Skip to main content

Posts

Showing posts from October, 2022

ಶಿವಮ್ಮ ನಿಧನ

ಚಿತ್ರದುರ್ಗ: ನಗರದ ಸಿ.ಕೆ ಪುರ ಅಂಬೇಡ್ಕರ್ ನಗರದ ನಿವಾಸಿ ಶಿವಮ್ಮ ಸೋಮವಾರ ಬೆಳಗಿನ ಜಾವ ನಿಧನರಾದರು. ಮೃತರಿಗೆ ಮೂರು ಜನ ಗಂಡು ಮಕ್ಕಳು ಒಬ್ಬ ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಸೋಮವಾರ ಮಧ್ಯಾಹ್ನ 3:00 ಗಂಟೆಗೆ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ  ಹಿಂಭಾಗದಲ್ಲಿರುವ ಯಂಗಮ್ಮನಕಟ್ಟೆಯ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ಅಗಲಿಕೆಗೆ ನಗರಸಭೆ ಮಾಜಿ ಸದಸ್ಯ ಸಿ.ಎನ್.ಕುಮಾರ್ ಸಂತಾಪ ಸೂಚಿಸಿದ್ದಾರೆ The post ಶಿವಮ್ಮ ನಿಧನ first appeared on Kannada News | suddione . source https://suddione.com/shivamma-death-news/

Virat Kohli: ವಿರಾಟ್ ಕೊಹ್ಲಿ ನೆಲೆಸಿರುವ ಖಾಸಗಿ ರೂಮ್​ನ ವಿಡಿಯೋ ಸೋರಿಕೆ: ಇನ್​ಸ್ಟಾಗ್ರಾಮ್​ನಲ್ಲಿ ಕೋಪಗೊಂಡ ಕಿಂಗ್

ಐಸಿಸಿ ಟಿ20 ವಿಶ್ವಕಪ್​ಗಾಗಿ (T20 World Cup) ಆಸ್ಟ್ರೇಲಿಯಾದಲ್ಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಅವಮಾನ ಕಾಡುತ್ತಿದೆ. ಇತ್ತೀಚೆಗಷ್ಟೆ ಟೀಮ್ ಇಂಡಿಯಾ ಆಟಗಾರರಿಗೆ ಬೇಕಾದ ಆಹಾರ ವ್ಯವಸ್ಥೆ ಇರಲಿಲ್ಲ ಎಂಬುದು ದೊಡ್ಡ ಸುದ್ದಿಯಾಗಿತ್ತು. ಅಲ್ಲದೆ ಸ್ಟೇಡಿಯಂನಿಂದ ತಂಗಿರುವ ಹೋಟೆಲ್​ಗೆ ಸಾಕಷ್ಟು ದೂರ ಪ್ರಯಾಣಿಸ ಬೇಕಿತ್ತು. ಇವುಗಳ ನಡುವೆ ಇದೀಗ ಟೀಮ್ ಇಂಡಿಯಾದ (Team India) ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗೆ (Virat Kohli) ಕೋಪ ಬಂದಂತಹ ಮತ್ತೊಂದು ಘಟನೆ ನಡೆದಿದೆ. ಯಾರೂ ಇಲ್ಲದ ಸಮಯದಲ್ಲಿ ಹೋಟೇಲ್​ನಲ್ಲಿರುವ ಕೊಹ್ಲಿಯ ರೂಮ್​ಗೆ ಅನಾಮಿಕ ವ್ಯಕ್ತಿ ತೆರಳಿದ್ದು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಭಾನುವಾರ ಪರ್ತ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ಆಯೋಜಿಸಲಾಗಿತ್ತು. ಹೀಗಾಗಿ ಭಾರತದ ಆಟಗಾರರು ಪರ್ತ್​ನಲ್ಲಿ ನೆಲೆಸಿದ್ದ ಹೋಟೆಲ್​ನಿಂದ ಸ್ಟೇಡಿಯಂಗೆ ತೆರಳಿದ್ದರು. ಈ ಸಂದರ್ಭ ವ್ಯಕ್ತಿಯೊಬ್ಬರು ಹೊಟೇಲ್​ನಲ್ಲಿ ಕೊಹ್ಲಿ ನೆಲೆಸಿರುವ ಕೊಠಡಿಯೊಳಗೆ ಪ್ರವೇಶಿಸಿ ವಿಡಿಯೋ ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಕೋಪಗೊಂಡ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ”ಅಭಿಮಾನಿಗಳಿಗೆ ತನ್ನ ಮೆಚ್ಚಿನ ಕ್ರಿಕೆಟಿಗನನ್ನು ನೋಡಬೇಕು, ಬೇಟಿಯಾಗಬೇಕು ಎಂಬ ಆಸೆ ಇರುತ್ತದೆ ನಿಜ. ಆ ಭ...

ಗುಜರಾತ್ ಸೇತುವೆ ದುರಂತ : ನನ್ನ ಮನಸ್ಸು ಅಲ್ಲಿಯೇ ಇದೆ ಎಂದರು ಮೋದಿ

ಕೆವಾಡಿ: ನಿನ್ನೆ ಸಂಜೆ 6.30 ಸಮಯದಲ್ಲಿ ಮುರ್ಬಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆ ಕುಸಿದು ನೂರಾರು ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ನದಿಯಲ್ಲಿ ಸಿಲುಕಿದ 117 ಜನರನ್ನು ರಕ್ಷಣೆ ಮಾಡಲಾಗಿತ್ತು, ಸಾವಿನ ಸಂಖ್ಯೆ 143ಕ್ಕೆ ಏರಿಕೆಯಾಗಿದೆ. ಈ ಸಂಬಂಧ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಮೂರು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು, ಮೊರ್ಬಿ ನದಿಯ ಘಟನೆ ತೀರ್ವ ದುಃಖವನ್ನುಂಟು ಮಾಡಿದೆ. ಈ ಘಟನೆಯ ದೂಷಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಘಟನಾ ಸ್ಥಳದಲ್ಲಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಮಾಡಲಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ ಎಂದಿದ್ದಾರೆ. ನಾನು ಕೆವಾಡಿಯಾದಲ್ಲಿ ಇರಬಹುದು. ಆದರೆ ನನ್ನ ಮನಸ್ಸೆಲ್ಲಾ ಮೊರ್ಬಿಯಾ ಕಡೆಗೆ ಇದೆ. ಇಂತಹ ದುರ್ಘಟನೆ ನನ್ನ ಜೀವನದಲ್ಲಿ ಬಂದಿದೆ. ಅದನ್ನು ನಾನು ನಿಭಾಯಿಸಲೇಬೇಕಿದೆ. ಅಲ್ಲಿನ ರಕ್ಷಣಾ ಕಾರ್ಯಕ್ಕೆ ಗುಜರಾತ್ ಮತ್ತು ಕೇಂದ್ರ ಸರ್ಕಾರದ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ. The post ಗುಜರಾತ್ ಸೇತುವೆ ದುರಂತ : ನನ್ನ ಮನಸ್ಸು ಅಲ್ಲಿಯೇ ಇದೆ ಎಂದರು ಮೋದಿ first appeared on Kannada News | suddione . source https://suddione.com/gujarat-bridge-collapse-pm-modi-condoles-loss-of-lives/

R Ashwin: ಮಂಕಡಿಂಗ್ ಮಾಡುವ ಸುಲಭ ಅವಕಾಶವಿದ್ದರೂ ಕೈಚೆಲ್ಲಿದ ಆರ್. ಅಶ್ವಿನ್: ವೈರಲ್ ವಿಡಿಯೋ ನೋಡಿ

