Skip to main content

Posts

Showing posts from July, 2021

ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಚುಚ್ಚುಮದ್ದು.

  ಚಿತ್ರದುರ್ಗ: ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ   1 ನೇ ತರಗತಿ, 4 ನೇ ತರಗತಿ ಹಾಗು 10 ನೇ ತರಗತಿ ಮಕ್ಕಳಿ ಗೆ ಲಸಿಕೆಯನ್ನು ನೀಡಲಾಯಿತು. ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವತಿಯಿಂದ ಧನುರ್ವಾಯು , ನಂಜು , ನಾಯಿ ಕೆಮ್ಮು , ಗಂಟಲು , ಮಾರಿ , ರೋಗ ತಡೆಗಟ್ಟಲು ಚುಚ್ಚುಮದ್ದನ್ನು 1 ನೇ ತರಗತಿಗೆ , ಡಿಪಿಟಿ ಚುಚ್ಚುಮದ್ದು , 4 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ   ಟಿ ಡಿ ಚುಚ್ಚುಮದ್ದು ನೀಡಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತೆರಾದ ಭಾಗ್ಯಲಕ್ಷ್ಮಿ   H D, ಗೀತ B,   ಹಾಗೂ ಆಶಾ ಕಾರ್ಯಕರ್ತೆ ಜಮೀಲಾ ಶಾಲೆಯ ಮುಖ್ಯೋಪಾಧ್ಯಾಯರಾದ ಸಂಪತ್ ಕುಮಾರ್ ಸಿ ಡಿ ಹಾಗೂ ಶಿಕ್ಷಕ , ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.

ಎಂದೂ ತೀರದ ಸಾಲ.

  ವೀಕೆಂಡ್ ಸ್ಪೆಷಲ್: ಈ ವಾರದ ಸಂಡೇ ಸ್ಪೆಷಲ್  ನಲ್ಲಿ ಸತ್ಯಂ  ಶಂಕರಮಂಚಿ ಅವರ  ತೆಲುಗು ಕಥಾಸಂಕಲನ    “ ಅಮರಾವತಿ ಕಥೆಗಳು ” ಕನ್ನಡಕ್ಕೆ  ಡಾ|| ವಿರೂಪಾಕ್ಷಿ ಎನ್ ಬೋಸಯ್ಯ  ಅನುವಾದಿಸಿದ್ದಾರೆ.   ಅಮರಾವತಿ ಕಥೆಗಳು ಶಂಕರಮಂಚಿ ಅವರ ಕಥಾಸಂಕಲನ. ಇದರಲ್ಲಿರುವ 100 ಕಥೆಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕಥಾವಸ್ತು ವೈವಧ್ಯವಾಗಿದೆ. ಅಮರಾವತಿ ಪರಿಸರದ ಜನರ ಜೀವನ-ವಿಧಾನ ನೋವು-ನಲಿವುಗಳನ್ನು ಲೇಖಕರು ಸರಳವಾದ ಗ್ರಾಮೀಣ ಭಾಷಾ ಶೈಲಿಯಲ್ಲಿ ಅಭಿವ್ಯಕ್ತಿಸಿದ್ದಾರೆ. ಈ ಕಥಾಸಂಕಲನಕ್ಕೆ  ಆಂಧ್ರಪ್ರದೇಶ ಸರ್ಕಾರವು 1979ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. (ಕಥೆ-5  ) 'ಎಂದೂ ತೀರದ ಸಾಲ' ಕಥಾ ವಸ್ತು : ಸಣ್ಣ ಹಿಡುವಳಿದಾರನಾದ ರಂಗಯ್ಯನ ತಂದೆ ಊರ ಸಾಹುಕಾರ ಶಾನುಬೋಗನ ಹತ್ತಿರ ಮಾಡಿದ ಸಾಲವನ್ನು ಅಪ್ಪ ಇದ್ದ ಕಾಲದಿಂದಲೂ , ವರ್ಷದ ಲ್ಲಿ ಬೆಳೆಯ ವ ಮುಕ್ಕಾಲು ಪಾಲು ಕೊಡುತ್ತ ಬರುತ್ತಿದ್ದರೂ , ಇಂದಿಗೂ ಆ ಸಾಲ ತೀರಿಲ್ಲ. ಸಾಲ ವಸೂಲಾತಿಯೆಂದು ಶಾನುಬೋಗ ರಂಗಯ್ಯನ ಎತ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾನೆ. ಇದರಿಂದ ಕುಪಿತನಾದ ರಂಗಯ್ಯನ ಒಡಲ ಕಿಚ್ಚನ್ನು ಸೊಗಸಾಗಿ ಕಥೆ ಕಟ್ಟಿಕೊಟ್ಟಿದೆ. ಮುಂದುವರೆದು ಬಡವನೊಬ್ಬ ಕೊಟ್ಟ ಮಾತು ತಪ್ಪದೆ ನಡೆಯುವನೆಂಬ ಸಂದೇಶವನ್ನು ಈ ಕಥೆ ಅಭಿವ್ಯಕ್ತಿಸುತ್ತದೆ. ಆರ್ಟ್ : ಯೋಗೀಶ್ ,  ಮುದ್ದಾಪುರ...

