ಬೆಂಗಳೂರು, ಡಿ. 25: ಕರ್ನಾಟಕ ರಾಜ್ಯದಲ್ಲಿ 2021-22 ನೇ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ದಿನಾಂಕ ವಿಸ್ತರಣೆ ಮಾಡಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಸೂಚನೆ ಹೊರಡಿಸಿದೆ.
ಎಸ್‌ಎಸ್‌ಎಲ್
ಸಿ ಮುಖ್ಯ ಪರೀಕ್ಷೆಗೆ ನೋಂದಣಿ ಮಾಡಲು ಡಿ.
2021-22 ನೇ ಸಾಲಿನ ಎಸ್‌ಎಸ್‌ಎಲ್ ಸಿ
ವಿದ್ಯಾರ್ಥಿಗಳ ನೋಂದಣಿ, ಪರೀಕ್ಷಾ
ಶುಲ್ಕ ಪಾವತಿ ಹಾಗೂ ಪ್ರಸ್ತಾವನೆ ಸಲ್ಲಿಕೆ ದಿನಾಂಕವನ್ನು ಹತ್ತು ದಿನಗಳ ಕಾಲ ವಿಸ್ತರಣೆ
ಮಾಡಲಾಗಿದೆ. ಅದರಂತೆ ಮಂಡಳಿ ಜಾಲ ತಾಣದ ಮೂಲಕ ವಿದ್ಯಾರ್ಥಿಗಳ ಮಾಹಿತಿಯನ್ನು ಮಂಡಳಿ ವೆಬ್
ತಾಣದಲ್ಲಿ ನೋಂದಣಿ ಮಾಡಲು 2022 ಜ.10 ಕೊನೆ ದಿನಾಂಕ ನಿಗದಿ ಮಾಡಲಾಗಿದೆ.
ವಿದ್ಯಾರ್ಥಿಗಳ
ಪರೀಕ್ಷಾ ಶುಲ್ಕ ಚಲನ್ ಮುದ್ರಿಸಿಕೊಳ್ಳಲು ಕೊನೆ ದಿನಾಂಕವನ್ನು 2022 ಜನವರಿ 17 ನಿಗದಿ ಪಡಿಸಲಾಗಿದೆ. ಜ. 19 ರೊಳಗೆ ಪರೀಕ್ಷಾ ಶುಲ್ಕ ಪಾವತಿಸಲು
ಸೂಚಿಸಲಾಗಿದೆ. ಹಿಂದಿನ ವರ್ಷದ ಅನುತ್ತಿರ್ಣ ವಿದ್ಯಾರ್ಥಿಗಳು ಹಳೆಯ ಪದ್ದತಿಯಂತೆ ಜ. 19 ರೊಳಗೆ ಪರೀಕ್ಷಾ ಶುಲ್ಕವನ್ನು
ಸೂಚಿಸಿರುವ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಪಾವತಿ ಮಾಡಿ ಅದನ್ನು ಮಂಡಳಿಗೆ ಸಲ್ಲಿಸಲು
ಸೂಚಿಸಲಾಗಿದೆ. ತಪ್ಪಿದಲ್ಲಿ ಅಂತಹ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಿಲ್ಲ.
ಹಳೇ ಪದ್ದತಿ
ಮೂಲಕ ಪರೀಕ್ಷೆ:
ಎಸ್‌ಎಸ್‌ಎಲ್
ಸಿ ಪರೀಕ್ಷೆಯನ್ನು ಹಳೇ ಪದ್ದತಿಯಂತೆ ಈ ಬಾರಿ ಮಾಡಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ
ತೀರ್ಮಾನಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಒಂದು
ಪ್ರಶ್ನೆ ಪತ್ರಿಕೆ ನೀಡಿ ಬಹು ಆಯ್ಕೆ ಮಾದರಿ ಪರೀಕ್ಷೆ ಪರಿಚಯಿಸಲಾಗಿತ್ತು. ಹೀಗಾಗಿ ಕೇವಲ ಎರಡೇ
ದಿನದಲ್ಲಿ ಪರೀಕ್ಷೆ ಮುಕ್ತಾಯವಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಯಾವ ವಿದ್ಯಾರ್ಥಿಗಳನ್ನು
ಅನುತ್ತೀರ್ಣಗೊಳಿಸಬಾರದು ಎಂಬ ಷರತ್ತಿನ ಮೇರೆಗೆ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳನ್ನು
ಉತ್ತೀರ್ಣ ಮಾಡಲಾಗಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈ ಮೊದಲಿನಂತೆ ಬಹುಆಯ್ಕೆ ಪ್ರಶ್ನೆ
ಒಳಗೊಂಡಂತೆ ಅರು ವಿಷಯಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆ 100 ಅಂಕ, ಉಳಿದ ಐದು ವಿಷಯಗಳಿಗೆ ತಲಾ 80 ಅಂಕ ಒಳಗೊಳ್ಳಲಿದೆ. ಆರು ವಿಷಯಗಳಿಗೆ
ಪರೀಕ್ಷೆ ನಡೆಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಕೊರೊನಾ
ಭೀತಿ ಹಿನ್ನೆಲೆಯಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ವರ್ಷ ತಡವಾಗಿ ಅರಂಭವಾಗಿತ್ತು. ಪಠ್ಯ ಕ್ರಮದಲ್ಲಿ ಕೆಲವು
ಅಧ್ಯಾಯ ಕಡಿತ ಮಾಡಿದ್ದು, ಉಳಿದ
ಪಠ್ಯಕ್ರಮ ಆಧರಿಸಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಸದ್ಯ ಓಮಿಕ್ರಾನ್ ಪರಿಸ್ಥಿತಿ ಬಗ್ಗೆ
ಅವಲೋಕಿಸುತ್ತಿದ್ದು, ಫೆಬ್ರವರಿ-
ಮಾರ್ಚ್ ತಿಂಗಳ ಪರಿಸ್ಥಿತಿ ನೋಡಿಕೊಂಡು ಪರೀಕ್ಷಾ ದಿನಾಂಕ ನಿಗದಿ ಪಡಿಸಲು ಚಿಂತನೆ ನಡೆದಿದ್ದು, ಮೇ ತಿಂಗಳಲ್ಲಿ ಪರಿಕ್ಷೆ ನಿಗದಿಯಾಗುವ
ಸಾಧ್ಯತೆಯಿದೆ.
No comments:
Post a Comment