
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಇಂದು ನಿನ್ನೆಯದ್ದಲ್ಲ. ಜೊತೆಗೆ ಆಗಾಗ ಈ ಗಡಿ ವಿವಾದ ಕ್ಯಾತೆಯನ್ನು ತೆಗೆಯುತ್ತಲೆ ಇರುತ್ತಾರೆ. ಮೊನ್ನೆಯಷ್ಟೇ ಕರ್ನಾಟಕದ ಬಸ್ ಗಳ ಮೇಲೆ ಮಸಿಯಲ್ಲಿ ಬರೆದು ಕ್ಯಾತೆ ಸೃಷ್ಟಿ ಮಾಡಿದ್ದರು. ಬಳಿಕ ಒಂದು ದಿನದ ಮಟ್ಟಿಗೆ ಬಸ್ ಸಂಚಾರ ಕೂಡ ನಿಂತು ಹೋಗಿತ್ತು.
ಈ ಗಡಿ ವಿವಾದದ ತೀರ್ಪು ಇಂದು ಹೊರಬೀಳಲಿದೆ. ಈ ಗಡಿ ವಿವಾದ ಕೋರ್ಟ್ ವ್ಯಾಪ್ತಿಗೆ ಬರುತ್ತದೆಯೋ..? ಇಲ್ಲವೋ ಎಂಬ ತೀರ್ಪು ಇಂದು ಹೊರಬೀಳಲಿದೆ. 2004ರಲ್ಲಿ ಮಹಾರಾಷ್ಟ್ರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇಂದು ಆ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ಸಾಧ್ಯತೆ ಇದೆ.
ಸುಮಾರು 18 ವರ್ಷಗಳಿಂದಾನು ಈ ವಿಚಾರದಲ್ಲಿ ಕಾನೂನು ಸಮರ ನಡೆಯುತ್ತಲೆ ಇದೆ. ಹೀಗಾಗಿ ಇಂದು ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ನತ್ತ ನೆಟ್ಟಿದೆ. ಕೋರ್ಟ್ ನಿಂದ ಯಾವ ರೀತಿಯಾದ ತೀರ್ಪು ಬರುತ್ತೆ ಎಂಬುದು ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡು ಕಡೆ ಕಾಯುತ್ತಿದ್ದಾರೆ.
The post 18 ವರ್ಷಗಳ ಕಾನೂನು ಸಮರ : ಇಂದು ಬೆಳಗಾವಿ-ಮಹಾರಾಷ್ಟ್ರ ಗಡಿ ವಿವಾದದ ಅಂತಿಮ ವಿಚಾರಣೆ…! first appeared on Kannada News | suddione.
source https://suddione.com/18-years-of-legal-battle-belgaum-maharashtra-border-dispute-verdict-today/
Comments
Post a Comment