Saturday, 4 September 2021
ಗಂಡು ಮಕ್ಕಳಿಗೂ ಸಂಸ್ಕಾರ ಅಗತ್ಯ: ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನೀಕೇರಿ.
ನಾಯಕನಹಟ್ಟಿ: ಗಂಡು ಮಕ್ಕಳಿಗೆ ಸಂಸ್ಕಾರ ಕಲಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಕವಿತಾ
ಎಸ್ ಮನ್ನೀಕೇರಿ ಹೇಳಿದರು. ಅವರು ಶನಿವಾರ ಸಮೀಪದ
ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ, ‘ಸಮಸ್ಯೆ ಮುಕ್ತ ಗ್ರಾಮದ ಕಡೆಗೊಂದು ಹೆಜ್ಜೆ ಕಾರ್ಯಕ್ರಮ’ದ
ಅಂಗವಾದ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆ ಹಾಗೂ ರಾಜ್ಯದಲ್ಲಿ ಗಂಡು ಮಕ್ಕಳು ಪೋಷಕರು
ತಲೆತಗ್ಗಿಸುವ ಪ್ರಕರಣಗಳು ದಿನೆ
ದಿನೇ ಹೆಚ್ಚುತ್ತಿವೆ. ಇತ್ತೀಚೆಗೆ ಭರಮಸಾಗರ
ಗ್ರಾಮದಲ್ಲಿ ನಡೆದ ಅತ್ಯಾಚಾರ ಪ್ರಕರಣ, ಗಂಡುಮಕ್ಕಳು ಹೆತ್ತವರನ್ನು
ಯೋಚಿಸುವಂತಾಗಿದೆ. ಒಂದು ಕಾಲದಲ್ಲಿ ಹೆಣ್ಣುಮಕ್ಕಳು ಜಾಗೃತರಾಗಿರಿ
ಎಂದು ಹೇಳಲಾಗುತ್ತಿತ್ತು ಹೆಣ್ಣುಮಕ್ಕಳಿಗೆ ಮಾತ್ರ ಬುದ್ಧಿವಾದ ಸಂಸ್ಕಾರವನ್ನು ಪೋಷಕರು
ನೀಡುತ್ತಿದ್ದರು. ಆದರೆ ಇದೀಗ ಗಂಡು ಮಕ್ಕಳಿಗೆ ನೀತಿ ಪಾಠ ಹೇಳಬೇಕಾದ
ಅನಿವಾರ್ಯತೆ ಇದೆ. ಹೆಣ್ಣುಮಕ್ಕಳಿಗೆ ಗೌರವ ನೀಡುವ ಉತ್ತಮ ನಡವಳಿಕೆ
ರೂಪಿಸಿಕೊಳ್ಳುವ ಸಂಸ್ಕಾರ ನೀಡುವುದು ಅಗತ್ಯವಾಗಿದೆ. ಕುಟುಂಬದಲ್ಲಿರುವ
ಗಂಡು ಮಕ್ಕಳಿಗೆ ಸಂಸ್ಕಾರ ಕಲಿಸುವುದು ಇಂದಿನ ಆದ್ಯತೆಯಾಗಬೇಕು.
ನಾನು ಎರಡು ಗಂಡುಮಕ್ಕಳ ತಾಯಿಯಾಗಿ, ಪ್ರತಿದಿನ ಮನೆಗೆ ತೆರಳಿದ ನಂತರ ಅವರಿಗೆ ನೀತಿ ಹಾಗೂ ಸಂಸ್ಕಾರವನ್ನು
ಹೇಳುತ್ತಿದ್ದೇನೆ, ಐಎಎಸ್ ,ಐಪಿಎಸ್,
ಆಗುವುದಕ್ಕಿಂತ ಮುಂಚೆ ಉತ್ತಮ
ಸಂಸ್ಕಾರವಂತ ಮಕ್ಕಳನ್ನು ನೀಡುವುದು ಪೋಷಕರು ಜವಾಬ್ದಾರಿ ಎಂದರು.
