ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ (India Vs New Zealand) ಸರಣಿ ಸೋಲಿನ ಭೀತಿಯಲ್ಲಿದೆ. ಹಾರ್ದಿಕ್ ನಾಯಕತ್ವದಲ್ಲಿ ಟಿ20 ಸರಣಿ ಎತ್ತಿಹಿಡಿದಿದ್ದ ಟೀಂ ಇಂಡಿಯಾ ಇದೀಗ ಧವನ್ ನಾಯಕತ್ವದಲ್ಲಿ ಏಕದಿನ ಸರಣಿಯನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಇದರೊಂದಿಗೆ ತಂಡದ ಇಬ್ಬರು ಆಟಗಾರರ ಪ್ರದರ್ಶನದ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಸತತ ವೈಫಲ್ಯಗಳ ನಡುವೆಯೂ ರಿಷಬ್ ಪಂತ್ಗೆ (Rishabh Pant) ಅವಕಾಶ ನೀಡುತ್ತಿರುವುದು ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿದರೆ, ಇನ್ನೊಂದೆಡೆ ಟಿ20 ಕ್ರಿಕೆಟ್ನಲ್ಲಿ ಅಬ್ಬರಿಸಿ ಬೊಬ್ಬೆರೆಯುವ ಸೂರ್ಯಕುಮಾರ್ ಯಾದವ್ (Suryakumar Yadav) ಏಕದಿನ ಕ್ರಿಕೆಟ್ನಲ್ಲಿ ಫ್ಲಾಪ್ ಆಗುತ್ತಿರುವುದು ಬಿಸಿಸಿಐಗೆ ಹೊಸ ತಲೆನೋವು ತಂದ್ದೊಡ್ಡಿದೆ. ಪಂದ್ಯದಿಂದ ಪಂದ್ಯಕ್ಕೆ, ಸರಣಿಯಿಂದ ಸರಣಿಗೆ ಸೂರ್ಯ ಅವರ ಏಕದಿನ ಪ್ರದರ್ಶನ ಕುಸಿಯುತ್ತಿದೆ. ಪ್ರಸ್ತುತ ಕಿವೀಸ್ ವಿರುದ್ಧದ ಸರಣಿಯಲ್ಲೂ ಸೂರ್ಯ ಸೈಲೆಂಟ್ ಆಗಿದ್ದು, ಇಡೀ ಸರಣಿಯಲ್ಲಿ ಅವರು 50 ರನ್ ಕೂಡ ಗಳಿಸಲಿಲ್ಲ. ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್‌ನಲ್ಲಿ ಆಡಿದ 3 ಏಕದಿನ ಪಂದ್ಯಗಳ 3 ಇನ್ನಿಂಗ್ಸ್‌ಗಳಲ್ಲಿ ಕೇವಲ 48 ರನ್ ಗಳಿಸಿದರು. ಇದರಲ್ಲಿ ನೇಪಿಯರ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ 6 ರನ್‌ಗಳು ಹೊರಬಿದ್ದವು. ಮಳೆಯಲ್ಲಿ ಕೊಚ್ಚಿಹೋದ ಹ್ಯಾಮಿಲ್ಟನ್ ಏಕದಿನ ಪಂದ್ಯದಲ್ಲಿ ಅವರು...