ಪರ್ತ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್​ನ (T20 World Cup) ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಅನುಭವಿಸಿದ ಸೋಲು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಮಾಡಿದ ಕೆಲ ತಪ್ಪುಗಳು ಸೋಲಿಗೆ ಮುಖ್ಯ ಕಾರಣವಾಯಿತು. ಭಾರತದ ಸ್ಟಾರ್ ಫೀಲ್ಡರ್​ಗಳೆಂದು ಖ್ಯಾತಿ ಪಡೆದಿರುವ, ಯಾವುದೇ ಕಷ್ಟಕರವಾದ ಕ್ಯಾಚ್ ಅನ್ನು ಸುಲಭವಾಗಿ ಹಿಡಿಯುವ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ ಅವರೇ ಸುಲಭ ಕ್ಯಾಚ್, ರನೌಟ್ ಅನ್ನು ಮಿಸ್ ಮಾಡಿಕೊಂಡರು. ಇದರ ಜೊತೆಗೆ ರವಿಚಂದ್ರನ್ ಅಶ್ವಿನ್ (R Ashwin) ಕೂಡ ಮಂಕಡಿಂಗ್ ಮಾಡುವ ಅವಕಾಶವನ್ನು ತಪ್ಪಿಸಿಕೊಂಡರು. ಐಸಿಸಿಯ ನೂತನ ನಿಯಮದಲ್ಲಿ ಮಂಕಡಿಂಗ್ ಮಾಡಬಹುದು ಎಂಬ ಆಯ್ಕೆ ನೀಡಿದ್ದರೂ ಅಶ್ವಿನ್ ಇದಕ್ಕೆ ಮನಸ್ಸು ಮಾಡಲಿಲ್ಲ. ದಕ್ಷಿಣ ಆಫ್ರಿಕಾ ಬ್ಯಾಟಿಂಗ್​ ಇನ್ನಿಂಗ್ಸ್​ನ 18ನೇ ಓವರ್​ನಲ್ಲಿ ಈ ಘಟನೆ ನಡೆಯಿತು. ಆರ್. ಅಶ್ವಿನ್ ಅವರು ಕೊನೆಯ ಎಸೆತ ಹಾಕಲು ಮುಂದೆ ಬಂದಾಗ ನಾನ್ ಸ್ಟ್ರೈಕರ್​​ನಲ್ಲಿದ್ದ ಡೇವಿಡ್ ಮಿಲ್ಲರ್ ಚೆಂಡು ಎಸೆಯುವ ಮುನ್ನವೇ ಕ್ರೀಸ್ ಬಿಟ್ಟರು. ಇದನ್ನು ತಕ್ಷಣ ಗಮನಿಸಿದ ಅಶ್ವಿನ್ ಬಾಲ್ ಎಸೆಯದೆ ಸುಮ್ಮನಾದರು. ಈ ಸಂದರ್ಭ ಅಶ್ವಿನ್​ಗೆ ಮಿಲ್ಲರ್ ಅವರನ್ನು ಮಂಕಡಿಂಗ್ ಮಾಡುವ ಅವಕಾಶವಿತ್ತು. ಆದರೆ, ಆರೀತಿ ಮಾಡದೆ ಪುನಃ ಬೌಲಿಂಗ್ ಮಾಡಲು ಹಿಂತಿರುಗಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆ...

Rohit Sharma: ಪಂದ್ಯ ಮುಗಿದ ಬಳಿಕ ತಂಡದ ಸೋಲಿಗೆ ನಾಯಕ ರೋಹಿತ್ ಶರ್ಮಾ ದೂರಿದ್ದು ಯಾರನ್ನು ಗೊತ್ತೇ?

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2022) ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ (India vs South Africa) ಸೋಲು ಕಂಡಿದೆ. ಕಳಪೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್​ಗೆ ಬೆಲೆ ತೆತ್ತ ಟೀಮ್ ಇಂಡಿಯಾ ಚುಟುಕು ವಿಶ್ವಕಪ್​ 2022 ರಲ್ಲಿ ಮೊದಲ ಸೋಲುಂಡಿತು. 5 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಹರಿಣಗಳ ಪಡೆ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತ ತಂಡ 4 ಅಂಕದೊಂದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಸೆಮಿ ಫೈನಲ್​ಗೇರಲು ಮುಂದಿನ ಎರಡು ಪಂದ್ಯ ಟೀಮ್ ಇಂಡಿಯಾಕ್ಕೆ ಬಹುಮುಖ್ಯವಾಗಿದೆ. ಭಾರತದ ಬೌಲರ್​ಗಳು ಆರಂಭದಲ್ಲಿ ಚೆನ್ನಾಗಿಯೇ ಎದುರಾಳಿಯನ್ನು ಕಟ್ಟಿ ಹಾಕಿದರಾದರೂ ಅಂತಿಮ ಹಂತದಲ್ಲಿ ಮಾಡಿದ ಕೆಲ ಎಡವಟ್ಟು ಹಾಗೂ ಫೀಲ್ಡಿಂಗ್​ನಲ್ಲಿ ನೀಡಿದ ಕೆಟ್ಟ ಪ್ರದರ್ಶನ ತಂಡದ ಸೋಲಿಗೆ ಕಾರಣವಾಯಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ (Rohit Sharma) ಏನು ಹೇಳಿದ್ದಾರೆ ಕೇಳಿ. ”ಪರ್ತ್ ಪಿಚ್​ನಲ್ಲಿ ಏನೋ ಇದೆ ಎಂಬುದನ್ನು ನಾವು ಭಾವಿಸಿದ್ದೆವು. ಇಲ್ಲಿ ವೇಗಿಗಳು ಹೆಚ್ಚು ಯಶಸ್ಸು ಸಾಧಿಸುತ್ತಾರೆ, ಹೀಗಾಗಿ ಟಾರ್ಗೆಟ್ ಬೆನ್ನಟ್ಟುವುದು ಈ ಪಿಚ್​ನಲ್ಲಿ ಸುಲಭವಲ್ಲ. ನಾವು ಬ್ಯಾಟಿಂಗ್​ನಲ್ಲಿ ಒಂದಿಷ್ಟು ರನ್​ಗಳನ್ನು ಕಡಿಮೆ ಹೊಡೆದೆವು. ಫೈಟ್ ನೀಡಿದೆವು ಆದರೂ ದಕ್ಷಿಣ ಆಫ್ರಿಕಾ ಉತ್ತಮ ಬ್ಯಾಟಿಂಗ್ ನಡೆಸಿತು. 10 ಓವರ್ ಆದಾಗ 3 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿದ್...

ಗುಜರಾತಿನಲ್ಲಿ ಭೀಕರ ದುರಂತ : ಸೇತುವೆ ಕುಸಿದು ಬಿದ್ದು 90 ಕ್ಕೂ ಹೆಚ್ಚು ಮಂದಿ ಸಾವು

  ಸುದ್ದಿಒನ್ ವೆಬ್ ಡೆಸ್ಕ್ ಅಹಮದಾಬಾದ್‌ : ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಚ್ಚು ಅಣೆಕಟ್ಟಿನ ಮೇಲೆ ನಿರ್ಮಿಸಲಾದ ತೂಗು ಸೇತುವೆ ಭಾನುವಾರ ಸಂಜೆ ಕುಸಿದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.ಛಾತ್ ಪೂಜೆ ಮಾಡಲು ಸುಮಾರು 500 ಕ್ಕೂ ಹೆಚ್ಚು ಜನರು ಸೇತುವೆ ಮೇಲೆ ನೆರೆದಿದ್ದರು ಎಂದು ವರದಿಯಾಗಿದೆ. ಬ್ರಿಟಿಷರ ಕಾಲದ ಈ ಸೇತುವೆ ನವೀಕರಣಗೊಂಡು ಕೇವಲ ಒಂದು ವಾರವಷ್ಟೇ ಆಗಿತ್ತು.  ನದಿಗೆ ಬಿದ್ದ 100 ಕ್ಕೂ ಹೆಚ್ಚು ಮಂದಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.   ವರದಿಗಳ ಪ್ರಕಾರ, ಮಚ್ಚು ನದಿಯ ನೀರಿನಲ್ಲಿ ಸುಮಾರು 100 ಕ್ಕೂ ಹೆಚ್ಚು ನೀರಿನಲ್ಲಿಯೇ ಇದ್ದು, ಅವರೆಲ್ಲರೂ ಕತ್ತಲೆಯಲ್ಲಿ ದಡವನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯರ ಪ್ರಕಾರ ಸತ್ತವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ತಿಳಿದು ಬಂದಿದೆ. ರಕ್ಷಣಾ ತಂಡದವರು ಎಪ್ಪತ್ತು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯವು ತಡರಾತ್ರಿಯಾದರೂ  ನಡೆಯುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಎನ್‌ಡಿಆರ್‌ಎಫ್‌ನ ಐದು ತಂಡಗಳು ಸ್ಥಳಕ್ಕೆ ತಲುಪಿವೆ. ಸೇನೆ, ನೌಕಾಪಡೆ ಮತ್ತು ವಾಯುಸೇನೆ ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಸ್ಥಳದಲ್ಲಿ ವೈದ್ಯಕೀಯ ತ...

