Skip to main content

ವಿಜ್ಞಾನ ವಸ್ತುಪ್ರದರ್ಶನ : ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

 

ಚಳ್ಳಕೆರೆ,(ಅ.30) : ತಾಲ್ಲೂಕಿನ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯು ವಿಜ್ಞಾನ ವಸ್ತುಪ್ರದರ್ಶದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಚಳ್ಳಕೆರೆಯ ಚಿನ್ಮಯಿ ಪ್ರೌಢಶಾಲೆಯ ಆವರಣದಲ್ಲಿ  ದಿನಾಂಕ : 29-10-2022 ರಂದು ತಾಲ್ಲೂಕು ಮಟ್ಟದ ವಿಜ್ಞಾನ ವಸ್ತುಪ್ರದರ್ಶನವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿತ್ತು.

ಗಣಿತ,ಭೌತವಿಜ್ಞಾನ, ರಸಾಯನವಿಜ್ಞಾನ, ಭೂಮಿ ಮತ್ತು ಬಾಹ್ಯಾಕಾಶ, ಬಯೋಸೈನ್ಸ್ , ಬಯೋ ಕೆಮಿಸ್ಟ್ರಿ, ಪರಿಸರ ವಿಜ್ಞಾನ , ಎಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು 95 ವಿವಿಧ ಮಾದರಿಗಳು ಪ್ರದರ್ಶನಗೊಂಡವು.

ಸರ್ಕಾರಿ ಪ್ರೌಢಶಾಲೆ ರೇಖಲಗೆರೆ ಲಂಬಾಣಿ ಹಟ್ಟಿ ಶಾಲೆಯ ವಿದ್ಯಾರ್ಥಿನಿಯರುಗಳಾದ ಭಾರತಿ ಮತ್ತು ಅನುರಾಧ ಇವರು ತಯಾರಿಸಿದ ತೇಲುವ ಮನೆ ಮತ್ತು ತೇಲುವ ಕೊಟ್ಟಿಗೆ ವೈಜ್ಞಾನಿಕ ಮಾದರಿಯು ವಿನೂತನ ಮಾದರಿಯಾಗಿತ್ತು. ಕಡಲ ತೀರ ಪ್ರದೇಶದಲ್ಲಿ, ನದಿ ತೀರ ಪ್ರದೇಶದಲ್ಲಿ ವಾಸಿಸುವ ಜನರು ಈ ರೀತಿಯ ತೇಲುವ ಮನೆ ಮತ್ತು ತೇಲುವ ಕೊಟ್ಟಿಗೆಗಳನ್ನು ನಿರ್ಮಿಸಿಕೊಂಡರೆ ಎಷ್ಟೇ ಪ್ರವಾಹ  ಬಂದರು ಈ ಮನೆಗಳು ನೀರಿನಲ್ಲಿ ಮುಳುಗಿ ಅಲ್ಲಿನ ಜನರ ಪ್ರಾಣ – ಹಾನಿ, ಜಾನುವಾರುಗಳ ಹಾನಿಯನ್ನು ಉಂಟಾಗದಂತೆ ತಡೆಯುತ್ತದೆ.ಅತ್ಯಂತ ವಿನೂತನವಾದ  ತಂತ್ರವನ್ನು ಈ ಮಾದರಿಯಲ್ಲಿ ಅಳವಡಿಸಲಾಗಿದೆ.

