Wednesday, 12 October 2022

ಚಿತ್ರದುರ್ಗ : ಸ್ಟೇಡಿಯಂ ರಸ್ತೆ ಬಳಿ ವೋಲ್ವೋ ಬಸ್, ಬೈಕ್ ಡಿಕ್ಕಿ, ಓರ್ವ ಸಾವು, ಮತ್ತೋರ್ವನಿಗೆ ಗಾಯ

ಚಿತ್ರದುರ್ಗ,ಸುದ್ದಿಒನ್, (ಅ.12) : ನಗರದ ಸ್ಟೇಡಿಯಂ ರಸ್ತೆ ಬಳಿ ನಡೆದ ಅಪಘಾತದಲ್ಲಿ ವೋಲ್ವೋ ಬಸ್ ಗೆ ಬೈಜ್ ಡಿಕ್ಕಿಯಾಗಿ ಓರ್ವ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಇಂದು (ಬುಧವಾರ) ಬೆಳಿಗ್ಗೆ ನಡೆದಿದೆ.

ದ್ವಿಚಕ್ರ ವಾಹನ ಸವಾರರು ಸ್ಟೇಡಿಯಂ ಸರ್ಕಲ್ ನಿಂದ ಬಂದು ಮುಖ್ಯರಸ್ತೆಯಲ್ಲಿ  (ಬಿ.ಡಿ.ರೋಡ್) ಚಿತ್ರದುರ್ಗದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕೆಎಸ್ ಆರ್ ಟಿಸಿ ವೋಲ್ವೋ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.  ಇವರಲ್ಲಿ ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಕೂಡಲೇ ಸಂಚಾರಿ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

The post ಚಿತ್ರದುರ್ಗ : ಸ್ಟೇಡಿಯಂ ರಸ್ತೆ ಬಳಿ ವೋಲ್ವೋ ಬಸ್, ಬೈಕ್ ಡಿಕ್ಕಿ, ಓರ್ವ ಸಾವು, ಮತ್ತೋರ್ವನಿಗೆ ಗಾಯ first appeared on Kannada News | suddione.



source https://suddione.com/chitradurga-volvo-bus-collides-with-bike-near-stadium-road-one-dead-another-injured/

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...