India vs South Africa Live Score: ಟೀಮ್ ಇಂಡಿಯಾದ 2ನೇ ವಿಕೆಟ್ ಪತನ

India vs South Africa Live Score: ಪರ್ತ್​ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ನ 30ನೇ ಪಂದ್ಯದಲ್ಲಿ ಭಾರತ-ಸೌತ್ ಆಫ್ರಿಕಾ (India vs South Africa) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಉಭಯ ತಂಡಗಳು ಇದುವರೆಗೆ 23 ಬಾರಿ ಟಿ20 ಕ್ರಿಕೆಟ್​ನಲ್ಲಿ ಮುಖಾಮುಖಿಯಾಗಿದ್ದು, ಈ ವೇಳೆ ಟೀಮ್ ಇಂಡಿಯಾ 13 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು 1 ಪಂದ್ಯವು ರದ್ದಾಗಿತ್ತು. ಹಾಗೆಯೇ ಸೌತ್ ಆಫ್ರಿಕಾ ತಂಡ ಗೆದ್ದಿರುವುದು ಕೇವಲ 9 ಬಾರಿ ಮಾತ್ರ. ಇದೀಗ ಟಿ20 ಕ್ರಿಕೆಟ್​ನಲ್ಲಿ 24ನೇ ಬಾರಿ ಮುಖಾಮುಖಿಯಾಗುತ್ತಿರುವ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಭಾರತ ತಂಡ: ರೋಹಿತ್ ಶರ್ಮಾ (ನಾಯಕ) , ದಿನೇಶ್ ಕಾರ್ತಿಕ್, ಕೆಎಲ್ ರಾಹುಲ್ , ವಿರಾಟ್ ಕೊಹ್ಲಿ , ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ , ಅಕ್ಷರ್ ಪಟೇಲ್ , ರವಿಚಂದ್ರನ್ ಅಶ್ವಿನ್ , ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ , ಅರ್ಷದೀಪ್ ಸಿಂಗ್ , ರಿಷಭ್ ಪಂತ್ , ದೀಪಕ್ ಹೂಡಾ, ಹರ್ಷಲ್ ಪಟೇಲ್. ಯುಜ್ವೇಂದ್ರ ಚಹಾಲ್. ಸೌತ್ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ತೆಂಬಾ ಬವುಮಾ (ನಾಯಕ) , ರಿಲೀ ರೊಸ್ಸೊ , ಐಡೆನ್ ಮಾರ್ಕ್ರಾಮ್ , ಟ್ರಿಸ್ಟಾನ್ ಸ್ಟಬ್ಸ್ , ಡೇವಿಡ್ ಮಿಲ್ಲರ್ , ವೇಯ್ನ್ ಪಾರ್ನೆಲ್ , ಕೇಶವ್ ಮಹಾರಾಜ್ , ಕಗಿಸೊ ರಬಾಡ , ಅನ್ರಿಕ್ ನೋಕಿಯ...

Shoaib Akhtar: ದರಿದ್ರ…ಒಬ್ಬನಿಗೂ ಮೆದುಳಿಲ್ಲ..ಪಾಕ್ ತಂಡದ ವಿರುದ್ಧ ಅಖ್ತರ್ ವಾಗ್ದಾಳಿ

T20 World Cup 2022:   ಟಿ20 ವಿಶ್ವಕಪ್​ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಪಾಕಿಸ್ತಾನ್ (Pakistan) ತಂಡದ ವಿರುದ್ಧ ವಾಗ್ದಾಳಿ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ವಿರುದ್ಧ ರಣರೋಚಕವಾಗಿ ಪಂದ್ಯವಾಡಿದ್ದ ಪಾಕಿಸ್ತಾನ್, 2ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋಲನುಭವಿಸಿದೆ. ಇದರೊಂದಿಗೆ ಪಾಕ್ ತಂಡದ ಸೆಮಿಫೈನಲ್ ಕನಸು ಬಹುತೇಕ ಕಮರಿದೆ. ಇತ್ತ ಪಾಕ್ ತಂಡ ಸೋಲುತ್ತಿದ್ದಂತೆ ಅತ್ತ ಶೊಯೇಬ್ ಅಖ್ತರ್ ಟೀಮ್ ಆಯ್ಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಮೊದಲೇ ಹೇಳಿದ್ದೇನೆ. ಪಾಕಿಸ್ತಾನ್ ತಂಡವು ಸೆಮಿಫೈನಲ್ ಪ್ರವೇಶಿಸುವುದಿಲ್ಲ ಎಂದು. ಏಕೆಂದರೆ ಅದು ಅತ್ಯಂತ ಕಳಪೆ ತಂಡ. ನಮ್ಮ ಮಧ್ಯಮ ಕ್ರಮಾಂಕವು ಬಲಿಷ್ಠವಾಗಿಲ್ಲ ಎಂಬುದನ್ನು ಈ ಹಿಂದೆ ಹೇಳಿದ್ದೇನೆ. ಇದೀಗ ಅದರ ಫಲಿತಾಂಶವನ್ನು ನೋಡುತ್ತಿದ್ದೇವೆ ಎಂದು ಅಖ್ತರ್ ಹೇಳಿದ್ದಾರೆ. ಒಂದು ತಂಡವು ಕೇವಲ ಆರಂಭಿಕರು ಮತ್ತು ಮಧ್ಯಮ ಕ್ರಮಾಂಕದ ಆಟಗಾರರಿಂದ ಗೆಲ್ಲುವುದು ಅಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪಾಕ್ ತಂಡದ ನಾಯಕ ಬಾಬರ್ ಆಜಂ 3ನೇ ಕ್ರಮಾಂಕದಲ್ಲಿ ಆಡಬೇಕು. ಆದರೆ ಈ ಮಾತನ್ನು ಆತ ಕೇಳುವುದೇ ಇಲ್ಲ ಎಂದು ಅಖ್ತರ್ ಬಾಬರ್ ವಿರುದ್ಧ ಕೂಡ ವಾಗ್ದಾಳಿ ನಡೆಸಿದ್ದಾರೆ. ಇನ್ನು ಜಿಂಬಾಬ್ವೆ ವಿರುದ್ಧದ ಸೋಲಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಅಖ್ತರ್, ಒಂದು ಸಾಧಾರಣ ತಂಡದ ವಿರುದ್ಧ ನಾವು ಸೋತಿದ್ದೇವೆ ಎಂದರೆ ಪಾಕ್ ತಂಡ ಹ...

ಕಾಡುಗೊಲ್ಲರಿಗೂ ಮೀಸಲಾತಿ ನೀಡಿ :  ನಟ ಚೇತನ್ ಆಗ್ರಹ

  ಚಿತ್ರದುರ್ಗ, (ಅ.30) : ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಗಳಿಗೆ  ಮೀಸಲಾತಿ ಹೆಚ್ಚಳ ಮಾಡಿರುವುದು ಒಳ್ಳೆಯ ಬೆಳವಣಿಗೆ ಮತ್ತು ಸ್ವಾಗತಾರ್ಹ. ಅದರಂತೆಯೇ ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಕಾಡುಗೊಲ್ಲ ಸಮುದಾಯಕ್ಕೂ ಎಸ್ಟಿ ಮೀಸಲಾತಿ ನೀಡುವಂತೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಆಗ್ರಹಿಸಿದ್ದಾರೆ. ಹಿರಿಯೂರಿನಲ್ಲಿ ಮಾತನಾಡಿದ ಅವರು ಮೀಸಲಾತಿ ಎಂಬುದು ಸಾಮಾಜಿಕ ನ್ಯಾಯ. ಕಾಡುಗೊಲ್ಲ ಬುಡಕಟ್ಟು ಸಮುದಾಯದಲ್ಲಿ ಜುಂಜಪ್ಪ, ಯತ್ತಪ್ಪ, ಜಂಪಣ್ಣ, ಕಾಟಪ್ಪ, ಕರಡಿಬುಳ್ಳಪ್ಪ ಇಂತಹ ಮಹಾನ್ ಪುರುಷರ ಪರಂಪರೆಯಿದೆ. 2018 ರಲ್ಲಿ ಜಾತಿ ಪಟ್ಟಿ ಕಾಡುಗೊಲ್ಲರನ್ನು ಜಾತಿ ಪಟ್ಟಿಗೆ ಸೇರಿಸಲಾಯಿತು. ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ನನ್ನ ಬೇಡಿಕೆ ಇದೆ. ನಾನು ಸಹ ಈ ಬೇಡಿಕೆಯನ್ನು ರಾಜ್ಯದ ಸಮಾಜ ಕಲ್ಯಾಣ ಸಚಿವರಿಗೆ ಹಾಗೂ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಮನವಿ ಮಾಡುತ್ತೇನೆ ಎಂದರು. ಮೈಸೂರು ಜಯಚಾಮರಾಜೇಂದ್ರ ಒಡೆಯರ್, ಅಂಬೇಡ್ಕರ್, ಪೆರಿಯರ್ ಸೇರಿದಂತೆ ಮತ್ತಿತರರು ಮೀಸಲಾತಿ ತಿದ್ದುಪಡಿ ತರಲು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದರು. ಈ ನಿಟ್ಟಿನಲ್ಲಿ ಮೀಸಲಾತಿ ಉಳಿಸುವುದು ಬಹಳ ಮುಖ್ಯ ಎಂದು ಹೇಳಿದರು. ಈ‌ ಸಂದರ್ಭದಲ್ಲಿ ಕರವೇ ಕೃಷ್ಣ ಪೂಜಾರ್, ಸಮಾಜ ಸೇವಕ ಪಾರ್ಥ ಮೀಸೆ, ಬಸವರಾಜ್, ಸತೀಶ್, ಜಬೀ, ಪೈರಾಜ್, ಭಾಷಾ, ಅಫ್ಜಲ್  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. The pos...

