Sunday, 4 September 2022

ಲೈಂಗಿಕ ದೌರ್ಜನ್ಯದಲಿ ವಿಶ್ವಸಂಸ್ಥೆ ನಿರ್ಣಯ

ನ್ಯೂಯಾರ್ಕ್:  ಜಾಗತಿಕವಾಗಿ ನಡೆಯುತ್ತಿರುವ ಲೈಂಗಿಕ ಹಾಗು ಲಿಂಗ ಆಧಾರಿತ ಸಮಸ್ಯೆಯನ್ನು ಬಲವಾಗಿ ಖಂಡಿಸಿರುವ ವಿಶ್ವ ಸಂಸ್ಥೆ ಮಹಾಸಭೆ, ಎಲ್ಲಾ ದೇಶಗಳು ನೊಂದವರಿಗೆ ನ್ಯಾಯ ದೊರಕಿಸುವ ಜೊತೆಗೆ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ, ಟಾಕೀತು ಮಾಡಿದೆ. 

ಜಪಾನ್ ಮತ್ತು ಸಿಯೆರಾ ಲಿಯೋನ್ ಮಂಡಿಸಿದ ಜಂಟಿ ನಿರ್ಣಯವನ್ನು ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು. ಲೈಂಗಿಕ ದೌರ್ಜನಕ್ಕೆ ಪರಿಹಾರ ಕಂಡುಕೊಳ್ಳಲು 'ಅಂತರಾಷ್ಟ್ರೀಯ ಸಹಕಾರ ಹಾಗೂ ನ್ಯಾಯಾ'ಲಯದ ಹೆಸರಿನಲ್ಲಿ ಮಂಡಿಸಿದ ನಿರ್ಣಯ ಮಹಾಸಭೆಯಲ್ಲಿ 2-1 ಮತಗಳ ಅಂತರದಿಂದ ಅಂಗೀಕಾರಗೊಂಡಿತು. ನಿರ್ಣಯದಲ್ಲಿ ಹಿಂಸೆಗೆ ಒಳಗಾದವರಿಗೆ ಸಹಾಯ, ಪರಿಹಾರ ನೀಡುವುದು, ಲೈಂಗಿಕ ದೌರ್ಜನ ತಡೆಗೆ ದಾರಿ ಹುಡುಕುವುದು, ಅಂತರಾಷ್ಟ್ರೀಯ ಮಟ್ಟದಲ್ಲಿ ಇಂತಹ ಪ್ರಕರಣಗಳನ್ನು ತಡೆಯಲು ಒಗ್ಗೂಡಿ ಕೆಲಸ ಮಾಡುವುದಕ್ಕೆ ಒತ್ತು ನೀಡಬೇಕು ಎಂದು ಹೇಳಲಾಗಿದೆ.

No comments:

Post a Comment