ಚಿತ್ರದುರ್ಗದ ಸಿ. ಎನ್. ಸಿ. ಪಿ ಯು ಕಾಲೇಜಿಗೆ ಶೇ 100 ರಷ್ಟು ಫಲಿತಾಂಶ.

Ø ವಿಜ್ಞಾನ ವಿಭಾಗದಲ್ಲಿ ಮನೋಹರ್ ಸಿ , ನಿಶಾ ಜಿ , ಮತ್ತು ಉಮ್ಮೆ ಅಸ್ಮಾ ರವರು 600/600 ಅಂಕಗಳನ್ನು ಪಡೆ ದಿರುತ್ತಾರೆ. Ø ಭೂಮಿಕಾ ಎನ್ ಮತ್ತು ಹೇಮಂತ್ ಎಂ ರವರು 598/600 ಅಂಕಗಳನ್ನು ಪಡೆದಿರುತ್ತಾರೆ. Ø ಚಿತ್ರದುರ್ಗ ನಗರಕ್ಕೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ ಲ್ಲಿ ಮೂರು ಜನ ಟಾಪರ್ಸ್ ನೀಡಿದ ಏಕೈಕ ಕಾಲೇಜು: ಸಿ ಎನ್ ಸಿ ಪಿಯು ಕಾಲೇಜ್ .   ಚಿತ್ರದುರ್ಗ: ನಗರದ ಪ್ರತಿಷ್ಠಿತ ಸಿ. ಎನ್. ಸಿ. ಪಿಯು ಕಾಲೇಜ್  2021 ನೇ ಸಾಲಿನ ದ್ವಿತೀಯ ಪಿಯುಸಿ  ಪರೀಕ್ಷೆ ಯಲ್ಲಿ 100% ಫಲಿತಾಂಶ ವನ್ನು ಪಡೆದಿದೆ.  ವಿಜ್ಞಾನ ವಿಭಾಗದಲ್ಲಿ ಮನೋಹರ್ ಸಿ , ನಿಶಾ ಜಿ , ಮತ್ತು ಉಮ್ಮೆ ಅಸ್ಮಾ ರವರು 600/600 ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ . ಭೂಮಿಕಾ ಎನ್ ಮತ್ತು ಹೇಮಂತ್ ಎಂ ರವರು 598/600 ಅಂಕಗಳನ್ನು ಪಡೆದಿರುತ್ತಾರೆ.  2020-21 ನೇ ಸಾಲಿನಲ್ಲಿ ಒಟ್ಟು 126 ವಿದ್ಯಾರ್ಥಿಗಳಿದ್ದು 62   ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಯಲ್ಲಿ , 60 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 04 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ  ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ,  ಪ್ರಾಂಶುಪಾಲರು ,  ಬೋಧಕವರ್ಗ , ಬೋಧಕೇತರ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ .

ಲಿಂಬೂ ಬಳಕೆಯಲ್ಲಿ ಲಿಮಿಟೇಷನ್ ಇರಲಿ, ಇಲ್ಲವಾದಲ್ಲಿ ತೊಂದರೆ ತಪ್ಪಿದಲ್ಲ.