Virat Kohli: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯರು ರೆಡಿಯಾದ ವಿರಾಟ್ ಕೊಹ್ಲಿ: ಇದುವರೆಗೆ ಯಾರೂ ಮಾಡಿರದ ಸಾಧನೆ

ಕಾಂಗರೂಗಳ ನಾಡಿನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ 2022 ಟೂರ್ನಿ (ICC T20 World Cup) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಪ್ರತಿ ಪಂದ್ಯದಲ್ಲಿ ನೂತನ ದಾಖಲೆಗಳು ನಿರ್ಮಾಣವಾಗುತ್ತಿದೆ. ಇಂದುಕೂಡ ಚುಟುಕು ವಿಶ್ವಕಪ್​ನಲ್ಲಿ ಮೂರು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಮುಖ್ಯವಾಗಿ ಸಂಜೆ 4:30ಕ್ಕೆ ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿ ಕಾ (India vs South Africa) ತಂಡಗಳು ಮುಖಾಮುಖಿ ಆಗಲಿದೆ. ಈ ಟೂರ್ನಿಯಲ್ಲಿ ಒಂದೂ ಸೋಲು ಕಾಣದೆ ಮುನ್ನುಗ್ಗುತ್ತಿರುವ ಉಭಯ ತಂಡಗಳ ನಡುವಣ ಕಾದಾಟ ಸಾಕಷ್ಟು ಕುತೂಹಲ ಕೆರಳಿಸಿದೆ. ಭರ್ಜರಿ ಫಾರ್ಮ್​ನಲ್ಲಿರುವ ಭಾರತೀಯ ಬ್ಯಾಟರ್​ಗಳು ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ನೋಡಬೇಕಿದೆ. ಇದರ ನಡುವೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಆಡಿದ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಅಮೋಘ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ ಇದೀಗ ಒಂದೇ ಪಂದ್ಯದಲ್ಲಿ ಎರಡು ದಾಖಲೆ ಸೃಷ್ಟಿಸಲು ತಯಾರಾಗಿದ್ದಾರೆ. ಕೊಹ್ಲಿ ಈವರೆಗೆ ಆಡಿರುವ 23 ಟಿ20 ವಿಶ್ವಕಪ್ ಪಂದ್ಯದಲ್ಲಿ ಒಟ್ಟು 989 ರನ್ ಕಲೆಹಾಕಿದ್ದಾರೆ. ಇಂದಿನ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೇವಲ 11 ರನ್ ಗಳಿಸಿದರೆ ಭಾರತ ಪರ ಟಿ20 ವಿಶ್ವಕಪ್​ನಲ್ಲಿ 1000 ರನ್ ಗಳಿಸಿದ ಮೊಟ್ಟ ಮೊದಲ ಕ್ರಿಕೆಟಿಗ ಆಗಲಿದ್ದಾರೆ. ಇದರ ಜೊತೆಗೆ 28 ರನ್ ಬಾರಿ...

ವಿಜ್ಞಾನ ವಸ್ತುಪ್ರದರ್ಶನ : ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

  ಚಳ್ಳಕೆರೆ,(ಅ.30) : ತಾಲ್ಲೂಕಿನ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯು ವಿಜ್ಞಾನ ವಸ್ತುಪ್ರದರ್ಶದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಚಳ್ಳಕೆರೆಯ ಚಿನ್ಮಯಿ ಪ್ರೌಢಶಾಲೆಯ ಆವರಣದಲ್ಲಿ  ದಿನಾಂಕ : 29-10-2022 ರಂದು ತಾಲ್ಲೂಕು ಮಟ್ಟದ ವಿಜ್ಞಾನ ವಸ್ತುಪ್ರದರ್ಶನವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿತ್ತು. ಗಣಿತ,ಭೌತವಿಜ್ಞಾನ, ರಸಾಯನವಿಜ್ಞಾನ, ಭೂಮಿ ಮತ್ತು ಬಾಹ್ಯಾಕಾಶ, ಬಯೋಸೈನ್ಸ್ , ಬಯೋ ಕೆಮಿಸ್ಟ್ರಿ, ಪರಿಸರ ವಿಜ್ಞಾನ , ಎಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು 95 ವಿವಿಧ ಮಾದರಿಗಳು ಪ್ರದರ್ಶನಗೊಂಡವು. ಸರ್ಕಾರಿ ಪ್ರೌಢಶಾಲೆ ರೇಖಲಗೆರೆ ಲಂಬಾಣಿ ಹಟ್ಟಿ ಶಾಲೆಯ ವಿದ್ಯಾರ್ಥಿನಿಯರುಗಳಾದ ಭಾರತಿ ಮತ್ತು ಅನುರಾಧ ಇವರು ತಯಾರಿಸಿದ ತೇಲುವ ಮನೆ ಮತ್ತು ತೇಲುವ ಕೊಟ್ಟಿಗೆ ವೈಜ್ಞಾನಿಕ ಮಾದರಿಯು ವಿನೂತನ ಮಾದರಿಯಾಗಿತ್ತು. ಕಡಲ ತೀರ ಪ್ರದೇಶದಲ್ಲಿ, ನದಿ ತೀರ ಪ್ರದೇಶದಲ್ಲಿ ವಾಸಿಸುವ ಜನರು ಈ ರೀತಿಯ ತೇಲುವ ಮನೆ ಮತ್ತು ತೇಲುವ ಕೊಟ್ಟಿಗೆಗಳನ್ನು ನಿರ್ಮಿಸಿಕೊಂಡರೆ ಎಷ್ಟೇ ಪ್ರವಾಹ  ಬಂದರು ಈ ಮನೆಗಳು ನೀರಿನಲ್ಲಿ ಮುಳುಗಿ ಅಲ್ಲಿನ ಜನರ ಪ್ರಾಣ – ಹಾನಿ, ಜಾನುವಾರುಗಳ ಹಾನಿಯನ್ನು ಉಂಟಾಗದಂತೆ ತಡೆಯುತ್ತದೆ.ಅತ್ಯಂತ ವಿನೂತನವಾದ  ತಂತ್ರವನ್ನು ಈ ಮಾದರಿಯಲ್ಲಿ ಅಳವಡಿಸಲಾಗಿದೆ. ನೀರಿನಲ್ಲಿ ಕಟ್ಟುವ ಸೇತುವೆಗಳ ತಂತ್ರವನ್ನು ಹಾಗೂ ನೀರಿನಲ್ಲಿ ತೇಲುವ...

