂಗ್ಲಾ ಗೆದ್ದರೂ 6 ಅಂಕ ಪಡೆಯಲಿದೆ. ಎಲ್ಲಾದರು ಈ ಪಂದ್ಯ ರದ್ದಾದರಷ್ಟೆ ಆಫ್ರಿಕಾಕ್ಕೆ ಸೆಮೀಸ್ ಹಾದಿ ರನ್​ರೇಟ್ ಆಧಾರದ ಮೇಲೆ ನಿರ್ಧಾರವಾಗಲಿದೆ. ಈಗಾಗಲೇ ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಉತ್ತಮ ಆರಂಭ ಪಡೆದುಕೊಂಡಿದೆ.

ಆಫ್ರಿಕಾ-ನೆದರ್​ಲೆಂಡ್ಸ್ ಪಂದ್ಯ:

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ನೆದರ್​ಲೆಂಡ್ಸ್ ಉತ್ತ, ಆರಂಭ ಪಡೆದುಕೊಂಡಿತು. ಮೈಬರ್ಗ್ 30 ಎಸೆತಗಳಲ್ಲಿ 7 ಫೋರ್ ಬಾರಿಸಿ 37 ರನ್, ಮ್ಯಾಕ್ಸ್ ಡೌಡ್ 31 ಎಸೆತಗಳಲ್ಲಿ 29 ರನ್ ಕಲೆಹಾಕಿದರು. ಕೂಪರ್ 19 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಸಿಡಿಸಿ 35 ರನ್ ಚಚ್ಚಿದರು. ಅಂತಿಮ ಹಂತದಲ್ಲಿ ಕಾಲಿನ್ ಅಕ್ವರ್​ಮೆನ್ ಕೇವಲ 26 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್ ಬಾರಿಸಿ ಅಜೇಯ 41 ರನ್ ಗಳಿಸಿದರು. ನೆದರ್​ಲೆಂಡ್ಸ್ ತಂಡ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತು.

ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಿಧಾನಗತಿಯ ಆರಂಭ ಪಡೆದುಕೊಳ್ಳುವ ಜೊತೆಗೆ ಕ್ವಿಂಟನ್ ಡಿಕಾಕ್ (13) ವಿಕೆಟ್ ಕಳೆದುಕೊಂಡಿತು. ನಾಯಕ ತೆಂಬಾ ಬವುಮಾ 20 ಎಸೆತಗಳಲ್ಲಿ 20 ರನ್ ಗಳಿಸಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ರಿಲೀ ರೊಸ್ಸೋ 19 ಎಸೆತಗಳಲ್ಲಿ 25 ರನ್ ಬಾರಿಸಿ ಔಟಾದರು. ನಂತರ ಬಂದ ಬ್ಯಾಟರ್​ಗಳು ಯಾರೂ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಕೊನೆಯ 6 ಎಸೆತಗಳಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 26 ರನ್​ಗಳ ಅವಶ್ಯಕತೆಯಿತ್ತಾದರೂ ದು ಸಾಧ್ಯವಾಗಲಿಲ್ಲ. ಹರಿಣಗಳು 20 ಓವರ್​ಗೆ 8 ವಿಕೆಟ್ ನಷ್ಟಕ್ಕೆ 145 ರನ್​ಗಳನ್ನಷ್ಟೆ ಕಲೆಹಾಕಿ ಸೋಲುಂಡಿತು.



source https://tv9kannada.com/sports/cricket-news/now-even-if-india-loses-against-zimbabwe-rohit-sharma-team-will-qualify-for-semi-final-in-t20-world-cup-2022-vb-au48-465959.html

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...