Monday, 24 October 2022

IND vs PAK: ಹೀನಾಯವಾಗಿ ಸೋತ ಪಾಕ್ ತಂಡದ ಕಾಲೆಳೆದ ಜೊಮ್ಯಾಟೊ; ಟ್ವೀಟ್ ಸಖತ್ ವೈರಲ್

ಕಾಂಗರೂಗಳ ನಾಡಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ (T20 World Cup 2022) ಗೆಲುವಿನ ಶುಭಾರಂಭ ಮಾಡಿರುವ ಟೀಂ ಇಂಡಿಯಾ, ತನ್ನ ಮೊದಲ ಪಂದ್ಯದಲ್ಲೇ ಪಾಕ್ (India Vs Pakistan) ತಂಡವನ್ನು 4 ವಿಕೆಟ್​ಗಳಿಂದ ಮಣಿಸಿದೆ. ಟೀಂ ಇಂಡಿಯಾದ ಈ ಗೆಲುವಿನಲ್ಲಿ ಕೊಹ್ಲಿ (Virat Kohli) ಹೀರೋ ಎನಿಸಿಕೊಂಡರೆ, ಬೌಲಿಂಗ್​ನಲ್ಲಿ ಮಿಂಚಿದ ಹಾರ್ದಿಕ್ ಹಾಗೂ ಅರ್ಷ್​ದೀಪ್ ಸಿಂಗ್ ಕೂಡ ತಂಡದ ಗೆಲುವಿನ ಪ್ರಮುಖ ರೂವಾರಿಗಳು ಎನಿಸಿಕೊಂಡರು. ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿರುವ ಪಾಕ್ ತಂಡ ಮುಂದಿನ ಪಂದ್ಯದತ್ತ ಗಮನಹರಿಸುತ್ತಿದ್ದರೆ, ಟೀಂ ಇಂಡಿಯಾ ಅಭಿಮಾನಿಗಳು ಮಾತ್ರ ಪಾಕ್ ತಂಡವನ್ನು ಒಂದಲ್ಲ ಒಂದು ರೀತಿಯಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಇದಕ್ಕೆ ಕೈಜೋಡಿಸಿರುವ ಭಾರತ ಮೂಲದ ಫುಡ್ ಡೆಲಿವರಿಂಗ್ ಆ್ಯಪ್ ಜೊಮ್ಯಾಟೊ (Zomato) ಕೂಡ ತನ್ನ ತಮಾಷದಾಯಕ ಟ್ವೀಟ್​ನಿಂದ ಪಾಕಿಸ್ತಾನದ ಕಾಲೆಳೆದಿದೆ.

ಜೊಮ್ಯಾಟೊ ಟ್ವೀಟ್ ಸಖತ್ ವೈರಲ್

ಟೀಂ ಇಂಡಿಯಾ ವಿರುದ್ಧ ಪಾಕ್ ತಂಡ ಸೋತ ಬಳಿಕ ಟ್ವೀಟ್ ಮಾಡಿರುವ ಜೊಮ್ಯಾಟೊ, ‘ಪ್ರಿಯ ಪಾಕಿಸ್ತಾನ, ನೀವು ಸೋಲನ್ನು ಆರ್ಡರ್ ಮಾಡಿದ್ದೀರಾ? ಕೊಹ್ಲಿ ನಿಮ್ಮ ಸರ್ವಿಸ್’ (“Dear Pakistan, ordered a defeat? Virat your service.”) ಎಂದು ಟ್ವೀಟ್ ಮಾಡಿದೆ. ಈಗ ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.

ಜೊಮ್ಯಾಟ್ ಮಾಡಿರುವ ಈ ಟ್ವೀಟ್​ಗೆ ಮರು ಟ್ವೀಟ್ ಮಾಡಿರುವ ಪಾಕಿಸ್ತಾನ ಕರೀಂ ಎನ್ನುವ ಟ್ವಿಟರ್ ಹ್ಯಾಂಡಲ್, ‘ವಿ ಡೋಂಟ್ ಹ್ಯಾವ್ ಎ ಚೀಟ್ ಡೇಸ್’ (We don’t have cheat days) ಎಂದು ಬರೆದುಕೊಂಡಿದೆ. ಈ ಮೂಲಕ 20ನೇ ಓವರ್​ನಲ್ಲಿನ ನೋ ಬಾಲ್​ ಪ್ರಸಂಗವನ್ನು ಸೂಕ್ಷ್ಮವಾಗಿ ಎಳೆದು ತಂದಿರುವ ಈ ಟ್ವಿಟರ್ ಹ್ಯಾಂಡಲ್, ಆ ಎಸೆತ ನೋ ಬಾಲ್ ಆಗಿರಲಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿಕೊಂಡಿದೆ.

ಜೊಮ್ಯಾಟೊ ಮಾಡಿರುವ ಈ ಟ್ವೀಟ್​ಗೆ ಧ್ವನಿಗೂಡಿಸಿರುವ ಅನೇಕ ಭಾರತೀಯರು, “ಈ ಸಮಯದಲ್ಲಿ ನಿವು ರುಚಿಯನ್ನು ಬದಲಾಯಿಸಲು ಮರೆಯಬೇಡಿ. ಏಕೆಂದರೆ, ಅವರಿಗೆ (ಪಾಕಿಸ್ತಾನ) ಈ ಊಟ ಇಷ್ಟವಾಗದೆ ಇರಬಹುದು ಎಂದು ಮರು ಟ್ವೀಟ್ ಮಾಡಿದ್ದಾರೆ.

ಪಂದ್ಯದ ಸಾರಾಂಶ ಹೀಗಿದೆ

ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಬಾಬರ್ ಎರಡನೇ ಓವರ್​ನಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಮತ್ತೊಬ್ಬ ಆರಂಭಿಕ ರಿಜ್ವಾನ್ 4 ರನ್​ಗಳಿಸಿ ಅರ್ಷದೀಪ್​ಗೆ ವಿಕೆಟ್ ಒಪ್ಪಿಸಿದರು. ಆದರೆ ಈ ಎರಡು ವಿಕೆಟ್ ಉರುಳಿದ ಬಳಿಕ ಜೊತೆಯಾದ ಇಫ್ತಿಕರ್ ಅಹ್ಮದ್ ಮತ್ತು ಶಾನ್ ಮಸೂದ್ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ವೇಳೆ ಇಫ್ತಿಕರ್ 34 ಎಸೆತಗಳಲ್ಲಿ 51 ರನ್ ಗಳಿಸಿದರೆ, ಮಸೂದ್ ಅಜೇಯ 52 ರನ್ ಗಳಿಸಿದರು. ಇವರಿಬ್ಬರ 81 ರನ್ ಜೊತೆಯಾಟ ಪಾಕಿಸ್ತಾನವನ್ನು 150 ರ ಗಡಿ ದಾಟುವಂತೆ ಮಾಡಿತು.

ಭಾರತದ ಅಗ್ರ ಕ್ರಮಾಂಕ ವಿಫಲ

160 ರನ್​ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭವೂ ಕೂಡ ತೀರ ಕಳಪೆಯಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಕೇವಲ 4 ರನ್ ಗಳಿಸಿ ಔಟಾದರೆ ನಾಯಕ ರಾಹುಲ್ ಕೂಡ ಅಷ್ಟೇ ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. ಸೂರ್ಯಕುಮಾರ್ ಯಾದವ್ ಕೂಡ ಇದಷ್ಟು ಸಮಯ ಸ್ಫೋಟಕ ಬ್ಯಾಟಿಂಗ್ ಮಾಡಿ, ಕೇವಲ 15 ರನ್ ಗಳಿಸಿ ಔಟಾದರು. ಈ ವಿಕೆಟ್ ಬಳಿಕ ಬಂದ ಅಕ್ಷರ್ ಪಟೇಲ್ ಕೂಡ ಕೇವಲ 2 ರನ್ ಗಳಿಸಿ ರನೌಟ್ ಆದರು.

ಆದರೆ 4 ವಿಕೆಟ್​ ಉರುಳಿದ ನಂತರ ಜೊತೆಯಾದ ವಿರಾಟ್ ಮತ್ತು ಹಾರ್ದಿಕ್ ಪಾಂಡ್ಯ ಅರ್ಧಶತಕದ ಜೊತೆಯಾಟದ ಮೂಲಕ ಭಾರತವನ್ನು ಗೆಲುವಿನ ಟ್ರ್ಯಾಕ್​ಗೆ ಮರಳಿಸಿದರು. ಈ ವೇಳೆ ವಿರಾಟ್ ಕೊಹ್ಲಿ ತಮ್ಮ ಅರ್ಧಶತಕವನ್ನು ಸಹ ಪೂರೈಸಿದರು. ಅಂತಿಮವಾಗಿ ಈ ಇಬ್ಬರ ನಡುವೆ ಶತಕದ ಜೊತೆಯಾಟವು ಬಂತು. ಆದರೆ ಗೆಲುವಿನ ದಡ ಸೇರಿಸಬೇಕಿದ್ದ ಪಾಂಡ್ಯ 20 ನೇ ಓವರ್ ಮೊದಲ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಪಾಂಡ್ಯ ಔಟಾದ ನಂತರ ಬಂದ ಕಾರ್ತಿಕ್ ಕೂಡ ಕೇವಲ 1 ರನ್ ಗಳಿಗೆ ಸುಸ್ತಾದರು. ಕಾರ್ತಿಕ್ ವಿಕೆಟ್ ಬಳಿಕ ಬಂದ ಅಶ್ವಿನ್ ಒಂದು ರನ್ ಗಳಿಸಿ ಅಜೇಯರಾಗಿ ಉಳಿದಲ್ಲದೆ ಗೆಲುವಿನ ರನ್ ಬಾರಿಸಿದರು.



source https://tv9kannada.com/sports/cricket-news/ind-vs-pak-zomato-goes-savage-after-men-in-blue-win-tweets-on-pakistans-defeat-psr-au14-459677.html

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...