T20 World Cup 2022: ಸೆಮಿಫೈನಲ್​ಗೇರಲು ಜಿಂಬಾಬ್ವೆಗೆ ಇದೆ ಉತ್ತಮ ಅವಕಾಶ

T20 World Cup 2022 :  ಟಿ20 ವಿಶ್ವಕಪ್​ನ ಸೂಪರ್​-12 ಪಂದ್ಯಗಳ ಲೆಕ್ಕಾಚಾರಗಳು ತಲೆಕೆಳಗಾಗುತ್ತಿದೆ. ಒಂದೆಡೆ ಕೆಲ ತಂಡಗಳು ಬಲಿಷ್ಠ ಪಡೆಗಳಿಗೆ ಸೋಲುಣಿಸುತ್ತಿದ್ದರೆ, ಮತ್ತೊಂದೆಡೆ ಮಳೆಯ ಕಾರಣ ಕೆಲ ಪಂದ್ಯಗಳು ರದ್ದಾಗಿವೆ. ಹೀಗಾಗಿ ಬಹುತೇಕ ತಂಡಗಳ ನಡುವೆ ಇದೀಗ ಸೆಮಿಫೈನಲ್​ಗೇರುವ ಫೈಟ್ ಏರ್ಪಟ್ಟಿದೆ. ಈ ಪಟ್ಟಿಯಲ್ಲಿ ಜಿಂಬಾಬ್ವೆ (Zimbabwe) ತಂಡ ಕೂಡ ಇರುವುದು ವಿಶೇಷ. ಗ್ರೂಪ್​- 2 ನಲ್ಲಿರುವ ಜಿಂಬಾಬ್ವೆ ತಂಡವು ಇದುವೆರೆಗೆ ಸೋಲನುಭವಿಸಿಲ್ಲ. ಸೌತ್ ಆಫ್ರಿಕಾ ವಿರುದ್ಧ ಆಡಿದ ಮೊದಲ ಪಂದ್ಯವು ಮಳೆಯ ಕಾರಣ ರದ್ದಾಗಿತ್ತು. ಹೀಗಾಗಿ ಜಿಂಬಾಬ್ವೆಗೆ ಒಂದು ಪಾಯಿಂಟ್​ ಲಭಿಸಿತ್ತು. ಇದಾದ ಬಳಿಕ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿಯುವ ಮೂಲಕ 2 ಅಂಕಗಳನ್ನು ಕಲೆಹಾಕಿದೆ. ಅದರಂತೆ ಇದೀಗ 2 ಪಂದ್ಯಗಳಿಂದ 3 ಅಂಕ ಪಡೆದು ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನದಲ್ಲಿದೆ. ಇತ್ತ ಎಲ್ಲರೂ ಪಾಕಿಸ್ತಾನ್ ಹಾಗೂ ಸೌತ್ ಆಫ್ರಿಕಾ ಸೆಮಿಫೈನಲ್​ ಹಾದಿಯ ಚರ್ಚೆಯಲ್ಲಿದ್ದರೆ ಅತ್ತ ಜಿಂಬಾಬ್ವೆ ಕೂಡ ಮುಂದಿನ ಹಂತಕ್ಕೇರುವ ವಿಶ್ವಾಸದಲ್ಲಿದೆ. ಏಕೆಂದರೆ ಜಿಂಬಾಬ್ವೆಗೆ ಇನ್ನುಳಿದಿರುವುದು 3 ಪಂದ್ಯಗಳು. ಅದು ಕೂಡ ಬಾಂಗ್ಲಾದೇಶ್, ನೆದರ್​ಲ್ಯಾಂಡ್ಸ್​ ಹಾಗೂ ಭಾರತ ವಿರುದ್ಧ. ಇಲ್ಲಿ ಟೀಮ್ ಇಂಡಿಯಾವನ್ನು ಹೊರತುಪಡಿಸಿದರೆ ಉಳಿದ ತಂಡಗಳು ಜಿಂಬಾಬ್ವೆಗೆ ಸರಿಸಮಾನವಾದ ತಂಡಗಳು ಎನ್ನಬಹುದು. ಹೀಗಾಗಿಯೇ ಸೆಮಿ ಫೈನಲ್​ಗೇರುವ ವಿಶ್ವಾಸದಲ್ಲಿದೆ. ಜಿಂಬಾಬ್ವೆ ...

‘ಕ್ಲಾಸ್ ಪ್ಲೇಯರ್’..! ಕೊಹ್ಲಿಯನ್ನು ಹೊಗಳಿದ ಬಿಸಿಸಿಐ ನೂತನ ಅಧ್ಯಕ್ಷ ಕನ್ನಡಿಗ ರೋಜರ್ ಬಿನ್ನಿ

ಕಳೆದ 3 ವರ್ಷಗಳಿಂದ ಕಳಪೆ ಫಾರ್ಮ್​ ಎದುರಿಸುತ್ತಾ ಸಿಕ್ಕಸಿಕ್ಕವರ ಬಾಯಿಗೆ ಸಿಕ್ಕಿಹಾಕಿಕೊಂಡಿದ್ದ ಕಿಂಗ್ ಕೊಹ್ಲಿ (Virat Kohli) ಮತ್ತೆ ತಮ್ಮ ಹಳೆಯ ಫಾರ್ಮ್​ಗೆ ಮರಳಿದ್ದಾರೆ. ಕಳೆದ ಏಷ್ಯಾಕಪ್​ನಲ್ಲಿ ಅಬ್ಬರದ ಶತಕ ಸಿಡಿಸುವುದರೊಂದಿಗೆ ಟೀಕಿಸುವವರ ಬಾಯಿ ಮುಚ್ಚಿಸಿದ್ದ ವಿರಾಟ್, ತನ್ನ ಪಾರ್ಮ್​ ಅನ್ನು ಟಿ20 ವಿಶ್ವಕಪ್​ನಲ್ಲೂ (T20 World Cup 2022) ಮುಂದುವರೆಸಿದ್ದಾರೆ. ಇದರ ಅಂಗವಾಗಿ ಪಾಕ್ ವಿರುದ್ಧ ಅಜೇಯ 82 ರನ್‌ಗಳನ್ನು ಬಾರಿಸಿದ್ದ ವಿರಾಟ್ ವೃತ್ತಿ ಜೀವನದ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಹಾಗೆಯೇ ಬಾಬರ್ ತಂಡದ ಪರ ವಾಲಿದ್ದ ಗೆಲುವನ್ನು ಕಸಿದುಕೊಂಡ ರೀತಿ ಕಂಡು ಇಡೀ ಕ್ರಿಕೆಟ್ ಜಗತ್ತೇ ಕೊಹ್ಲಿಯನ್ನು ಕೊಂಡಾಡಿತ್ತು. ಈಗ ಕೊಹ್ಲಿಯ ಬೊಂಬಾಟ್ ಇನ್ನಿಂಗ್ಸ್​ಗೆ ಶಹಬ್ಬಾಸ್ ಎಂದಿರುವ ಬಿಸಿಸಿಐನ ನೂತನ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಕೊಹ್ಲಿಯನ್ನು ಹೊಗಳಿ ಮಾತನಾಡಿದ್ದಾರೆ. ಎಎನ್‌ಐ ಜೊತೆ ಮಾತನಾಡಿದ ಬಿನ್ನಿ, ಪಾಕ್ ವಿರುದ್ಧದ ಪಂದ್ಯ ನನಗೆ ಇನ್ನು ಕನಸಿನಂತೆ ಭಾಸವಾಗುತ್ತಿದೆ. ಸ್ಟೇಡಿಯಂನಲ್ಲಿ ಕೊಹ್ಲಿ ಹೇಗೆ ಅಬ್ಬರಿಸಿದರು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಅದೊಂದು ದೊಡ್ಡ ಗೆಲುವು ಎಂದಿದ್ದಾರೆ. ಅಂತಹ ಪಂದ್ಯಗಳು ಮತ್ತೆ ನೋಡಲು ಸಿಗುವುದು ಕಷ್ಟ ಅಲ್ಲದೆ ಭಾರತ- ಪಾಕ್ ನಡುವಿನ ಪಂದ್ಯದ ಬಗ್ಗೆ ಮಾತನಾಡಿರುವ ಬಿನ್ನಿ, ಅಂತಹ ಪಂದ್ಯಗಳನ್ನು ನೀವು ಮತ್ತೆ ನೋಡುವುದು ಕಷ್ಟ. ಆ ಪಂದ್ಯ ಭಾಗಶಃ ಪಾಕಿಸ್ತಾನದ ಪ...

‘ಪಾಕ್ ಮಣಿಸಿದ ತಂಡವನ್ನು ಹಗುರವಾಗಿ ಪರಿಗಣಿಸಬೇಡಿ’; ರೋಹಿತ್ ಪಡೆಗೆ ಸಲಹೆ ನೀಡಿದ ಗವಾಸ್ಕರ್

ಟಿ20 ವಿಶ್ವಕಪ್​​ನಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ (T20 World Cup 2022) ಪಾಯಿಂಟ್​ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್ ಅನ್ನು ಟೀಂ ಇಂಡಿಯಾ (Team India) ಗೆಲ್ಲಬಹುದು ಎಂಬ ವಿಶ್ವಾಸದಲ್ಲಿ ಅಭಿಮಾನಿಗಳು ಬೀಗುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದರೆ, ನೆದರ್ಲೆಂಡ್ಸ್ ವಿರುದ್ಧದ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ 56 ರನ್​ಗಳ ಅಂತರದಿಂದ ಗೆಲುವು ಸಾಧಿಸಿತು. ಸದ್ಯ ಟೀಂ ಇಂಡಿಯಾದ ಪರ ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿರುವುದು ತಂಡ ನಿರಾಳವಾಗಿರುವುದಕ್ಕೆ ಕಾರಣವಾಗಿದೆ. ಆದರೆ ಈ ಸಂತಸದಲ್ಲಿ ಟೀಂ ಇಂಡಿಯಾ ಮೈಮರೆಯುವುದು ಬೇಡ ಎಂದು ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ (Sunil Gavaskar ) ರೋಹಿತ್ ಪಡೆಗೆ ಸಲಹೆ ನೀಡಿದ್ದಾರೆ. ಸೂಪರ್ 12 ಸುತ್ತಿನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಜಿಂಬಾಬ್ವೆ ಒಂದು ರನ್‌ನಿಂದ ಸೋಲಿಸಿದಾಗಿನಿಂದ, ಪಾಕಿಸ್ತಾನದ ಆಟಗಾರರು ಭಾರೀ ಟೀಕೆಗೆ ಒಳಗಾಗಿದ್ದಾರೆ. ಹಾಗೆಯೇ ಅಭಿಮಾನಿಗಳು ಜಿಂಬಾಬ್ವೆಯ ಆಟಗಾರರನ್ನು ಶ್ಲಾಘಿಸುತ್ತಿದ್ದಾರೆ. ಸದ್ಯ ಟೀಂ ಇಂಡಿಯಾ ಆಟಗಾರರು ಉತ್ತಮ ಫಾರ್ಮ್‌ನಲ್ಲಿರುವ ಕಾರಣ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ತಂಡಕ್ಕೆ ಸಲಹೆ...