·          ನಿಂಬೂ, ಮಿತವಾಗಿ ನಂಬು. ·          ಅತಿಯಾದ ನಿಂಬು ಸೇವನೆ ಆರೋಗ್ಯಕ್ಕೆ ಹಾನಿಕಾರಕ ·          ಕೆಲವೊಂದು ಕಾರಣಗಳಿಗೆ ನಿಂಬೆ ಹಣ್ಣು ಅತಿ ಸೇವನೆ ಒಳ್ಳೆಯದಲ್ಲ ·          ಯಾವ ಕಾರಣಗಳಿಗೆ ನಿಂಬೆ ಹಣ್ಣು ಸೇವನೆ ಮಾಡಬಾರದು ತಿಳಿಯಿರಿ. ಬೇಸಿಗೆ ಕಾಲದಲ್ಲಿ, ಬೆವರು ಬಾಯಾರಿಕೆ ಎರಡೂ ಸಹಜ. ಬಾಯಾರಿದಾಗ ಲಿಂ ಬೂ ಜ್ಯೂಸ್ , ಲಿಂ ಬೂ ಪಾನಕ ಕುಡಿಯುವುದು ಸಹಜ.  ಊಟದಲ್ಲೂ ನಾನ್ ವೆಜ್ ಇದ್ದರೆ ಅದರ ಮೇಲೆ ನಿಂಬೂ ರಸ ಹಾಕಿ ತಿನ್ನುವ ಅಭ್ಯಾಸ ಕೆಲವರಿಗುಂಟು. ನಿಂಬೂ  ಉಪ್ಪಿನ ಕಾಯಿಯನ್ನು ಕೂಡಾ ಚಪ್ಪರಿಸಿ ತಿನ್ನುವವರಿಗೇನೂ ಕಡಿಮೆ ಇಲ್ಲ.  ನಿಂಬೂ ಆರೋಗ್ಯಕ್ಕೆ ತುಂಬಾ ಉತ್ತಮ  ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆಯುರ್ವೇದದಲ್ಲಿ ಲಿಂಬೆಗೆ ಅತಿ ಮಹತ್ವವಿದೆ. ಹಲವಾರು ರೋಗಗಳಿಗೆ  ನಿಂಬು ರಾಮಬಾಣ. ಲಿಂಬೆ ರಸ , ನಿಂಬೆ ಸಿಪ್ಪೆಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ.  ಆದರೆ , ಗೊತ್ತಿರಲಿ ಅತಿಯಾದರೆ ಅಮೃತ ಕೂಡಾ ವಿಷವಾಗುತ್ತದೆ. ಅದೇ ರೀತಿ ಒಂದು ಲಿಮಿಟ್ ಮೀರಿ  ಲಿಂಬೆಕಾಯಿ ತಿಂದರೆ ಆರೋಗ್ಯ ಹದಗೆಡುತ್ತದೆ ನೆನಪಿರಲಿ.  ಲಿಂಬೆಕಾಯಿಯನ್ನು  ಎಷ್ಟು ತಿನ್ನಬೇಕು. ಯಾರು ತಿನ್...

ಐಟಿ ಉದ್ಯೋಗಿಗಳಿಂದ: ಕಡ್ಲೆಗುದ್ದು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಆಂಡ್ರಾಯ್ಡ್ ಮೊಬೈಲ್ ಫೋನ್ ವಿತರಣೆ.