ನೀರಿನಲ್ಲಿ ಕಟ್ಟುವ ಸೇತುವೆಗಳ ತಂತ್ರವನ್ನು ಹಾಗೂ ನೀರಿನಲ್ಲಿ ತೇಲುವ ಹಡಗಿನ ಮಾದರಿಯಲ್ಲಿ ಮನೆಯ ಬುನಾದಿಯನ್ನು ತೇಲುವ ವಸ್ತುಗಳನ್ನು ಬಳಸಿ ನಿರ್ಮಿಸಿ, ಮನೆಯ ನಾಲ್ಕು ಮೂಲೆಯಲ್ಲಿ ಆಟೋಮ್ಯಾಟಿಕ್ ಜಾಕಿಂಗ್ ವ್ಯವಸ್ತೆಯನ್ನು ಅಳವಡಿಸಲಾಗಿದ್ದು, ನೀರಿನ ಪ್ರವಾಹದಿಂದಾಗಿ ಮನೆಯ ಸುತ್ತ ನೀರು ಅವರಿಸಿಕೊಂಡಾಗ ಮನೆ ನೀರಿನಲ್ಲಿ ಕೆಳಗಿಂದ ಮೇಲೆ ಚಲಿಸುವಂತೆ, ಹಾಗೂ ನೀರು ಖಾಲಿಯಾದಾಗ  ಮೇಲಿನಿಂದ ಕೆಳಗೆ   ಚಲಿಸುವಂತ ತಂತ್ರವನ್ನು ಉಪಯೋಗಿಸಲಾಗಿದೆ, ಆಗ ಮನೆಯಲ್ಲಿರುವ ಅಥವಾ ಕಾಂಪ್ಲೆಕ್ಸ್ ನಲ್ಲಿರುವ  ಜನರು ನೀರು ಪಾಲಗದೆ ಮನೆಯಲ್ಲಿ ಜೀವಂತವಾಗಿರುತ್ತಾರೆ ತುರ್ತು ಸಂಧರ್ಭದಲ್ಲಿ ರಕ್ಷಣಾ ಪಡೆಯವರು ಸುಲಭವಾಗಿ  ಇವರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ವರ್ಗಾವಣೆ ಮಾಡಬಹುದು, ಮನೆಯ ಸುತ್ತ ನಾಲ್ಕು ಮೂಲೆಗಳಲ್ಲಿ ನಾಲ್ಕು ಪಿಲ್ಲರ್ ಗಳನ್ನ ನೀರಿನ ಆಳದಲ್ಲಿ ಬೆಡ್ ನಿಂದ ನಿರ್ಮಿಸಿ ಮನೆ ನೀರಿನಲ್ಲಿ ತೇಲುವ ಸಮಯದಲ್ಲಿ ಹೆಚ್ಚಿನ ಪ್ರವಾಹದಿಂದ ಪಲ್ಟಿ ಹೊಡೆದು ನೀರಿನಲ್ಲಿ ಮುಳಗದಂತೆ ಮನೆಯ ಸುತ್ತಲೂ ತಡೆಗಳನ್ನು ಸಹ ಈ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇದೆ ರೀತಿಯಲ್ಲಿ ತೇಲುವ ಕೊಟ್ಟಿಗೆಯ ಮಾದರಿಯನ್ನು ತಯಾರಿಸಲಾಗಿದ್ದು ಅದರಲ್ಲಿರುವ ಜಾನುವಾರುಗಳು ನೀರು ಪಾಲಾಗಿ ಅಸು ನೀಗುವುದನ್ನು  ತಪ್ಪಿಸಿ ಅವುಗಳನ್ನು ಸಹ ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ಯಬಹುದು.

ಈ ಮಾದರಿಯನ್ನು ಪ್ರವಾಹದ ಸಂಧರ್ಭದಲ್ಲಿ ಉಂಟಾಗುವ ನಷ್ಟವನ್ನು ಹಾಗೂ ಭಾರಿ ಪ್ರವಾಹದಂತಹ ವಿಪತ್ತುಗಳನ್ನು ನಿರ್ವಹಣೆ ಮಾಡಿ ಆರ್ಥಿಕವಾಗಿ ಉಂಟಾಗುವ ನಷ್ಟವನ್ನು, ಮಾನವ ಸಂಪನ್ಮೂಲ ನಷ್ಟವನ್ನು, ಹಾಗೂ ಜಾನುವಾರುಗಳ ಸಂತತಿಯ ಸಂಖ್ಯೆ ಕಡಿಮೆಯಾಗದಂತೆ ತಡೆಗಟ್ಟುವ ಮುಖ್ಯವಾದ ಉದ್ದೇಶಗಳನ್ನು ಈ ಮಾದರಿಯು ಹೊಂದಿದೆ. ಶಾಲೆಯ ವಿಜ್ಞಾನ ಶಿಕ್ಷಕರಾದ ನಾಗಭೂಷಣ್ ಕೆ.ಟಿ.ಇವರು  ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು  ನೀಡಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಶಾಲೆಯ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯಿತಿಯ ಸದಸ್ಯರುಗಳು, ಊರಿನ ಗ್ರಾಮಸ್ಥರು ಹಾಗೂ ಪೋಷಕರು ಮಕ್ಕಳಿಗೆ ಅಭಿನಂದಿಸಿದ್ದಾರೆ.

