Wednesday 9 June 2021

ಬಳ್ಳಾರಿ ವಿಜಯನಗರ -ಜಿಲ್ಲೆಯ ಇಂದಿನ ಕೋವಿಡ್ ಪ್ರಕರಣಗಳು.

ಬಳ್ಳಾರಿ: ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಕೋವಿಡ್‍ನಿಂದ 535 ಜನ ಗುಣಮುಖರಾಗಿದ್ದು ದಿನದಿಂದ ದಿನಕ್ಕೆ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಟ್ಟು ಗುಣಮುಖರ ಸಂಖ್ಯೆ 88688 ಕ್ಕೆ ಏರಿಕೆ ಕಂಡಿದೆ.

ಹೊಸದಾಗಿ ಇಂದು(ಬುಧವಾರ) 211 ಕೊರೊನಾ ಪ್ರಕರಣಗಳು ದೃಡಪಟ್ಟಿದ್ದು ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 94634 ಕ್ಕೇರಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬಳ್ಳಾರಿ 35, ಸಂಡೂರು 23, ಸಿರಗುಪ್ಪ 24, ಕೂಡ್ಲಿಗಿ 41, ಹಡಗಲಿ 25, ಹೊಸಪೇಟೆ 17, ಹಗರಿಬೊಮ್ಮನಹಳ್ಳಿ 8, ಹರಪನಹಳ್ಳಿ 36 ಹಾಗೂ ಹೊರ ಜಿಲ್ಲೆಯ 1 ಹೊರ ರಾಜ್ಯ 1 ಪ್ರಕರಣಗಳು ದಾಖಲಾಗಿವೆ.

ಬುಧವಾರ 11 ಜನರು ಕೋವಿಡ್‍ನಿಂದ ಮೃತಪಟ್ಟಿದ್ದು, ಇದರಿಂದ ಮೃತರ ಸಂಖ್ಯೆ 1434 ಕ್ಕೆ ಏರಿಕೆಯಾಗಿದೆ ಮತ್ತು ಜಿಲ್ಲೆಯಲ್ಲಿ ಒಟ್ಟು 4512 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ




No comments:

Post a Comment