Thursday, 20 October 2022

2047ಕ್ಕೆ ರಾಮಮಂದಿರ ಕೆಡವಿ ಮಸೀದಿ ಕಟ್ಟುವ ಪ್ಲ್ಯಾನ್ ಮಾಡಿತ್ತಾ ಪಿಎಫ್ಐ..?

ಈಗಾಗಲೇ ದೇಶದಲ್ಲಿ ನಿಷೇಧವಾಗಿರುವ ಪಿಎಫ್ಐ ದೊಡ್ಡ ಪ್ಲ್ಯಾನ್ ಅನ್ನೇ ಮಾಡಿಕೊಂಡಿದ್ದರ ಬಗ್ಗೆ ಬಹಿರಂಗವಾಗಿದೆ. ರಾಮಮಂದಿರವನ್ನು ಕೆಡವಿ ಬಾಬರಿ ಮಸೀದಿಯನ್ನು ಕಟ್ಟಲು ಯೋಜನೆ ರೂಪಿಸಿತ್ತಂತೆ. ಈ ವಿಚಾರ ಆಂಟಿ ಟೆರರ್ ಸ್ಕ್ವಾಡ್ ಮೂಲಕ ಬಹಿರಂಗವಾಗಿದೆ.

ಇತ್ತಿಚೆಗೆ ಎಟಿಎಸ್, ಐವರು ಪಿಎಫ್ಐ ಸದಸ್ಯರನ್ನು ಬಂಧಿಸಿತ್ತು. ವಿಚಾರಣೆ ನಡೆಸಿದಾಗ ಆ ಐವರು ಈ ರಾಮಮಂದಿರದ ಬಗ್ಗೆ ಬಾಯ್ಬಿಟ್ಟಿದ್ದಾರೆ. 2047ರ ವೇಳೆ ರಾಮಮಂದಿರ ಕೆಡವಿ ಅಲ್ಲಿ ಬಾಬರಿ ಮಸೀದಿಯನ್ನು ಕಟ್ಟುವ ಯೋಜನೆಯನ್ನು ರೂಪಿಸಿದ್ದರಂತೆ.

ಈ ಬಗ್ಗೆ ಮಾಹಿತಿ ನೀಡಿರುವ ಎಟಿಎಸ್, ಯಾವುದೇ ಬೆಲೆ ತೆತ್ತದರೂ ಸರಿ 2047ರೊಷ್ಟೊತ್ತಿಗೆ ಭಾರತ ದೇಶವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಪ್ರಯತ್ನ ನಡೆಸುತ್ತಿದ್ದರಂತೆ. ಈ ಗುರಿಯಿಂದಾಗಿಯೇ ವಿದೇಶದಲ್ಲಿ ವಿದ್ವಂಸಕ ಕೃತ್ಯದ ತರಬೇತಿ ಪಡೆಯುತ್ತಿದ್ದಾರೆ. ಜೊತೆಗೆ ಶಂಕಿತರ ಖಾತೆಗೆ ವಿದೇಶದಿಂದ ಹಣ ಕೂಡ ಸಂದಾಯವಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಇನ್ನು 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ತುಂಬುತ್ತದೆ. ಹೀಗಾಗಿ ಆ ವರ್ಷವನ್ನೇ ಈ ಬಂಧಿತರು ಟಾರ್ಗೆಟ್ ಮಾಡಲಾಗಿತ್ತು ಎನ್ನಲಾಗಿದೆ. ಸದ್ಯ ಪಿಎಫ್ಐ ಸಂಘಟನೆಯನ್ನು ದೇಶದಲ್ಲಿ ಐದು ವರ್ಷಗಳ ಕಾಲ ನಿಷೇಧ ಮಾಡಲಾಗಿದೆ.

The post 2047ಕ್ಕೆ ರಾಮಮಂದಿರ ಕೆಡವಿ ಮಸೀದಿ ಕಟ್ಟುವ ಪ್ಲ್ಯಾನ್ ಮಾಡಿತ್ತಾ ಪಿಎಫ್ಐ..? first appeared on Kannada News | suddione.



source https://suddione.com/pfi-had-plans-to-blow-up-ayodhya-ram-mandir-and-build-babri-masjid/

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...