ಚಿತ್ರದುರ್ಗ, ಸುದ್ದಿಒನ್ (ಅ.25) : ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಸೋಮವಾರ ಮಧ್ಯ ರಾತ್ರಿ ಸುಮಾರು 12 ಗಂಟೆಯ ಸಮಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ಗಾಂಧಿ ವೃತ್ತದ ಕಡೆಗೆ ಹೋಗುವಾಗ ವೇಗವಾಗಿ ಬಂದ ಕಾರೊಂದು ಪ್ರವಾಸಿ ಮಂದಿರದ ಮುಂಭಾಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆ ಪರಿಣಾಮವಾಗಿ ಸ್ಥಳದಲ್ಲೇ ಕಾರು ಚಾಲಕ ಮನು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಉಳಿದ ಮೂವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು.
ಮಧ್ಯರಾತ್ರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
The post Breaking news : ಚಿತ್ರದುರ್ಗ ನಗರದಲ್ಲಿ ಭೀಕರ ಅಪಘಾತ : ಸ್ಥಳದಲ್ಲೇ ಮೂವರು ಸಾವು first appeared on Kannada News | suddione.
source https://suddione.com/terrible-accident-in-chitradurga-city-three-killed/








No comments:
Post a Comment