  ಕರೋನದ ಸಂಕಷ್ಟ ಸಮಯದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲು ಮೊಬೈಲ್ ಡೊನೇಟ್ ಮಾಡಿ ಅಭಿಯಾನವನ್ನು   ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಮಹೇಶ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ವಿನಂತಿಸಿಕೊಂಡಿದ್ದರು .   ಇವರ ಮನವಿಗೆ ಸ್ಪಂದಿಸಿದ ಚಿತ್ರದುರ್ಗ ಮೂಲದ ಐಟಿ ಉದ್ಯೋಗಿಗಳಾದ ಭುವನೇಶ್ವರ್ ಹಾಗೂ ಅವರ ಸ್ನೇಹಿತರು   ಹಾಗೂ ಬಸವರಾಜ್   20 ಮೊಬೈಲ್ ಗಳನ್ನು ಶಾಲಾ ವಿದ್ಯಾರ್ಥಿಗಳಾಗಿ ಕೊಡುಗೆಯಾಗಿ ಇಂದು ನೀಡಿದರು .   ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷಕರಾದ ಶ್ರೀ ಎಚ್   ಗೋವಿಂದಪ್ಪನವರು   ವಿದ್ಯಾರ್ಥಿಗಳ ಕಲಿಕೆಗಾಗಿ ಮೊಬೈಲ್ ಡೊನೇಟ್ ಮಾಡುತ್ತಿರುವುದು ತುಂಬಾ ಶ್ಲಾಘನೀಯ   ಕಾರ್ಯ ಇವರುಗಳ ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ ಇವರ ಈ ಕಾರ್ಯಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಿದರು .   ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ್ ಅಧ್ಯಕ್ಷರಾದ ಶ್ರೀಮತಿ ಲೋಲಾಕ್ಷಮ್ಮನವರು ಮಾತನಾಡಿ ಭುವನೇಶ್ವರ್   ಬಸವರಾಜ್ ಸ್ನೇಹಿತರು ನೀಡಿದಂತಹ ಉಚಿತ ಮೊಬೈಲ್ ಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಉತ್...

ಭಾರತದಲ್ಲಿ ಕೊರೋನಾ ಏರಿಕೆ: ಕಳೆದ 24 ಗಂಟೆಯಲ್ಲಿ 38,079 ಹೊಸ ಪ್ರಕರಣ ಪತ್ತೆ, 560 ಮಂದಿ ಸಾವು.

  ನವದೆಹಲಿ : ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (ಎಂಒಎಚ್ ಎಫ್ ಡಬ್ಲ್ಯೂ) ಪ್ರಕಾರ , ಕಳೆದ 24 ಗಂಟೆಗಳಲ್ಲಿ 38,079 ಹೊಸ ಪ್ರಕರಣಗಳು ದಾಖಲಾದ ನಂತರ ಭಾರತದ ಕೊರೊನಾ ವೈರಸ್ ಕಾಯಿಲೆಯ (ಕೋವಿಡ್- 19) ಒಟ್ಟು ಸಂಖ್ಯೆ ಶನಿವಾರ 31,064,908 ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ಕೊರೊನದಿಂದ 560 ಜನ ಸಾವನ್ನಪ್ಪಿದ್ದು , ಸಾವನ್ನಪ್ಪಿದವರ ಸಂಖ್ಯೆ 4,13,091 ಕ್ಕೆ ಏರಿಕೆಯಾಗಿದೆ. ಮತ್ತು 43,916 ಹೊಸ ಚೇತರಿಕೆಗಳು ವರದಿಯಾಗಿವೆ , ಆ ಮೂಲಕ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 30,227,792 ಕ್ಕೆ ಏರಿದೆ. ಸಕ್ರಿಯ ಕೇಸ್ ಲೋಡ್ 6,397 ರಷ್ಟು ಕುಸಿತಕ್ಕೆ ಸಾಕ್ಷಿಯಾಯಿತು , ಮತ್ತು ಈಗ 424,025 ರಷ್ಟಿದೆ , ಇದು ಕೋವಿಡ್- 19 ಪ್ರಕರಣಗಳ ಒಟ್ಟು ಸಂಖ್ಯೆಯ ಶೇಕಡಾ 1.39 ರಷ್ಟಿದೆ. ಶನಿವಾರದ ಅಂಕಿಅಂಶಗಳು ಶುಕ್ರವಾರದ 38,949 ಹೊಸ ಪ್ರಕರಣಗಳಿಗಿಂತ 870 ಕಡಿಮೆ.   ಏತನ್ಮಧ್ಯೆ , 542 ಸಾವುಗಳು ವರದಿಯಾದ ಹಿಂದಿನ ದಿನಕ್ಕಿಂತ ಸಾವಿನ ಸಂಖ್ಯೆ 18 ಹೆಚ್ಚಾಗಿದೆ. ದೇಶದಲ್ಲಿ ಈವರೆಗೆ ಕೋವಿಡ್- 19 44,20,21,954 ಮಾದರಿಗಳನ್ನು ಪರೀಕ್ಷಿಸಲಾಗಿದ್ದು , ಅವುಗಳಲ್ಲಿ ಕಳೆದ 24 ಗಂಟೆಗಳಲ್ಲಿ 19,98,715 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಶನಿವಾರ ತಿಳಿಸಿದೆ.  