T20 World Cup 2022: ಹಾಲಿ ಚಾಂಪಿಯನ್​ಗಳಿಗೆ ಎದುರಾಯ್ತು ಟೂರ್ನಿಯಿಂದ ಹೊರಬೀಳುವ ಭೀತಿ..!

source https://tv9kannada.com/photo-gallery/cricket-photos/due-to-rain-australias-road-to-semi-finals-seems-difficult-in-t20-world-cup-2022-psr-au14-462306.html

‘ನಿವೃತ್ತಿಯ ಬಳಿಕ ಭಾರತ- ಪಾಕ್ ಪಂದ್ಯವನ್ನು ಲೈವ್ ನೋಡುವುದೇ ನನ್ನ ಜೀವನದ ಹೆಬ್ಬಯಕೆ’; ಆಸೀಸ್ ನಾಯಕ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ( T20 World Cup 2022) ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಈ ಟೂರ್ನಿಯಲ್ಲಿ ಈಗಾಗಲೇ ಕೆಲವು ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿದ್ದು, ಬಲಿಷ್ಠ ತಂಡಗಳನ್ನೇ ಮಣ್ಣು ಮುಕ್ಕಿಸುವುದರಲ್ಲಿ ದುರ್ಬಲ ತಂಡಗಳು ಯಶಸ್ವಿಯಾಗಿವೆ. ಇದೆಲ್ಲದರ ನಡುವೆ ಆತಿಥೇಯ ಆಸೀಸ್ ತಂಡದ ನಾಯಕ ಆರನ್ ಫಿಂಚ್ (Aaron Finch) ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದು, ಇದರೊಂದಿಗೆ ನಿವೃತ್ತಿ ಬಳಿಕ ಕಡ್ಡಾಯವಾಗಿ ಮಾಡಲೇಬೇಕಾದ ಒಂದು ಕೆಲಸವನ್ನು ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ನಿವೃತ್ತಿ ಬಳಿಕ ಫಿಂಚ್ ನೆರವೇರಿಸಿಕೊಳ್ಳಬೇಕಾದ ಮಹಾದಾಸೆ ಯಾವುದೆಂದರೆ, ನಿವೃತ್ತಿಯ ನಂತರ ಫಿಂಚ್, ಭಾರತ ಮತ್ತು ಪಾಕಿಸ್ತಾನ (India and Pakistan) ನಡುವಿನ ಪಂದ್ಯವನ್ನು ಲೈವ್ ಆಗಿ ವೀಕ್ಷಿಸುವುದನ್ನು ಎದುರು ನೋಡುತ್ತಿದ್ದಾರೆ. ಕ್ರಿಕೆಟ್‌ನ ಅತ್ಯಂತ ಹೈ-ವೋಲ್ಟೇಜ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸಲು ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ನಾನು ಎಂದಿಗೂ ಕಳೆದುಕೊಳ್ಳುವುದಿಲ್ಲಿ ಎಂದು ಆಸ್ಟ್ರೇಲಿಯದ ಟಿ20 ನಾಯಕ ಫಿಂಚ್ ಹೇಳಿಕೊಂಡಿದ್ದಾರೆ. ಕಳೆದ ವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯವನ್ನು ಟಿವಿಯಲ್ಲಿ ನೋಡಿದ್ದೇನೆ. ಆದರೆ ಈ ಪಂದ್ಯವನ್ನು ಸ್ಟ್ಯಾಂಡ್‌ನಲ್ಲಿ ಕುಳಿತು ವೀಕ್ಷಿಸಲು ಕಾಯುತ್ತಿದ್ದೇನೆ. ಅಲ್ಲದೆ ನಿವೃತ್ತಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ...

India vs South Africa: ಹಿಂದಿನ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಆಫ್ರಿಕಾ ವಿರುದ್ಧ ಭಾರತ ಹೇಗೆ ಆಡಿತ್ತು?: ಇಲ್ಲಿದೆ ಫುಲ್ ಡಿಟೇಲ್ಸ್

ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup) ಭಾರತ ಮುಂದಿನ ಸವಾಲಿಗೆ ಸಜ್ಜಾಗುತ್ತಿದೆ. ಅಕ್ಟೋಬರ್ 30 ರಂದು ಟೀಮ್ ಇಂಡಿಯಾ (Team India) ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ. ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30ಕ್ಕೆ ಪ್ರಾರಂಭವಾಗಲಿದೆ. ಗ್ರೂಪ್ 2 ರಲ್ಲಿರುವ ಭಾರತ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಜಯಿಸಿ +1.425 ರನ್​ರೇಟ್​ ಹೊಂದಿ 4 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ. ಇತ್ತ ಆಫ್ರಿಕಾ 3 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಭಾನುವಾರದ ಪಂದ್ಯದಲ್ಲಿ ಗೆದ್ದ ತಂಡ ಸೆಮಿ ಫೈನಲ್ ಹಂತಕ್ಕೇರಲು ಮತ್ತಷ್ಟು ಸನಿಹವಾಗಲಿದೆ. ಹೀಗಾಗಿ ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದ್ದು ಹೂವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ. ಈ ಹಿಂದಿನ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಭಾರತ-ಆಫ್ರಿಕಾ (India vs South Africa) ಐದು ಬಾರಿ ಮುಖಾಮುಖಿ ಆಗಿತ್ತು. ಈ ಸಂದರ್ಭ ಏನಾಗಿತ್ತು ಎಂಬುದನ್ನು ನೋಡೋಣ. 2007 ಟಿ20 ವಿಶ್ವಕಪ್: ಚೊಚ್ಚಲ ಟಿ20 ವಿಶ್ವಕಪ್​ನಲ್ಲಿ ಭಾರತ- ಆಫ್ರಿಕಾ ನಡುವಣ ಮುಖಾಮುಖಿ ರಣರೋಚಕವಾಗಿತ್ತು. ಯಾಕೆಂದರೆ ಸೆಮಿ ಫೈನಲ್​ಗೆ ತಲುಪಬೇಕಾದರೆ ಧೋನಿ ನೇತೃತ್ವದ ಟೀಮ್ ಇಂಡಿಯಾ ಗೆಲ್ಲಲೇ ಬೇಕಾಗಿತ್ತು. ಈ ಪಂದ್ಯದಲ್ಲಿ ಭಾರತ ರೋಹಿತ್ ಶರ್ಮಾ ಅವರ 40 ಎಸೆತದಲ್ಲಿ 50 ರನ್ ಮತ್ತು ಆರ್​ಪಿ ಸಿಂಗ್ 13 ರನ್​ಗೆ 4 ವಿಕೆಟ್ ಕಿತ್ತು 37 ರನ್​ಗಳ ಜಯ ಸಾಧಿಸುವಂತೆ ಮ...

India vs South Africa: ಇಂದು ಮಧ್ಯಾಹ್ನ ರೋಹಿತ್ ಶರ್ಮಾ ಸುದ್ದಿಗೋಷ್ಠಿ: ಮಹತ್ವದ ಹೇಳಿಕೆ ಸಾಧ್ಯತೆ

ಐಸಿಸಿ ಟಿ20 ವಿಶ್ವಕಪ್ (T20 World Cup) ಮಹಾಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದು ಬೀಗಿರುವ ರೋಹಿತ್ ಪಡೆ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ನೆದರ್​ಲೆಂಡ್ಸ್ ವಿರುದ್ಧ ಸುಲಭ ಜಯ ಕಂಡಿತು. ಈ ಮೂಲಕ ಸೆಮಿ ಫೈನಲ್ ರೇಸ್​ನಲ್ಲಿ ಟೀಮ್ ಇಂಡಿಯಾ ಕಾಣಿಸಿಕೊಂಡಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಆಡಲಿದೆ. ಆದರೆ, ಇದಕ್ಕೂ ಮೊದಲು ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ಮಧ್ಯಾಹ್ನ 12:30ಕ್ಕೆ ಪರ್ತ್​ನಲ್ಲಿ ಹಿಟ್​ಮ್ಯಾನ್ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಗ್ರೂಪ್ 2 ರಲ್ಲಿರುವ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 30 ಭಾನುವಾರದಂದು ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಈ ಪಂದ್ಯ ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30 ಕ್ಕೆ ಈ ಕದನ ಶುರುವಾಗಲಿದೆ. ಇದಕ್ಕೂ ಮುನ್ನ ಇಂದು ರೋಹಿತ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲಿದ್ದು ಪತ್ರಕರ್ತರು ಕೇಳುವ ಕೆಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಜೊತೆಗೆ ತಂಡದಲ್ಲಿನ ಬದಲಾವಣೆ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ. ಭಾರತ- ದಕ್...

