ನವೀನ್ ಪಿ ಆಚಾರ್, ಸಹ ಶಿಕ್ಷಕರು ಮೆದೇಹಳ್ಳಿ.ಇವರಿಂದ,ನರಸಿಂಹಯ್ಯನವರ ಜನ್ಮ ದಿನದ, ಕುರಿತಾಗಿ ವಿಶೇಷ ಲೇಖನ. ಈ ವಾಕ್ಯವನ್ನು ಎಲ್ಲೋ ಕೇಳಿದ್ದೇವೆ, ಅಂತ ಅನ್ನಿಸಿದರೆ ಅದರ ಕರ್ತೃ ಡಾ.ಎಚ್.ನರಸಿಂಹಯ್ಯ, ಇವರು ಯಾವಾಗಲೂ ವೈಜ್ಞಾನಿಕವಾಗಿ ಚಿಂತಿಸುವ ಮೂಲಕ ನಾಡಿಗೆ ಬೆಳಕಾಗಿದ್ದರು. ಅಮೇರಿಕಾದಲ್ಲಿ ಡಾಕ್ಟರೇಟ್ ಪಡೆದ ನಂತರವೂ ಹಲವು ವರ್ಷಗಳ ಕಾಲ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಕರಾಗಿದ್ದ ಅವರು , ಎಚ್.ಎನ್ ಮೇಷ್ಟ್ರು! ಎಂದೇ ಪ್ರಖ್ಯಾತಿ ಪಡೆದವರು. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಜೈಲುವಾಸವನ್ನೂ ಅನುಭವಿಸಿದವರು. ಮಹಾತ್ಮ ಗಾಂಧಿಜಿಯವರು ಬೆಂಗಳೂರಿಗೆ ಬಂದಾಗ ಅವರ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು. ನಾಡಿನ ತುಂಬೆಲ್ಲ ಮೂಢನಂಬಿಕೆಯನ್ನು ವಿರೋಧಿಸುತ್ತಾ ವೈಜ್ಞಾನಿಕ ಚಳುವಳಿಗೆ ನಾಂದಿ ಹಾಡಿದ ಮಹಾಪುರುಷನಿಗೆ ಇಂದು ಜನ್ಮ ದಿನದ ಸಂಭ್ರಮ. " ನಿಂಬೆಹಣ್ಣು ಬೇಡ ಕುಂಬಳಕಾಯಿ ಕೊಡಿ" ಹೀಗೆಂದು ಸಾಯಿ ಬಾಬಾರನ್ನು ಪ್ರಶ್ನಿಸಿದ್ದು ಎಚ್. ನರಸಿಂಹಯ್ಯ ಅವರು. ಇದರ ಹಿನ್ನೆಲೆ ಇಷ್ಟೇ. ಸಾಯಿ ಬಾಬಾ ತನ್ನ ಭಕ್ತರಿಗೆ ಆಶೀರ್ವದಿಸಲು ಚೂಂ ಮಂತ್ರ ಮಾಡಿ ನಿಂಬೆ ಹಣ್ಣು , ಉಂಗುರು , ಚೈನ್ , ಎಚ್.ಎಂ.ಟಿ ವಾಚ್ , ಬೂದಿ... ಹೀಗೆ ಏನೆಲ್ಲಾ ಕೊಡುತ್ತಿದ್ದರು ಎಂಬುದು ಬಾಬಾ ಇದ್ದ ಕಾಲದ ಪ್ರತೀತಿ , ನಂಬಿಕೆ ಮತ್ತು ಅದನ್ನು ಕಂಡವರಿಗೆ ಸತ್ಯ ?! ಹೇಳೀ ಕೇಳೀ ವೈಜ್ಞಾನಿಕ ಮನೋಭಾವದ ಎಚ್.ಎನ್. ಆಯ್ತಪ್ಪಾ ನಿಮ್...
Comments
Post a Comment