The post ವಿಜ್ಞಾನ ವಸ್ತುಪ್ರದರ್ಶನ : ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ first appeared on Kannada News | suddione.



source https://suddione.com/science-exhibition-rekhalagere-lambani-hatti-govt-high-school-selected-for-district-level/

Comments

Popular posts from this blog

ಪ್ರಶ್ನಿಸದೇ ಒಪ್ಪಬೇಡಿ!? ಎಂದ ವಿಚಾರವಾದಿ, ನರಸಿಂಹಯ್ಯನವರ ಜನ್ಮ ದಿನದ ವಿಶೇಷ.

ನವೀನ್ ಪಿ ಆಚಾರ್, ಸಹ ಶಿಕ್ಷಕರು ಮೆದೇಹಳ್ಳಿ.ಇವರಿಂದ,ನರಸಿಂಹಯ್ಯನವರ ಜನ್ಮ ದಿನದ, ಕುರಿತಾಗಿ ವಿಶೇಷ ಲೇಖನ.   ಈ ವಾಕ್ಯವನ್ನು ಎಲ್ಲೋ ಕೇಳಿದ್ದೇವೆ, ಅಂತ ಅನ್ನಿಸಿದರೆ ಅದರ ಕರ್ತೃ ಡಾ.ಎಚ್.ನರಸಿಂಹಯ್ಯ,  ಇವರು  ಯಾವಾಗಲೂ ವೈಜ್ಞಾನಿಕವಾಗಿ ಚಿಂತಿಸುವ ಮೂಲಕ ನಾಡಿಗೆ ಬೆಳಕಾಗಿದ್ದರು. ಅಮೇರಿಕಾದಲ್ಲಿ ಡಾಕ್ಟರೇಟ್‌ ಪಡೆದ ನಂತರವೂ ಹಲವು ವರ್ಷಗಳ ಕಾಲ ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಶಿಕ್ಷಕರಾಗಿದ್ದ ಅವರು , ಎಚ್.ಎನ್‌ ಮೇಷ್ಟ್ರು! ಎಂದೇ ಪ್ರಖ್ಯಾತಿ ಪಡೆದವರು. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಜೈಲುವಾಸವನ್ನೂ ಅನುಭವಿಸಿದವರು. ಮಹಾತ್ಮ ಗಾಂಧಿಜಿಯವರು ಬೆಂಗಳೂರಿಗೆ ಬಂದಾಗ ಅವರ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು. ನಾಡಿನ ತುಂಬೆಲ್ಲ ಮೂಢನಂಬಿಕೆಯನ್ನು ವಿರೋಧಿಸುತ್ತಾ ವೈಜ್ಞಾನಿಕ ಚಳುವಳಿಗೆ ನಾಂದಿ ಹಾಡಿದ ಮಹಾಪುರುಷನಿಗೆ ಇಂದು ಜನ್ಮ ದಿನದ ಸಂಭ್ರಮ. " ನಿಂಬೆಹಣ್ಣು ಬೇಡ ಕುಂಬಳಕಾಯಿ ಕೊಡಿ" ಹೀಗೆಂದು ಸಾಯಿ ಬಾಬಾರನ್ನು ಪ್ರಶ್ನಿಸಿದ್ದು ಎಚ್. ನರಸಿಂಹಯ್ಯ ಅವರು. ಇದರ ಹಿನ್ನೆಲೆ ಇಷ್ಟೇ. ಸಾಯಿ ಬಾಬಾ ತನ್ನ ಭಕ್ತರಿಗೆ ಆಶೀರ್ವದಿಸಲು ಚೂಂ ಮಂತ್ರ ಮಾಡಿ ನಿಂಬೆ ಹಣ್ಣು , ಉಂಗುರು , ಚೈನ್ , ಎಚ್.ಎಂ.ಟಿ ವಾಚ್ , ಬೂದಿ... ಹೀಗೆ ಏನೆಲ್ಲಾ ಕೊಡುತ್ತಿದ್ದರು ಎಂಬುದು ಬಾಬಾ ಇದ್ದ ಕಾಲದ ಪ್ರತೀತಿ , ನಂಬಿಕೆ ಮತ್ತು ಅದನ್ನು ಕಂಡವರಿಗೆ ಸತ್ಯ ?! ಹೇಳೀ ಕೇಳೀ ವೈಜ್ಞಾನಿಕ ಮನೋಭಾವದ ಎಚ್.ಎನ್. ಆಯ್ತಪ್ಪಾ ನಿಮ್...