ಆಲೂಗಡ್ಡೆ ಸಿಪ್ಪೆಯಲ್ಲೂ!!!.....ಅಡಗಿದೆ ಆರೋಗ್ಯದ ಗುಟ್ಟು.

ನೀವೂ ಸಹ ಆಲೂಗೆಡ್ಡೆಯಿಂದ ಆಹಾರ ತಯಾರಿಸುವ ಮೊದಲು ಅದರ ಸಿಪ್ಪೆ ತೆಗೆದು ಡಸ್ಟ್‌ಬಿನ್‌ನಲ್ಲಿ ಎಸೆಯುತ್ತಿದ್ದೀರಾ... ಹಾಗಿದ್ದರೆ ಮೊದಲು ನಿಮ್ಮ ಅಭ್ಯಾಸವನ್ನು ಬದಲಾಯಿಸಿ. ಆಲೂಗಡ್ಡೆಗಿಂತ ಆಲೂಗಡ್ಡೆಯ ತೊಗಟೆ/ಸಿಪ್ಪೆ ಹೆಚ್ಚು ಪ್ರಯೋಜನಕಾರಿ ಎಂದು ಬಹುಶಃ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ·          ಆಲೂಗಡ್ಡೆಯ ಸಿಪ್ಪೆಯು ಆಲೂಗಡ್ಡೆಗಿಂತಲೂ ಪ್ರಯೋಜನಕಾರಿ ·          ಆಲೂಗಡ್ಡೆ ಸಿಪ್ಪೆಯಲ್ಲಿ ಅನೇಕ ಪೋಷಕಾಂಶಗಳಿವೆ ·          ಆಲೂಗಡ್ಡೆ ಸಿಪ್ಪೆಯನ್ನು ಎಸೆಯುವ ಮೊದಲು ಅದರ ಪ್ರಯೋಜನಗಳೇನು ಎಂದು ತಿಳಿಯಿರಿ ವಿಶ್ವದ ಅತ್ಯಂತ ಜನಪ್ರಿಯ ತರಕಾರಿ ವಿಷಯಕ್ಕೆ ಬಂದಾಗ ಹೆಚ್ಚಿನ ಜನರಿಗೆ ನೆನಪಾಗುವ ತರಕಾರಿ ಎಂದರೆ ಬಹುಶಃ ಆಲೂಗಡ್ಡೆ ಇರಬಹುದು. ಆಲೂಗಡ್ಡೆಯ ಸಂಯೋಜನೆಯು ಪ್ರತಿ ತರಕಾರಿಗಳೊಂದಿಗೆ ಉತ್ತಮವಾಗಿದೆ. ಹಾಗಾಗಿಯೇ ಆಲೂಗಡ್ಡೆಯನ್ನು ಇಷ್ಟಪಡದವರ ಸಂಖ್ಯೆ ಕೂಡ ಕಡಿಮೆ ಎಂದೇ ಹೇಳಬಹುದು. ಆದರೆ ಆಲೂಗಡ್ಡೆ ಬಳಸಿ ಆಹಾರ ತಯಾರಿಸುವಾಗ ಸಾಮಾನ್ಯವಾಗಿ ನಾವು ಮೊದಲು ಅದನ್ನು ತೊಳೆದು ಸಿಪ್ಪೆ ತೆಗೆಯುತ್ತೇವೆ ಮತ್ತು ನಂತರವೇ ಅದನ್ನು ಭಕ್ಷ್ಯವಾಗಿ ತಯಾರಿಸುತ್ತೇವೆ. ಆದರೆ ಆಲೂಗೆಡ್ಡೆ ಸಿಪ್ಪೆಯನ್ನು ಡಸ್ಟ್‌ಬಿನ್‌ನಲ್ಲಿ ಎಸೆಯುವ ಮೊದಲು ಮತ್ತೊಮ್ಮೆ ಯೋಚಿಸಿ ?  ಆಲೂಗೆಡ್ಡೆ ಸಿಪ್ಪೆ...

