Monday, 21 November 2022

ಪುಣೆಯಲ್ಲಿ ರಸ್ತೆ ಅಪಘಾತ : 30 ಮಂದಿಗೆ ಗಾಯ ; 48 ಕ್ಕೂ ಹೆಚ್ಚು ವಾಹನಗಳು ಜಖಂ ; ವಿಡಿಯೋ ನೋಡಿ…!

 

ಪುಣೆ : ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದ ರಸ್ತೆ ಅಪಘಾತದಲ್ಲಿ ಪುಣೆಯ ನವಲೆ ಸೇತುವೆ ಬಳಿ ಟ್ಯಾಂಕರ್ ನ ಬ್ರೇಕ್ ಫೇಲ್ ಆಗಿ ಮುಂದೆ ಹೋಗುತ್ತಿದ್ದ ಸುಮಾರು 48 ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅಪಘಾತದಲ್ಲಿ 48 ವಾಹನಗಳು ಜಖಂಗೊಂಡು ಕನಿಷ್ಠ 30 ಜನರು ಗಾಯಗೊಂಡಿದ್ದಾರೆ ಎಂದು
ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಪಿಎಂಆರ್‌ಡಿಎ) ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಪಘಾತದಿಂದಾಗಿ ಮುಂಬೈಗೆ ಹೋಗುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, 2 ಕಿ.ಮೀ.ಗೂ ಹೆಚ್ಚು ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ವರದಿಯಾಗಿದೆ.

ಕಳೆದ ಕೆಲವು ದಿನಗಳಿಂದ ನವಲೆ ಸೇತುವೆ ಅಪಘಾತಗಳ ಹಾಟ್ ಸ್ಪಾಟ್ ಆಗುತ್ತಿದೆ. ಶುಕ್ರವಾರ ಹೊರವರ್ತುಲ ರಸ್ತೆಯ ಸೇತುವೆ ಬಳಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದರು.

The post ಪುಣೆಯಲ್ಲಿ ರಸ್ತೆ ಅಪಘಾತ : 30 ಮಂದಿಗೆ ಗಾಯ ; 48 ಕ್ಕೂ ಹೆಚ್ಚು ವಾಹನಗಳು ಜಖಂ ; ವಿಡಿಯೋ ನೋಡಿ…! first appeared on Kannada News | suddione.



source https://suddione.com/30-injured-in-40-vehicle-pile-up-on-pune-bengaluru-highway/

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...