ಎರಡು ಪಂದ್ಯಗಳನ್ನು ಸೋತಿರುವ ಪಾಕ್ ತಂಡಕ್ಕೆ ಈಗಲೂ ಇದೆ ಸೇಮಿಸ್​ಗೇರುವ ಅವಕಾಶ..!

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ (T20 World Cup 2022) ಹಲವು ಅಚ್ಚರಿಯ ಪಲಿತಾಂಶಗಳು ಹೊರಬೀಳುತ್ತಿವೆ. ಆ ಪಲಿತಾಂಶಗಳು ಬಲಿಷ್ಠ ತಂಡಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡುತ್ತಿವೆ. ಇದಕ್ಕೆ ತಾಜಾ ಉದಾಹರಣೆಯಾಗಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಕ್ರಿಕೆಟ್​ ಶಿಶುಗಳ ಎದುರು ಏಷ್ಯನ್ ಚಾಂಪಿಯನ್ ಲಂಕಾ ತಂಡ ಸೋಲುಂಡಿತ್ತು. ಆ ಬಳಿಕ ಎರಡು ಬಾರಿಯ ಚಾಂಪಿಯನ್ ವಿಂಡೀಸ್ ಕೂಡ ಎರಡೆರಡು ಬಾರಿ ದುರ್ಬಲ ತಂಡಗಳೆದುರು ಮಕಾಡೆ ಮಲಗಿತ್ತು. ಇದರ ಫಲವಾಗಿ ಕೆರಿಬಿಯನ್ ದೈತ್ಯರು ಟೂರ್ನಿಯಿಂದಲೇ ಹೊರಬಿದ್ದರು. ಈಗ ಸೂಪರ್ 12 ಸುತ್ತಿನಲ್ಲೂ ಈ ಅನಿರೀಕ್ಷಿತ ಪಲಿತಾಂಶಗಳು ಹೊರಬೀಳುತ್ತಿದ್ದು, ಬಲಿಷ್ಠ ಇಂಗ್ಲೆಂಡ್ ತಂಡವೂ ಈ ಆಘಾತಕ್ಕೆ ತುತ್ತಾಗಿದೆ. ಅದು ಸಾಲದೆಂಬಂತೆ ಪಾಕಿಸ್ತಾನ (Pakistan) ತಂಡ ಕೂಡ ತನ್ನ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಸೋಲನುಭಿವಿಸಿದೆ. ಈ ಮೊದಲು ಭಾರತ ಎದುರು ಸೋತಿದ್ದ ಪಾಕ್ ತಂಡಕ್ಕೆ ಈ ಪಂದ್ಯದ ಗೆಲುವು ಅತ್ಯಗತ್ಯವಾಗಿತ್ತು. ಆದರೆ ಈ ಪಂದ್ಯದಲ್ಲಿ ಸೋತಿರುವ ಬಾಬರ್ ಪಡೆಗೆ ಸೇಮಿಸ್ ಹಾದಿ ಅಂತ್ಯವಂತಲೇ ಹೇಳಲಾಗುತ್ತಿದೆ. ಅದಾಗ್ಯೂ ಪಾಕ್ ತಂಡಕ್ಕೆ ಈಗಲೂ ಸಹ ಸೇಮಿಸ್​ಗೇರುವ ಅವಕಾಶಗಳು ಇವೆ. ಪಾಕಿಸ್ತಾನ ಸೆಮಿಫೈನಲ್ ತಲುಪುವುದು ಹೇಗೆ? ಪಾಕಿಸ್ತಾನ ಇದುವರೆಗೆ 2 ಪಂದ್ಯಗಳನ್ನು ಆಡಿದ್ದು, 2 ರಲ್ಲೂ ಸೊತಿದೆ. ಆದರೆ ಬಾಬರ್ ಪಡೆಗೆ ಇನ್ನೂ 3 ಪಂದ್ಯಗಳು ಬಾಕಿ ಉಳಿದಿವೆ. ಹೀಗಾಗಿ ಉಳಿದಿರುವ ಈ ಮೂರು ಪಂದ್ಯಗಳಲ್ಲಿ...

ಟ್ರೆಂಡ್ ಆಯ್ತು ‘ಫ್ರಾಡ್ ಪಾಕ್ ಮಿ. ಬೀನ್’; ಜಿಂಬಾಬ್ವೆ- ಪಾಕ್ ಪ್ರಧಾನಿಗಳ ಟ್ಟಿಟರ್ ವಾರ್! ಏನಿದು ಪ್ರಕರಣ?

ಟಿ20 ವಿಶ್ವಕಪ್ (T20 World Cup 2022) ಸೂಪರ್ 12 ಸುತ್ತಿನ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು 1 ರನ್​ಗಳಿಂದ ಸೋಲಿಸುವುದರೊಂದಿಗೆ ಜಿಂಬಾಬ್ವೆ ತಂಡ ರೋಚಕ ಜಯ ಸಾಧಿಸಿತ್ತು. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಈ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 8 ವಿಕೆಟ್ ನಷ್ಟಕ್ಕೆ 130 ರನ್ ಟಾರ್ಗೆಟ್ ಸೆಟ್ ಮಾಡಿತು. ಈ ಸಾಧಾರಣ ಗುರಿ ಬೆನ್ನಟ್ಟಿದ ಬಾಬರ್ ಪಡೆ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 129 ರನ್​ಗಳಿಸಲಷ್ಟೇ ಶಕ್ತವಾಗಿ ಕೇವಲ 1 ರನ್​ಗಳಿಂದ ಸೋಲೊಪ್ಪಿಕೊಂಡಿತು. ಪಾಕ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾದ ಜಿಂಬಾಬ್ವೆ ತಂಡಕ್ಕೆ ವಿಶ್ವದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಜೊತೆಗೆ ಜಿಂಬಾಬ್ವೆ ದೇಶದ ಅಧ್ಯಕ್ಷರಾದ ಎಮರ್ಸನ್‌ ಕೂಡ ತಂಡದ ಗೆಲುವಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಪಾಕ್ ತಂಡವನ್ನು ಹೀಯಾಳಿಸಿ ಟ್ವೀಟ್ ಮಾಡಿದ್ದರು. ಈಗ ಜಿಂಬಾಬ್ವೆ ಅಧ್ಯಕ್ಷರ ಟ್ವೀಟ್​ಗೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವಾಸ್ತವವಾಗಿ, ಪಾಕ್ ಎದುರು ಜಿಂಬಾಬ್ವೆ ಗೆದ್ದ ಬಳಿಕ ಟ್ವೀಟ್ ಮಾಡಿದ್ದ ಅಧ್ಯಕ್ಷ ಎಮರ್ಸನ್‌ ದಂಬುಡ್ಜೊ ಮ್ನಂಗಾಗ್ವಾ, ಜಿಂಬಾಬ್ವೆಗೆ ಎಂತಹ ಅದ್ಭುತ ಗೆಲುವು, ತಂಡದ ಆಟಗಾರರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು. ಹಾಗೆಯೇ ಇದರ ಜೊತೆಗೆ ಪಾಕಿಸ್ತಾನದ ಕಾಲೆಳೆದಿದ್ದ ಎಮರ್ಸನ್‌, ಮುಂದಿನ ಬಾರಿ ನಿಜವ...

