Friday, 20 August 2021

ತಾಲಿಬಾನಿಗಳಿಂದ ಪಾರಾಗುವಾಗ ವಿಮಾನದಿಂದ ಬಿದ್ದು ಪುಟ್ಬಾಲ್ ಆಟಗಾರ ದಾರುಣ ಸಾವು.

ಕಾಬೂಲ್: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಪ್ರವೇಶಿಸದ ಸಂದರ್ಭದಲ್ಲಿ ಅಮೆರಿಕ ವಾಯುಸೇನೆ ವಿಮಾನದ ರೆಕ್ಕೆಯಲ್ಲಿ ಕುಳಿತು ದೇಶದಿಂದ ಹೊರ ಹೋಗಲು ಯತ್ನಿಸಿದ್ದ ಹಲವರು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಹೀಗೆ ವಿಮಾನದಿಂದ ಬಿದ್ದು ಮೃತಪಟ್ಟವರಲ್ಲಿ ಒಬ್ಬ ಅಫ್ಘಾನಿಸ್ತಾನದ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ ಎಂದು ಗೊತ್ತಾಗಿದೆ. 19 ವರ್ಷದ ಜಾಕಿ ಅನ್ವಾರಿ ವಿಮಾನದ ರೆಕ್ಕೆಯ ಮೇಲಿಂದ ಬಿದ್ದು ಮೃತಪಟ್ಟಿರುವುದಾಗಿ ಆಫ್ಘನ್ ಕ್ರೀಡಾ ನಿರ್ದೇಶನಾಲಯ ಖಚಿತಪಡಿಸಿದೆ.

ಕಾಬೂಲ್ ವಿಮಾನನಿಲ್ದಾಣದಿಂದ ಅಮೆರಿಕ ವಾಯುಸೇನೆ ವಿಮಾನದ ರೆಕ್ಕೆ ಮೇಲೆ ಕುಳಿತು ಹೋಗುವಾಗ ನಾಲ್ವರು ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಜಾಕಿ ಅನ್ವರಿ ಕೂಡ ಮೃತಪಟ್ಟಿದ್ದಾನೆ.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...