Tuesday, 15 November 2022

ಹೊಸದುರ್ಗ :  ನ.16ರಂದು ವಿದ್ಯುತ್ ವ್ಯತ್ಯಯ

 

ಚಿತ್ರದುರ್ಗ,(ನ.15) : 66/11 ಕೆವಿ ವಿವಿ ಕೇಂದ್ರ ಹೊಸದುರ್ಗ, ಹಾಲುರಾಮೇಶ್ವರ, ಬಾಗೂರು ಮತ್ತು 220 ಕೆವಿ ವಿವಿ ಕೇಂದ್ರ ಮಧುರೆ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ನಿರ್ವಹಿಸುತ್ತಿರುವುದರಿಂದ ನವೆಂಬರ್ 16ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಈ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚರಣೆಯಾಗುವ ಪ್ರದೇಶಗಳು: 66/11 ಕೆ.ವಿ ವಿವಿ ಕೇಂದ್ರ ಹೊಸದುರ್ಗ, ಹಾಲುರಾಮೇಶ್ವರ, ಬಾಗೂರು, ಮಧುರೆ ವಿವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.

ಹೊಸದುರ್ಗ: ಚನ್ನಸಮುದ್ರ, ಕಪ್ಪೆಗೆರೆ, ಕೊರಟಿಗೆರೆ, ಕಂಗುವಳ್ಳಿ, ಕೆಲ್ಲೋಡು, ಹಗಲಗೆರೆ, ರಂಗವಲ್ಲಿ, ಪೀಲಾಪುರ, ವೇದಾವತಿ, ಬಿ.ವಿ. ನಗರ, ಪಾಳ್ಯ, ಅತ್ತಿಘಟ್ಟ, ಸಂಕಯ್ಯನಹಟ್ಟಿ, ಸಿದ್ದರಾಮನಗರ, ಬೋಕಿಕೆರೆ, ಕೊಬ್ಬರಿಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಹಾಲುರಾಮೇಶ್ವರ: ಹುನವಿನೋಡು, ದೊಡ್ಡಘಟ್ಟ, ಜಾನಕಲ್ಲು, ತಣಿಗೆಕಲ್ಲು, ಕಂಠಾಪುರ, ದೇವಪುರ, ರಾಮಜ್ಜಿನಹಳ್ಳಿ, ಅತ್ತಿಮಗ್ಗೆ, ಹೊನ್ನೇನಹಳ್ಳಿ, ದುಗ್ಗಾವರ, ಗೂಳಿಹಟ್ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಬಾಗೂರು: ಐಲಾಪುರ, ಬಾಗೂರು, ಹೆಬ್ಬಳ್ಳಿ, ಸಾಣೆಹಳ್ಳಿ, ಶ್ರೀರಂಗಪುರ, ಅನಿವಾಳ, ಹೊಸದುರ್ಗ ಗ್ರಾಮೀಣ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಮಧುರೆ: ಮಧುರೆ ವಿವಿ ಕೇಂದ್ರದ ಪರಿಮಿತಿಯೊಳಗಿನ ಗುತ್ತಿಕಟ್ಟೆ, ಮಧುರೆ, ಮಾವಿನಕಟ್ಟೆ, ದೇವಿಗೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

The post ಹೊಸದುರ್ಗ :  ನ.16ರಂದು ವಿದ್ಯುತ್ ವ್ಯತ್ಯಯ first appeared on Kannada News | suddione.



source https://suddione.com/hosadurga-power-outage-on-nov-16/

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...