Monday, 12 September 2022

ನಟ ಕೃಷ್ಣಂ ರಾಜು ಇನ್ನಿಲ್ಲ

ಹೈದರಾಬಾದ್ :  ತೆಲುಗು ಚಿತ್ರರಂಗದ ರೆಬೆಲ್ ಸ್ಟಾರ್ ಎಂದೇ ಖ್ಯಾತರಾಗಿದ್ದ ನಟ, ರಾಜಕಾರಣಿ ಹಾಗೂ ಕೇಂದ್ರದ ಮಾಜಿ ಸಚಿವ ಕೃಷ್ಣಮ್ ರಾಜು ಭಾನುವಾರ ಬೆಳಗ್ಗೆ ನಿಧನರಾದರು. 



ಕೋವಿಡ್ ಸೋಂಕಿಗೆ ತುತ್ತಾಗಿದ್ದ ಕೃಷ್ಣಂ ರಾಜು ಹೈದರಾಬಾದ್ ನ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.  82 ವರ್ಷದ ಕೃಷ್ಣಂ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.  ಕಿಡ್ನಿ ಹಾಗೂ ಶ್ವಾಸಕೋಶದ ಸೋಂಕಿಗೂ ಒಳಗಾಗಿದ್ದರು.  ಎಂದು ಆಸ್ಪತ್ರೆ ಮೂಲಗಳು ತಿಳಿಸುವೆ. 1998-99 ರಲ್ಲಿ ಆಂಧ್ರಪ್ರದೇಶದ ನರಸಾಪುರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕೃಷ್ಣಂ ರಾಜ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು.

No comments:

Post a Comment