NMMS ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ, ಬೃಹನ್ಮಠ ಪ್ರೌಢಶಾಲೆಗೆ ಕೀರ್ತಿತಂದ ಸಂಜನಾ.

  ಚಿತ್ರದುರ್ಗ : ನಗರದ ಪಶ್ಚಿಮ ಕ್ಲಸ್ಟರ್ ನ ಬೃಹನ್ಮಠ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಂಜನಾ NMMS ಪರೀಕ್ಷೆಯಲ್ಲಿ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಆಯ್ಕೆ ಆದ ಏಕಮಾತ್ರ ವಿ ದ್ಯಾರ್ಥಿನಿ ಆಗಿರುತ್ತಾಳೆ . 2020ರ ಜೂನ್ ತಿಂಗಳಲ್ಲಿ ನಡೆದ NMMS ಪರೀಕ್ಷೆಯಲ್ಲಿ ಭಾಗವಹಿಸಿದ ಸಂಜನಾ . ಉತ್ತೀರ್ಣಳಾಗಿ, ವಿದ್ಯಾರ್ಥಿ ವೇತನಕ್ಕೆ ಅರ್ಹಳಾದ ಇವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಲಾ   ವತಿಯಿಂದ ಅಭಿನಂದಿಸಲಾಯಿತು.   ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ ಸಿದ್ದಪ್ಪ ಅವರು ಅಭಿನಂದಿಸಿ , ಈ ವಿ ದ್ಯಾ ರ್ಥಿಯ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು 48000ರೂ ವಿ ದ್ಯಾ ರ್ಥಿ ವೇತನ ಪಡೆದಿರುತ್ತಾಳೆ ಎಂದ ರು. ಅಭಿನಂದನಾ ಕಾರ್ಯಕ್ರಮದಲ್ಲಿ ಪಶ್ಚಿಮ ಕ್ಲಸ್ಟರ್ CRP ಅಜಯ್ ಕುಮಾರ್ , IERT ರಾಜಣ್ಣ , BRP ದೇವರಾಜ್ , ಮುಖ್ಯ ಶಿಕ್ಷಕರಾದ ಆಶಾರಾಣಿ , ತರಳಬಾಳು ಪ್ರಾಥಮಿಕ ಶಾಲೆ ಸಹ ಶಿಕ್ಷಕರಾದ ಮನು ಹಾಗೂ ಶಾಲೆಯ ಸಹ ಶಿಕ್ಷಕರು ಅಭಿನಂದಿಸಿದರು. ಬಿ.ಆರ್.ಸಿ. ಈಶ್ವರಪ್ಪ ಸರ್ ಹಾಗೂ ಇ.ಸಿ.ಓ ಇನಾಯತ್ ಸರ್ ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿದರು.