ತುಪ್ಪ ನೀನೆಷ್ಟು ಪ್ರಯೋಜನವಪ್ಪ!!

ತುಪ್ಪ ಇಲ್ಲದೆ ಭಾರತೀಯರ ಅಡುಗೆ ಮನೆ ಅಪೂರ್ಣವಾಗಿರುತ್ತದೆ.  ಅಡುಗೆ ಮನೆ , ಪೂಜೆ ಇತ್ಯಾದಿ ವಿಷಯದಲ್ಲೂ ತುಪ್ಪಕ್ಕೆ ವಿಶೇಷ ಸ್ಥಾನಮಾನವಿದೆ. ಅದರಲ್ಲೂ ಮನೆಯಲ್ಲಿ ಮಾಡಿದ ತುಪ್ಪದ  ಪ್ರಯೋಜನ ತುಸು ಹೆಚ್ಚು. ·          ದೇಹಾರೋಗ್ಯಕ್ಕೆ ತುಪ್ಪ ಯಾಕೆ ಸಹಕಾರಿ ? ತುಪ್ಪ ಎಷ್ಟರ ಪ್ರಮಾಣದಲ್ಲಿ ತಿನ್ನಬೇಕು ? ಅದರಿಂದ ಲಾಭ ಏನು ? ·          ತುಪ್ಪದಲ್ಲಿರುವ ಸಿಎಲ್ ಎ ಮೆಟಬಾಲಿಸಂನ್ನು ಸಮಪ್ರಮಾಣದಲ್ಲಿಡುತ್ತದೆ. ಹಾಗಾಗಿಬೊಜ್ಜು ಬೆಳೆಯುವುದಿಲ್ಲ. ·           ಜೀರ್ಣಕ್ರಿಯೆ ,  ಹಾರ್ಮೋನು ಸಮತೋಲನಕ್ಕೆ ತುಪ್ಪ ಸೇವನೆ ಅತ್ಯಗತ್ಯ..   ಭಾರತೀಯರ ಅಡುಗೆ ಮನೆಯಲ್ಲಿ ತುಪ್ಪ ಕ್ಕೆ ವಿಶೇಷ ಮಹತ್ವ ವಿದೆ. ತುಪ್ಪ ಇಲ್ಲದೆ ಭಾರತೀಯರ ಅಡುಗೆ ಮನೆ ಅಪೂರ್ಣವಾಗಿರುತ್ತದೆ.  ಅಡುಗೆ ಮನೆ , ಪೂಜೆ ಇತ್ಯಾದಿ ವಿಷಯದಲ್ಲೂ ತುಪ್ಪಕ್ಕೆ ವಿಶೇಷ ಸ್ಥಾನಮಾನವಿದೆ. ಅದರಲ್ಲೂ ಮನೆಯಲ್ಲಿ ಮಾಡಿದ ತುಪ್ಪದ  ಪ್ರಯೋಜನ ತುಸು ಹೆಚ್ಚು. ದೇಹಾರೋಗ್ಯಕ್ಕೆ ತುಪ್ಪ ಯಾಕೆ ಸಹಕಾರಿ ? ತುಪ್ಪ  ಎಷ್ಟರ ಪ್ರಮಾಣದಲ್ಲಿ ತಿನ್ನಬೇಕು ? ಅದರಿಂದ ಲಾಭ  ಏನು ? ಇವನ್ನೆಲ್ಲಾ ಇವತ್ತು ತಿಳಿದುಕೊಳ್ಳೋಣ. ದೇಹಕ್ಕೆ ಎನರ್ಜಿ ನೀಡುವ ತುಪ್ಪ! ತುಪ್ಪ , ಅದರಲ್ಲೂ ಅಮ್ಮ ಮಾಡಿದ ದ...