India vs South Africa: ಭಾರತದ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?: ಇಲ್ಲಿದೆ ನೋಡಿ ಮಾಹಿತಿ

ಕಾಂಗರೂಗಳ ನಾಡಿನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup 2022) ಭಾರತ ತಂಡ ಭರ್ಜರಿ ಶುಭಾರಂಭ ಮಾಡಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ (Team India) ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಪಾಕಿಸ್ತಾನ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ರೋಹಿತ್ ಪಡೆ 4 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು. ಕೊನೆಯ ಎಸೆತದ ವರೆಗೂ ನಡೆದ ಈ ಕಾದಾಟದಲ್ಲಿ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಗೆಲುವು ತಂದಿಟ್ಟರು. ಗುರುವಾರ ನಡೆದ ದ್ವಿತೀಯ ಪಂದ್ಯದಲ್ಲೂ ನೆದರ್​ಲೆಂಡ್ಸ್ (India vs Netherlands) ವಿರುದ್ಧ 56 ರನ್​ಗಳ ಸುಲಭ ಜಯ ಕಂಡಿತು. ಇದೀಗ ಭಾರತ ತಂಡ ಮುಂದಿನ ಸವಾಲಿಗೆ ಸಜ್ಜಾಗಬೇಕಿದೆ. ಹಾಗಾದರೆ ಟೀಮ್ ಇಂಡಿಯಾ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ ಎಂಬುದನ್ನು ನೋಡೋಣ. ಗ್ರೂಪ್ 2 ರಲ್ಲಿರುವ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಈ ಪಂದ್ಯ ಅಕ್ಟೋಬರ್ 30 ಭಾನುವಾರದಂದು ಆಯೋಜಿಸಲಾಗಿದ್ದು ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30 ಕ್ಕೆ ಈ ಕದನ ಶುರುವಾಗಲಿದೆ. ಆಫ್ರಿಕಾ ಆಡಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಮತ್ತೊಂದರಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ +5.200 ರನ್​ರೇಟ್​ನೊಂದಿಗೆ 3 ಅಂಕ ಪಡೆದು ಎರಡನೇ ಸ್ಥಾನಲ...

T20 World Cup 2022: ಈ ವಿಶ್ವಕಪ್‌ನಲ್ಲಿ ದುರ್ಬಲ ತಂಡಗಳೆದುರು ಮಕಾಡೆ ಮಲಗಿದ ಬಲಿಷ್ಠ ತಂಡಗಳಿವು..!

source https://tv9kannada.com/photo-gallery/cricket-photos/t20-world-cup-2022-west-indies-sri-lanka-pakistan-england-big-upsets-so-far-psr-au14-461740.html

ಚಿತ್ರದುರ್ಗದಲ್ಲಿ ಪುನೀತ್ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದ ಅಭಿಮಾನಿಗಳು

  ಚಿತ್ರದುರ್ಗ, (ಅ.28) : ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸಿರುವ ಎನ್ನುವುದಕ್ಕಿಂತ ಜೀವಿಸಿರುವ ಚಿತ್ರ ಗಂಧದ ಗುಡಿ ಇಂದು ಎಲ್ಲೆಡೆ ತೆರೆಕಂಡಿದೆ. ಅಪ್ಪು ಇಲ್ಲ ಎಂಬ ನೋವಿಗೆ ಒಂದು ದಿನ ಕಳೆದರೆ ಒಂದು ವರ್ಷವೇ ಆಗಿ ಹೋಗುತ್ತೆ. ಜೊತೆಗೆ ಇದು ಅವರ ಕೊನೆಯ ಚಿತ್ರ ಎಂಬ ದುಃಖವೂ ಅಭಿಮಾನಿಗಳಲ್ಲಿದ್ದು, ಅಪ್ಪು ಕಣ್ತುಂಬಿಕೊಳ್ಳಲು ಥಿಯೇಟರ್ ಮುಂದೆ ಅಭಿಮಾನಿಗಳು ಬೆಳಿಗ್ಗೆಯಿಂದಲೇ ಜಮಾಯಿಸಿದ್ದಾರೆ. ಇನ್ನು ಅಪ್ಪು ಇದ್ದಾಗ ಅವರ ಸಿ‌ನಿಮಾಗಳನ್ನು ಅದೆಷ್ಟು ಸೆಲೆಬ್ರೇಟ್ ಮಾಡುತ್ತಿದ್ದರೋ ಈಗಲೂ ಅಷ್ಟೇ ಸೆಲೆಬ್ರೇಟ್ ಮಾಡಿದ್ದಾರೆ. ಚಿತ್ರದುರ್ಗದಲ್ಲೂ ಅಪ್ಪು ಅಭಿನಯದ ಗಂಧದ ಗುಡಿ ತೆರೆಕಂಡಿದೆ. ನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಪುನೀತ್ ಕಟೌಟ್ ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. ಮತ್ತೊಂದು ಕಡೆ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದಲ್ಲದೇ ಚಿತ್ರಮಂದಿರ ಆವರಣದಲ್ಲಿ ಅಭಿಮಾನಿಗಳು ಫ್ಲೆಕ್ಸ್ ಹಾಕಿ ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿ ಖುಷಿಪಟ್ಟರು. ಚಿತ್ರಮಂದಿರದಲ್ಲಿ ಬೆಳಗ್ಗೆ 7ಗಂಟೆಗೆ ಮೊದಲ ಶೋ ಪ್ರಾರಂಭವಾಗಿದ್ದು, ಎಲ್ಲಾ ಟಿಕೆಟ್ ಮಾರಟವಾಗಿವೆ. ಚಳ್ಳಕೆರೆ ನಗರದಲ್ಲೂ ಬೆಳಿಗ್ಗೆ 6.30 ಸುಮಾರಿಗೆ ಚಿತ್ರ ಆರಂಭವಾಗಿದೆ. ಜಿಲ್ಲೆಯ ವಿವಿಧ ತಾಲ್ಲೂಕಿನ ಚಿತ್ರಮಂದಿಗಳನ್ನು ಸಿಂಗರಿಸಿದ್ದು, ಅಪ್ಪು ಕಟೌಟ್​ಗಳಿಗೆ ಪೂಜೆ, ಹಾಲಿನ ಅಭಿಷೇಕ ಮಾಡಿದ್ದಾರೆ. ಪುನೀತ್​ಗೆ ಜೈಕಾರ ಕೂಗುತ್ತಾ ಎಲ್ಲರ...

Rohit Sharma: ನೆದರ್​ಲೆಂಡ್ಸ್ ವಿರುದ್ಧ ಗೆದ್ದ ಬಳಿಕ ರೋಹಿತ್ ಶರ್ಮಾ ಆಡಿದ ಮಾತುಗಳೇನು ಕೇಳಿ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ (T20 World Cup) ಮಹಾ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಗುರುವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ನೆದರ್​ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ (India vs Netherlands) 56 ರನ್​ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ ಟೇಬಲ್​ನಲ್ಲಿ ಕೂಡ ಅಗ್ರಸ್ಥಾನಕ್ಕೇರಿದೆ. ಭಾರತದ ಬೌಲರ್​ಗಳು ಸಂಘಟಿತ ಪ್ರದರ್ಶನ ತೋರಿದರೆ ಬ್ಯಾಟಿಂಗ್​ನಲ್ಲಿ ವಿರಾಟ್ ಕೊಹ್ಲಿ , ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧಶತಕ ಸಿಡಿಸಿ ಮಿಂಚಿದರು. ನೆದರ್​ಲೆಂಡ್ಸ್ ಕೂಡ ಬೌಲಿಂಗ್ ವಿಭಾಗದಲ್ಲಿ ಭಾರತೀಯ ಬ್ಯಾಟರ್​ಗಳನ್ನು ಕಾಡಿದ್ದು ಸುಳ್ಳಲ್ಲ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ (Rohit Sharma) ಕೆಲವೊಂದು ವಿಚಾರಗಳಲ್ಲಿ ಹಂಚಿಕೊಂಡಿದ್ದಾರೆ. ”ಈ ಗೆಲುವು ತುಂಬಾನೆ ಮುಖ್ಯವಾಗಿತ್ತು. ಈ ವಿಶೇಷವಾದ ಗೆಲುವು ಪಡೆಯಲು ನಮಗೆ ಕಾಲವಕಾಶವಿತ್ತು. ಇದು ನಮ್ಮ ಅದೃಷ್ಟ. ಪಾಕಿಸ್ತಾನ ವಿರುದ್ಧದ ಪಂದ್ಯ ಮುಗಿದ ಕೂಡಲೇ ಸಿಡ್ನಿಗೆ ಬಂದು ಇಲ್ಲಿ ಒಂದಾದೆವು. ಗೆಲುವಿನ ಎರಡು ಅಂಕ ತುಂಬಾನೆ ಮುಖ್ಯವಾಗುತ್ತದೆ. ಇದೊಂದು ಅದ್ಭುತ ಜಯ. ನೆದರ್​ಲೆಂಡ್ಸ್ ತಂಡ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸೂಪರ್ 12ಗೆ ಬಂದಿದೆ. ಅವರು ಕ್ವಾಲಿಫೈ ಆಗಿದ್ದು ಉತ್ತಮವಾಗಿತ್ತು. ಕ್ರೆಡಿಟ್ ಅವರಿ...