ಭಾರತೀಯ ಕ್ರಿಕೆಟ್ ಆಟಗಾರನಿಗೆ ಕೊರೋನಾ ಸೋಂಕು, ಕೊಹ್ಲಿ ಟೀಮ್ ಗೆ ಹೆಚ್ಚಿದ ಆತಂಕ.

  ಲಂಡನ್: ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ ಎನ್ನಲಾಗಿದೆ. ಕ್ರಿಕೆಟ್‌ ಬಜ್‌ ವರದಿಯ ಪ್ರಕಾರ , ಟೀಮ್‌ ಇಂಡಿಯಾದ ಕನಿಷ್ಠ ಒಬ್ಬ ಆಟಗಾರನಾದರೂ ಮಾರಕ ಕೊರೊನಾವೈರಸ್‌ಗೆ ತುತ್ತಾಗಿದ್ದಾನೆ. ಶೀಘ್ರದಲ್ಲೇ ಆಟಗಾರನ ಹೆಸರನ್ನು ಪ್ರಕಟಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಇನ್ನೂ ಕ್ರಿಕೆಟ್‌ ಬಜ್‌ ವರದಿಯ ಪ್ರಕಾರ , ಕೋವಿಡ್ - 19 ಗೆ ಈಡಾಗಿರುವ ಆಟಗಾರನನ್ನು ಪ್ರತ್ಯೇಕಿಸಲಾಗಿದೆ ಮತ್ತು ಮುಂಬರುವ ಮೂರು ದಿನಗಳ ಅಭ್ಯಾಸ ಪಂದ್ಯಕ್ಕಾಗಿ ತಂಡದೊಂದಿಗೆ ಡರ್ಹಾಮ್‌ಗೆ ಪ್ರಯಾಣಿಸುವುದಿಲ್ಲ ಅಂತ ತಿಳಿಸಿದೆ. ಈಗಿನಂತೆ , ಈ ಅಂಕಿ ಅಂಶವು ಒಂದಾಗಿದೆ , ಆದರೆ ಹೆಚ್ಚಿನ ಆಟಗಾರರು ಸೋಂಕಿಗೆ ಒಳಗಾಗಬಹುದು ಎನ್ನಲಾಗಿದ್ದು ಇದರಿಂದ ತಂಡದಲ್ಲಿ ಆತಂಕದ ವಾತವಾರಣ ನಿರ್ಮಾಣವಾಗಿದೆ.   ಕರೋನ ಪರೀಕ್ಷೆಗಳನ್ನು ನಡೆಸುತ್ತಿರುವ ಸಂಸ್ಥೆಯಾದ ಇಂಗ್ಲೆಂಡ್‌ನ ರಾಷ್ಟ್ರೀಯ ಆರೋಗ್ಯ ಸೇವೆ ಶೀಘ್ರದಲ್ಲೇ ಆಟಗಾರನ ಹೆಸರನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಅದೇ ರೀತಿ ಮಾಧ್ಯಮಗಳ ವರದಿಯ ಪ್ರಕಾರ , ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ನಂತರ ಮೂರು ವಾರಗಳ ವಿರಾಮದ ಸಮಯದಲ್ಲಿ ಸೊಂಕಿಗೆ ಈಡಾಗಿರುವ ಆಟಗಾರ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಇತ್ತೀಚೆಗೆ ಭಾಗವಹಿಸಿದ್ದರು ಎನ್ನಲಾಗಿದೆ. ಡರ್ಹಾಮ್ ತಲುಪಿದ ನಂತರ ಆಟಗಾರರನ್ನು ಮತ್ತೆ ಪರೀಕ್ಷಿಸಲಾಗುವುದು ಎಂದು ವರದಿಯಾಗಿದೆ. ಮೊದಲ ಸುತ್ತಿನ ಪರೀಕ್ಷೆ ...