ಗ್ರಾಮದಲ್ಲಿ ಶೇಕಡ 100
ಪ್ರಮಾಣದಲ್ಲಿ ಕೊರೊನಾ ವ್ಯಾಕ್ಸಿನ್ ,ಪೌತಿ
ಖಾತೆ ಪ್ರಕರಣ, ಪಿಂಚಣಿ, ಪಿ.ಎಂ.ಕಿಸಾನ್, ಸೇರಿ ಸರ್ಕಾರದ ಎಲ್ಲಾ
ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.
ಪ್ರತಿಗ್ರಾಮದಲ್ಲಿ ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಇದೇ ರೀತಿ ಸ್ಪಂದಿಸಿದರೆ ಪ್ರತಿ
ಹಳ್ಳಿಗಳು ಪ್ರಗತಿ ಸಾಧಿಸುತ್ತದೆ.
ಚಳ್ಳಕೆರೆ ತಹಸಿಲ್ದಾರ್ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಶೇಕಡ 100ರಷ್ಟು
ಸಾಧಿಸಿದ್ದಾರೆ. ರಾಮರಾಜ್ಯದ ಕನಸು ಈಡೇರುತ್ತದೆ. ಗ್ರಾಮದಲ್ಲಿ ಇದುವರೆಗೂ ಸರ್ಕಾರ ಬಸ್ಸುಗಳ ಸೇವೆ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಹೇಳಿದ್ದರು, ಇದೀಗ ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ
ಸಾರಿಗೆ ಸೌಲಭ್ಯ ದೊರೆತಿದೆ. ಗ್ರಾಮದಲ್ಲಿ ಎರಡು ಬಸ್ ಗಳಿಗೆ ಚಾಲನೆ ನೀಡಿದ್ದೇವೆ. ಗ್ರಾಮದ ಸರ್ಕಾರಿ ಶಾಲೆ
ಶಿಥಿಲವಾಗಿದೆ, ಜೊತೆಗೆ ಆಂಗ್ಲ ಮಾಧ್ಯಮ ಶಾಲೆಗೆ ಅನುಮತಿ ದೊರೆತಿದೆ. ಇದಕ್ಕಾಗಿ ಅಗತ್ಯವಾದ ಕೊಠಡಿಗಳಿಗೆ ಮನವಿ ಸಲ್ಲಿಸಲಾಗಿದೆ, ಇದನ್ನು ಶಿಕ್ಷಣ ಇಲಾಖೆ ಜೊತೆಗೆ ಪರಿಶೀಲಿಸಲಾಗುವುದು ಎಂದರು.
ತಹಸಿಲ್ದಾರ್ ಎನ್ ರಘುಮೂರ್ತಿ ಮಾತನಾಡಿ ಗ್ರಾಮದಲ್ಲಿ 1173 ಜನರಿಗೆ
ಎರಡು ವ್ಯಾಕ್ಸಿನ್ ಹಾಕಲಾಗಿದೆ. ಪೌತಿ ಖಾತೆ, ಪೋಡಿ ಪ್ರಕರಣಗಳು, ಆರ್
ಟಿಸಿ, ಪಿ.ಎಂ.ಕಿಸಾನ್ , ಆಧಾರ್ ಸೀಡಿಂಗ್, ಸೇರಿ ಎಲ್ಲಾ ಪ್ರಕರಣಗಳನ್ನು ಶೂನ್ಯ ಪ್ರಮಾಣಕ್ಕೆ ಇಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಸ್ವಾಮಿ, ಉಪಾಧ್ಯಕ್ಷೆ ರಾಧಾ, ಪಿಡಿಓ ಶಶಿಕಲಾ ಗ್ರಾಮ ಪಂಚಾಯತಿ ಸದಸ್ಯ ಕೆ.ಜಿ. ತಿಪ್ಪೇಸ್ವಾಮಿ, ಕೋಲಮ್ಮನಹಳ್ಳಿ ಪಿತಾಂಬರ್, ರೇವಣ್ಣ,
ಸದಾಶಿವಯ್ಯ, ತಿಪ್ಪೇಸ್ವಾಮಿ,
ಮತ್ತಿತರರಿದ್ದರು.
Labels:
Chitradurga
Subscribe to:
Post Comments (Atom)
No comments:
Post a Comment